ಚಿಕ್ಕಮಗಳೂರಿನಲ್ಲಿ ಸಂಸದರ ನೂತನ ಕಛೇರಿ ಉದ್ಘಾಟನೆ!
* ಚಿಕ್ಕಮಗಳೂರಿನ ನಗರಸಭೆ ಆವರಣದಲ್ಲಿ ಸಂಸದರ ನೂತನ ಕಛೇರಿ
* ಸಂಸದ ಕೋಟ ಶ್ರೀನಿವಾಸ ಪೂಜಾರಿ,ಸಿ.ಟಿ ರವಿ,ಭೋಜೇಗೌಡ ಭಾಗಿ
* ಶೃಂಗೇರಿ ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ
NAMMUR EXPRESS NEWS
ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರ ಚಿಕ್ಕಮಗಳೂರಿನ ನೂತನ ಕಛೇರಿಯನ್ನು ಶುಕ್ರವಾರ ಚಿಕ್ಕಮಗಳೂರಿನ ನಗರಸಭೆ ಆವರಣದಲ್ಲಿ ಉದ್ಘಾಟಿಸಲಾಯಿತು.
ನೂತನ ಕಛೇರಿಯ ಉದ್ಘಾಟನೆ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ,ಇನ್ನೊಬ್ಬ ಸದಸ್ಯರಾದ ಎಸ್.ಎಲ್ ಭೋಜೇಗೌಡ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಉಳಿದಂತೆ ಬಿಜೆಪಿ ಜಿಲ್ಲಾಧ್ಯಕ್ಷರಾದ ದೇವರಾಜ್ ಶೆಟ್ಟಿ, ನಗರಸಭೆಯ ಅಧ್ಯಕ್ಷರಾದ ಸುಜಾತ, ಉಪಾಧ್ಯಕ್ಷರಾದ ಅನುಮಧುಕರ್ ಹಿರಿಯ ಮುಖಂಡರಾದ ಕೋಟೆ ರಂಗಣ್ಣ, ರಾಜ್ಯ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳು ರಾಜಪ್ಪ, ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಕಲ್ಮುರಡಪ್ಪ ಸೇರಿದಂತೆ ಎಲ್ಲಾ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.
ಶೃಂಗೇರಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ
ಶೃಂಗೇರಿ: ಶೃಂಗೇರಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ರಾಧಿಕಾ ಎಸ್ ರವರು ಆಯ್ಕೆಯಾಗಿದ್ದಾರೆ. ಇವರಿಗೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ವೇಣುಗೋಪಾಲ್,ಉಪಾಧ್ಯಕ್ಷ ಪ್ರಕಾಶ್,ಮಾಜಿ ಅಧ್ಯಕ್ಷ ಹರೀಶ್ ವಿ.ಶೆಟ್ಟಿ ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದರು.