ಮಲೆನಾಡಲ್ಲಿ ನಿಲ್ಲದ ಅಕ್ರಮ ಗೋ ಸಾಗಾಟ!
– ಆಟೋದಲ್ಲಿ ಸಾಗಿಸುತ್ತಿದ ಗೋಮಾಂಸ ವಶ,3 ಗೋವುಗಳ ರಕ್ಷಣೆ
– ಮೂಡಿಗೆರೆ ಬಜರಂಗದಳ ಕಾರ್ಯಕರ್ತರು, ಪೊಲೀಸರ ಕಾರ್ಯಾಚರಣೆ
NAMMUR EXPRESS NEWS
ಮೂಡಿಗೆರೆ: ಬಜರಂಗದಳ ಕಾರ್ಯಕರ್ತರು ಹಾಗೂ ಪೋಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋ ಮಾಂಸ ಹಾಗೂ ಗೋವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿ.22 ರಾತ್ರಿ ಬೇಲೂರು ಭಾಗದಿಂದ ಆಟೋವೊಂದರಲ್ಲಿ ಸಾಗಿಸುತ್ತಿದ್ದ ಸುಮಾರು 53 ಕೆ.ಜಿ ಗೋ ಮಾಂಸವನ್ನು ವಶಪಡಿಸಿಕೊಂಡಿದು ಪಿಕಪ್ ವಾಹನವೊಂದರಲ್ಲಿ ಸಾಗಿಸುತ್ತಿದ್ದ 3 ಗೋವುಗಳನ್ನು ಗೋಣಿಬೀಡು ಎಂಬಲ್ಲಿ ವಶಪಡಿಸಿಕೊಳ್ಳಲಾಗಿದೆ. ಗೋಣಿಬೀಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಒಂದು ಆಟೋ,ಒಂದು ಪಿಕಪ್ ಸೇರಿದಂತೆ ನಾಲ್ಕು ಜನರನ್ನು ವಶಕ್ಕೆ ಪಡೆಯಲಾಗಿದೆ. ದಿನೇ ದಿನೇ ಈ ಭಾಗದಲ್ಲಿ ಅಕ್ರಮ ಗೋಸಾಗಾಟ ಹೆಚ್ಚಾಗಿದ್ದು ಇದನ್ನು ತಡೆಯುವಂತೆ ಬಜರಂಗದಳ ಹಲವು ಬಾರಿ ಪೋಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ.