ಕಾಫಿ ನಾಡಲ್ಲಿ ಗಣರಾಜ್ಯೋತ್ಸವ ಸಂಭ್ರಮ!
– ಎಲ್ಲಾ ತಾಲೂಕು ಕೇಂದ್ರ ಸೇರಿದಂತೆ,ಹಲವು ಕಡೆ ಧ್ವಜಾರೋಹಣ
– ಎಲ್ಲೆಡೆ ಮೊಳಗಿದ ರಾಷ್ಟ್ರ ಭಕ್ತಿ,ಜೈ ಹಿಂದ್
NAMMUR EXPRESS NEWS
ಚಿಕ್ಕಮಗಳೂರು: ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ 76 ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ ಜಾರ್ಜ್ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಶಾಸಕ ಎಚ್.ಡಿ ತಮ್ಮಯ್ಯ,ಪರಿಷತ್ ಸದಸ್ಯ ಸಿ.ಟಿ ರವಿ,ಎಂ.ಎಲ್.ಸಿ ಭೋಜೇಗೌಡ, ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಸೇರಿದಂತೆ ಜಿಲ್ಲಾಧಿಕಾರಿ,ಪೋಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು. ಪೋಲೀಸ್ ಇಲಾಖೆ,ಹೋಂ ಗಾರ್ಡ್ರವರ ಪಥ ಸಂಚಲನ,ಶಾಲಾ ಕಾಲೇಜು ಮಕ್ಕಳ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣರೋಜ್ಯೋತ್ಸವದ ಸಂಭ್ರವನ್ನು ಹೆಚ್ಚಿಸಿದವು.
ಮೂಡಿಗೆರೆಯಲ್ಲಿ 7 ಜನ ಸಾಧಕರಿಗೆ ಸನ್ಮಾನ
ಮೂಡಿಗೆರೆ: ತಾಲೂಕಿನಾದ್ಯಂತ ಇಂದು ಅದ್ದೂರಿ 76ನೇ ಗಣರಾಜ್ಯೋತ್ಸವ ಜರುಗಿತು. ಶಾಸಕಿ ನಯನ ಮೋಟಮ್ಮನವರ ಮಾರ್ಗದರ್ಶನದಂತೆ ರಾಷ್ಟ್ರೀಯ ಹಬ್ಬದ ಅದ್ಯಕ್ಷರಾದ ತಹಸಿಲ್ದಾರ್ ರಾಜಶೇಖರ ಮೂರ್ತೀಯವರ ನಿರ್ದೆಶನದಂತೆ ಕಾರ್ಯಕ್ರಮ ನಡೆಯಿತು.ಪೊಲೀಸ್ ಇಲಾಖೆಯ ಪಥ ಸಂಚಲನ,ಶಾಲ ಮಕ್ಕಳ ಪಥ ಸಂಚಲನ, ನೃತ್ಯಗಳು ಎಲ್ಲರ ಗಮನಸೆಳೆದವು. 7 ಜನ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಮಹನಿಯರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತರಾದ ತನು ಕೊಟ್ಟಿಗೆಹಾರ,ಕಲಾ ಕ್ಷೇತ್ರದಲ್ಲಿ ಶಿಕ್ಷಕ ವಸಂತಹಾರಗೂಡು,ಶಿಕ್ಷಕರಾದ ದಿನೇಶ್,ಕಲಾ ಕ್ಷೇತ್ರದ ರಮೇಶ್ ಯಾದವ್,ಶರಣ್ಯ ರಾಜ್ಯಮಟ್ಟದ ಕಬ್ಬಡ್ಡಿ ಆಟಗಾರ್ತಿ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. 16 ಜನರಿಗೆ ಎರಡೆರಡು ಎಕರೆ ಜಾಗ ನಾಲ್ಕು ಕುಂಟೆ ನಿವೇಶನಕ್ಕೆ ಹಕ್ಕು ಪತ್ರ ವಿತರಿಸಲಾಯಿತು. 94ಸಿ ಯಲ್ಲಿ 6 ಜನರಿಗೆ ಹಕ್ಕು ಪತ್ರ ವಿತರಿಸಲಾಯಿತು
ಕಳಸದಲ್ಲಿ ಎಲ್ಲೆಡೆ ಹಬ್ಬದ ವಾತಾವರಣ
ಕಳಸ: ತಾಲೂಕಿನಾದ್ಯಂತ ಅತ್ಯಂತ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ತಾಲೂಕಿನ ತಾಲೂಕು ಕಛೇರಿ,ಸಮುದಾಯ ಆರೋಗ್ಯ ಕೇಂದ್ರ,ಪೋಲೀಸ್ ಠಾಣೆ ಹಾಗೂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಶೃಂಗೇರಿಯಲ್ಲಿ ಗಣ ರಾಜ್ಯೋತ್ಸವದ ರಂಗು
ಶೃಂಗೇರಿ: ತಾಲೂಕಿನ ಪಟ್ಟಣ ಪಂಚಾಯ್ತಿಯಲ್ಲಿ ಧ್ವಜಾರೋಹಣ ನೆರವೇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥಸಂಚಲನ ನೆರವೇರಿತು.ತಾಲೂಕಿನ ಎಲ್ಲಾ ಸರ್ಕಾರಿ ಕಛೇರಿ,ಶಾಲಾ ಕಾಲೇಜುಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಿಹಿ ಹಂಚಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಕೊಪ್ಪದಲ್ಲಿ ಶಾಸಕ ರಾಜೇಗೌಡ ಧ್ವಜಾರೋಹಣ
ಕೊಪ್ಪ: ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಟಿ.ಡಿ ರಾಜೇಗೌಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪೋಲೀಸ್ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಪಥಸಂಚಲನ ವೀಕ್ಷಿಸಿದರು.
ಎನ್.ಆರ್ ಪುರದಲ್ಲಿ ತ್ರಿವರ್ಣ ಧ್ವಜ ಹಾರಾಟ
ಎನ್.ಆರ್ ಪುರ: ತಾಲೂಕು ಕ್ರೀಡಾಂಗಣದಲ್ಲಿ ತಹಶೀಲ್ದಾರರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಆಚರಿಸಿದರು. ತಾಲೂಕಿನಾದ್ಯಂತ ಶಾಲಾ ಕಾಲೇಜು,ಸರ್ಕಾರಿ ಕಛೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಕಡೂರು ಹಾಗೂ ತರೀಕೆರೆಯಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಕ್ಷೇತ್ರದ ಶಾಸಕರಾದ ಶ್ರೀನಿವಾಸ ಹಾಗೂ ಆನಂದ್ ಕೆ.ಎಸ್ ರವರುಗಳು ಧ್ವಜಾರೋಹಣ ನೆರವೇರಿಸಿದರು. ಚಿಕ್ಕಮಗಳೂರಿನ ಜಿಜೆಪಿ ಕಛೇರಿ ಪಾಂಚಜನ್ಯದಲ್ಲಿ ಸಿ.ಟಿ ರವಿ ಧ್ವಜರೋಹಣ ನೆರವೇರಿಸಿದರು ಪ್ರಮುಖರು,ಕಾರ್ಯಕರ್ತರು ಹಾಜರಿದ್ದರು.