Categories
ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್
– ಮತ್ತೋರ್ವ ನಕ್ಸಲ್ ಸರ್ಕಾರದ ಮುಂದೆ ಶರಣು!?
– ಹೊಸನಗರ : ಅತಿಯಾದ ರಕ್ತಸ್ರಾವ: ಗರ್ಭಿಣಿ ಸಾವು
– ಶಿವಮೊಗ್ಗ : ಕೊಟ್ಟಿಗೆಯಲ್ಲಿ ಕಟ್ಟಿದ ಕರು ಮೇಲೆ‌ ಚಿರತೆ ದಾಳಿ
– ಶಿವಮೊಗ್ಗ : ಫೈನಾನ್ಸ್ ಕಿರುಕುಳ: ಆಟೋ ಚಾಲಕ ಆತ್ಮಹತ್ಯೆ ಯತ್ನ
– ಶಿವಮೊಗ್ಗ : ಸಕ್ರಬೈಲಿನಲ್ಲಿ ಆನೆಯೊಂದು ಮಾವುತನನ್ನ ಕೆಡವಿದ ಪರಿಣಾಮ ತಲೆ ಹಾಗೂ ಕೈಗೆ ಅತಿಯಾದ ಹೊಡೆತ

NAMMUR EXPRESS NEWS
ಚಿಕ್ಕಮಗಳೂರು:
ಜಿಲ್ಲೆಯ ಕಾಡಿನ ತಂಡದಿಂದ ಬೇರ್ಪಟ್ಟು ತಪ್ಪಿಸಿಕೊಂಡಿದ್ದ ಮತ್ತೋರ್ವ ನಕ್ಸಲ್ ಶರಣಾಗತಿಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಆತ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ಆತ ಸಂಪರ್ಕಿಸಿದ್ದಾನೆ ಎಂದು ಅರ್ಹ ಮೂಲಗಳು ತಿಳಿಸಿವೆ. ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ನಕ್ಸಲ್ ರವೀಂದ್ರ ಶರಣಾಗತಿಗೆ ಮುಂದಾಗಿರುವ ನಕ್ಸಲ್‌ ಆರೋಪಿ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ರವೀಂದ್ರ ಸಂಪರ್ಕಿಸಿದ್ದು, ಇನ್ನೊಂದು ವಾರದಲ್ಲಿ ಶರಣಾಗತಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನವರಿ 8ರಂದು ಆರು ಮಂದಿ ನಕ್ಸಲರು ಮುಖ್ಯಮಂತ್ರಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಶರಣಾಗಿದ್ದರು. ಈ ಮಧ್ಯೆ ನಕ್ಸಲ್ ರವೀಂದ್ರ ಕೇರಳ ಅಥವಾ ತಮಿಳುನಾಡಿಗೆ ಪರಾರಿಯಾಗಿರುವ ವದಂತಿ ಹಬ್ಬಿತ್ತು. ಈಗ ಸುಳ್ಳಾಗಿದ್ದು, ಮುಂದಿನ ವಾರ ಸರ್ಕಾರದ ಮುಂದೆ ಶರಣಾಗುವ ಸಂಭವವಿದೆ.

– ಹೊಸನಗರ : ಅತಿಯಾದ ರಕ್ತಸ್ರಾವದಿಂದ ಒಂದುವರೆ ತಿಂಗಳ ಗರ್ಭಿಣಿ ಸಾವು

ಹೊಸನಗರ : ಒಂದುವರೆ ತಿಂಗಳು ಗರ್ಭಿಣಿಗೆ
ಗರ್ಭಪಾತವಾಗಿ ಅತಿಯಾದ ರಕ್ತಸ್ರಾವವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಗರ್ಭಿಣಿಯರಿಗೂ ಸೂಕ್ತ ಚಿಕಿತ್ಸೆ ಇಲ್ಲವೆಂಬದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೊಸನಗರ ತಾಲೂಕಿನ ದುಬಾರತಟ್ಟಿ ಗ್ರಾಮದಲ್ಲಿ ಶಿಕ್ಷಕಿಯಾಗಿದ್ದ ಅಶ್ವಿನಿ ಕೆ.ಆರ್ ಎಂಬುವರು ಒಂದುವರೆ ವರ್ಷದ ಹಿಂದೆ ಪ್ರಕಾಶ್ ಎಂಬುವರ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಪ್ರಕಾಶರವರು ಕೋಳಿ ಅಂಗಡಿ ನಡೆಸಿಕೊಂಡಿದ್ದರು. ಜ.24 ರಂದು ಅಶ್ವಿನಿಯು ಗರ್ಭಿಣಿಯಾಗಿರುವುದು ತವರು ಮನೆಗೆ ತಿಳಿಸಿದ್ದರು. ಆದರೆ ಜ.26 ರಂದು ರಕ್ತಸ್ರಾವವಾಗಿದ್ದರಿಂದ ಸಾಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಮತ್ತೆ ಸಂಜೆ ರಕ್ತಸ್ರಾವ ಹೆಚ್ಚಾದ ಪರಿಣಾಮ ಅವರನ್ನ ಸಾಗರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಖಾಸಗಿ ಆಸ್ಪತ್ರೆಗೆ ಕರೆತರುವಾಗಲೆ ಶಿಕ್ಷಕಿ ಸಾವನ್ನಪ್ಪಿದ್ದಾಳೆ. ಇತ್ತೀಚೆಗೆ ಬಾಣಂತಿ ಸಾವು ಸಂಚಲನ ಮೂಡಿಸಿತ್ತು. ಈಗ ಗರ್ಭಿಣಿಯರನ್ನೂ ಉಳಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.

– ಶಿವಮೊಗ್ಗ : ಕೊಟ್ಟಿಗೆಯಲ್ಲಿ ಕಟ್ಟಿದ ಕರು ಮೇಲೆ‌ ಚಿರತೆ ದಾಳಿ

ಶಿವಮೊಗ್ಗ : ಕೊಟ್ಟಿಗೆಯಲ್ಲಿ ಕಟ್ಟಿದ ಕರು ಮೇಲೆ‌ ಚಿರತೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ತಮ್ಮಡಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಲುಮೆಜಡ್ಡಿನ ರುಕ್ಮಿಣಮ್ಮನವರ ಮನೆಯಲ್ಲಿ ನಡೆದಿದೆ. ಕೊಟ್ಟಿಗೆಯಲ್ಲಿ‌ ಕಟ್ಟಿದ್ದ ಕರುವಿನ ಮೇಲೆ‌ ಏಕಾಏಕಿ ದಾಳಿ‌ ನಡೆಸಿದ್ದು, ಕರು ಅರಚಿಕೊಂಡಾಗ ಎದ್ದು ಲೈಟ್ ಹಾಕಿದಾಗ ಚಿರತೆ ಕರು ಬಿಟ್ಟು ಪರಾರಿಯಾಗಿದೆ. ಇದರಿಂದಾಗಿ ಕರುವಿನ ಮುಖಕ್ಕೆ ತೀವ್ರ ಗಾಯವಾಗಿದೆ. ಕರುವಿಗೆ ಚಿಕಿತ್ಸೆ ನೀಡಲಾಗಿದೆ. ಎರಡು ವಾರದ ಹಿಂದೆ ಪಕ್ಕದ ಊರು‌ ಗುಬ್ಬಿಗದಲ್ಲಿ‌ ಚಿರತೆ ನಾಯಿಯನ್ನು ಹೊತ್ತುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಿರಂತರವಾಗಿ ನಾಯಿಗಳನ್ನು ಹೊತ್ತೊಯ್ಯುತ್ತಿರುವ ಚಿರತೆ ಇದೀಗ ಕೊಟ್ಟಿಗೆ ಒಳಗೆ ದಾಳಿ ನಡೆಸಿ ಹಸುಗಳನ್ನು ಹೊತ್ತೊಯ್ಯಲು ಆರಂಭಿಸಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

– ಶಿವಮೊಗ್ಗ : ಫೈನಾನ್ಸ್ ಗಳ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಾಖಲು

ಶಿವಮೊಗ್ಗ : ಫೈನಾನ್ಸ್ ಗಳ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.‌ ಬಜಾಜ್ ಮತ್ತು ಟಿವಿಎಸ್ ಫೈನಾನ್ಸ್ ನಿಂದ ಸಾಲ ಪಡೆದ ಆಟೋ ಚಾಲಕ ವಿದ್ಯಾನಗರದ ರೈಲ್ವೆ ಗೇಟ್ ಬಳಿ ವಿಷ ಸೇವಿಸಿ ಮಲಗಿದ್ದವರು. ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜಾಜ್ ನಲ್ಲಿ 1.40 ಸಾಲ ಪಡೆದಿದ್ದರು. ಇದಕ್ಕೆ ತಿಂಗಳು 8.031 ಕಂತು ಕಟ್ಟುತ್ತಿರುವುದಾಗಿ.‌ ಒಂದು ವರ್ಷ ತೀರಿಸಿರುವುದಾಗಿ ವಿಷ ಸೇವಿಸಿದ ಚಾಲಕ ವಿವರಿಸಿದ್ದಾರೆ ಮತ್ತು ಟಿವಿಎಸ್ ಫೈನಾನ್ಸ್ ನಲ್ಲಿ 1.55 ಲಕ್ಷ ಸಾಲ ಮಾಡಿದ್ದು. 25 ಕಂತು ಹಣ ತುಂಬಿದ್ದಾರೆ. ಆದರೂ ಫೈನಾನ್ಸ್ ನವರು ಸೋಮವಾರ ಏಳು ಗಂಟೆಗೆ ಬಂದು ಮನೆ ಕದತಟ್ಟುತ್ತಾರೆ ಎಂದು ಆಟೋ ಚಾಲಕ ಆರೋಪಿಸಿದ್ದಾರೆ. ಈ ತಿಂಗಳು ಕಟ್ಟಿಲ್ಲ.‌ ಹಾಗಾಗಿ ಮನೆಗೆ ಬಂದು ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾರೆ. ಪುರಲೆ ನಿವಾಸಿ ನಾಗೇಶ (35) ಆಟೋ ಡ್ರೈವರ್ ಆಗಿದ್ದರು. ಚಾಲಕರಿಗೆ ಎರಡು ಹೆಣ್ಣುಮಕ್ಕಳಿದ್ದಾರೆ. ನಿನ್ನೆ ಸಂಜೆ ಟಾರ್ಚರ್ ತಡೆಯಲಾಗದೆ ಚಿಕ್ಕಲ್ ಫ್ಲೈಓವರ್ ಕೆಳಗೆ ವಿಷ ಸೇವಿಸಿ ಮಲಗಿದ್ದ ನಾಗೇಶ್ ರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಹೆಂಡತಿ ಹೆರಿಗೆ ವೇಳೆ ನಾಗೇಶ್ ಸಾಲ ಮಾಡಿದ್ದರು. ಎರಡೂ ಫೈನಾನ್ಸ್ ಗೆ ಒಟ್ಟು 27 ಕಂತು ತುಂಬಿದ್ದರು. ಈ ತಿಂಗಳು ಸಾಲ ಕಟ್ಟಲು ಸಾಧ್ಯವಾಗಿಲ್ಲ. ಮನೆಗೆ ಯಾವ ಸಮಯದಲ್ಲಿ ಫೈನಾನ್ಸ್ ಅವರು ಕದತಟ್ಟುತ್ತಾರೋ ಗೊತ್ತಿಲ್ಲ ಎಂಬ ಭಯಕ್ಕೆ ನಾಗೇಶ್ ಹೆದರಿ ವಿಷ ಸೇವಿಸಿದ್ದಾರೆ.

– ಶಿವಮೊಗ್ಗ : ಸಕ್ರೆ ಬೈಲಿನಲ್ಲಿ ಆನೆಯೊಂದು ಮಾವುತನನ್ನ ಕೆಡವಿದ ಪರಿಣಾಮ ತಲೆ ಹಾಗೂ ಕೈ ಗೆ ಅತಿಯಾದ ಹೊಡೆತ

ಶಿವಮೊಗ್ಗ : ಸಕ್ರೆ ಬೈಲಿನಲ್ಲಿ ಆನೆಯೊಂದು ಮಾವುತನನ್ನ ಕೆಡವಿದೆ. ಮಾವುತ ಮೊಹಮದ್ ಗೌಸ್ ಗೆ ತಲೆಗೆ ಹೊಡೆತಬಿದ್ದಿದ್ದು ಎರಡು ಮೂರು ಸ್ಟಿಚ್ ಹಾಕಲಾಗಿದೆ. ಎಡ ಕೈ ಮುರಿದಿದೆ. ಆನೆ ಬಿಡಾರದಲ್ಲಿ ಆನೆಯೊಂದು ಮದವೇರಿದ ಕಾರಣ ಮಾವುತನನ್ನ ಕೆಡವಿದೆ ಎನ್ನಲಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಈ ಆನೆಗೆ ಮದವೇರಿರುವುದು ಅಲ್ಲೆಗಳೆದಿದ್ದು ಮಾವುತ ಮೇಲಿಂದ ಬಿದ್ದಿರುವುದರಿಂದ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸಕ್ರೆಬೈಲಿನಲ್ಲಿ ಖಾಯಂ ಕೆಲಸ ಮಾಡುತ್ತಿದ್ದ ಗೌಸ್(38) 21 ವರ್ಷದಿಂದ ಮಾವುತರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆಲೆ 14 ವರ್ಷದ ಆನೆಯಾಗಿದ್ದು. ಆಲೆಯನ್ನ ನದಿಗೆ ಕರೆದೊಯ್ಯುವಾಗ ಮಾವುತ ನನ್ನ ಕೆಡವಿದೆ ಎಂದು ಹೇಳಲಾಗುತ್ತಿದೆ. ಆಲೆ ಆನೆ ನೇತ್ರಾವತಿಯ ಮರಿಯಾಗಿದೆ. ಆಲೆಯನ್ನ ನೀರಿಗೆ ಕರೆದೊಯ್ಯುವಾಗ ಸಾರ್ವಜನಿಕರೂ ಇದ್ದರು. ಆದರೆ ಸಾರ್ವಜನಿಕರಿಗೆ ಪೆಟ್ಟಾಗಿರುವ ಬಗ್ಗೆ ಮಾಹಿತಿ ಇಲ್ಲ. 15 ದಿನಗಳ ಹಿಂದೆ ಆಲೆಗೆ ಮದ ಬಂದಿದೆ ಎನ್ನಲಾಗಿದೆ. ಆಲೆಗೆ ಮದ ಬಂದಿದ್ದರೂ ಕ್ಯಾಂಪ್ ಗೆ ಕರೆತಂದಿರುವ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.