Categories
ಚಿಕ್ಕಮಗಳೂರು

ಶೃಂಗೇರಿ ಜೆಸಿಐನಿಂದ ಫ್ರೀಡಂ ಫೆಸ್ಟ್!

ಶೃಂಗೇರಿ ಜೆಸಿಐನಿಂದ ಫ್ರೀಡಂ ಫೆಸ್ಟ್!
* ಗಣರಾಜ್ಯೋತ್ಸವದ ಪ್ರಯುಕ್ತ ತಾಲೂಕಿನಾದ್ಯಂತ ಕಾರ್ಯಕ್ರಮ
* ಶಾಲಾ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳೆಸುವ ಉದ್ದೇಶ

NAMMUR EXPRESS NEWS
ಶೃಂಗೇರಿ: 76 ನೇ ಗಣರಾಜ್ಯೋತ್ಸವದ ಪ್ರಯುಕ್ತ ತಾಲೂಕಿನ ಜೆ.ಸಿ.ಐ ಘಟಕದ ವತಿಯಿಂದ ಶಾಲಾ ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸುವ ಉದ್ದೇಶದಿಂದ “ಫ್ರೀಡಂ ಫೆಸ್ಟ್” ಎಂಬ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಆಯೋಜಿಸಿದ್ದು ಮಾದರಿ ಕಾರ್ಯಕ್ರಮವಾಗಿ ಹೊರ ಹೊಮ್ಮಿತು. ಜನವರಿ 22 ರಿಂದ 26ರವರೆಗೆ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ,ಮಾದರಿ ತಯಾರಿಕೆ,ದೇಶ ಭಕ್ತಿ ಗೀತೆ ಗಾಯನ,ಕ್ರಾಫ್ಟ್‌ಗಳ ತಯಾರಿ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶೃಂಗೇರಿ ತಾಲೂಕು ಅಧ್ಯಕ್ಷರಾದ ಜೆ.ಸಿ.ಐ ಅಶೋಕ್‌ರವರ ನೇತೃತ್ವದಲ್ಲಿ ತಾಲೂಕಿನ ಗಂಡಘಟ್ಟ,ಮೆಣಸೆ,ಸರ್ಕಾರಿ ಪದವಿ ಪೂರ್ವ ಕಾಲೇಜು ಶೃಂಗೇರಿ( ಗುಡ್ಡದ ಹೈಸ್ಕೂಲ್), ಹೊಳೆಕೊಪ್ಪ,ಬೇಗಾರ್,ವಿದ್ಯಾರಣ್ಯಪುರ,ಬಿಜಿಎಸ್ ಶಿಕ್ಷಣ ಸಂಸ್ಥೆ,ಶೃಂಗೇರಿ ಸೇರಿದಂತೆ ಹಲವು ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳಿಂದ ಆಕರ್ಷಕವಾದ ಮಾದರಿಗಳು,ಚಿತ್ರ‌ಗಳು,ಕ್ರಾಫ್ಟ್‌ಗಳು ಸೇರಿದಂತೆ ಸುಮಧುರ ದೇಶ ಭಕ್ತಿಗೀತೆಗಳು ಮೂಡಿಬಂದವು. ಎಲ್ಲಾ ಕಾರ್ಯಕ್ರಮದಲ್ಲಿ ತಾಲೂಕಿನ ಜೆ.ಸಿ.ಐ ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.