ಶಾಲೆಗೆ ಹೊರಟ ಬಾಲಕ ನಾಪತ್ತೆ..!!?
– ಪೋಷಕರು,ಸ್ಥಳೀಯರಿಂದ ಹುಡುಕಾಟ
– ಬಾಲಕನ ಮಾಹಿತಿ ನೀಡಲು ಮನವಿ
NAMMUR EXPRESS NEWS
ಶೃಂಗೇರಿ: ಬೆಳಿಗ್ಗೆ ಶಾಲೆಗೆಂದು ತನ್ನ ಅಜ್ಜನ ಮನೆಯಿಂದ ಹೊರಟ ಬಾಲಕ ಶಾಲೆಗೂ ಬಾರದೆ ಇತ್ತ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ. ಅನುದೀಪ್ ಎಂಬ ಬಾಲಕ ನಗರದ ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ A ವಿಭಾಗದಲ್ಲಿ ಓದುತ್ತಿದ್ದು, ತಾಯಿ ರೂಪ ತಂದೆ ವೆಂಕಟೇಶ್ ಇವರ ಮಗನಾಗಿರುತ್ತಾನೆ. ಇವರ ಮನೆ ನಗರದ ಹೊರವಲಯದಲ್ಲಿರುವ ಅಕ್ರವಳ್ಳಿ ಉಳುವಳ್ಳಿಯ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ವಾಸವಿದ್ದು. ಇಂದು ಬೆಳಿಗ್ಗೆ ದೇವಸ್ಥಾನ ಗುಡ್ಡೆಯ ತನ್ನ ಅಜ್ಜನ ಮನೆಯಿಂದ ಶಾಲೆಗೆಂದು ಹೋಗಿದ್ದಾನೆ,ಆದರೆ ಶಾಲೆಗೂ ಹೋಗದೆ ನಾಪತ್ತೆಯಾಗಿದ್ದಾನೆ.
ಎಲ್ಲಾದರೂ ಬಾಲಕನ ಸುಳಿವು ಸಿಕ್ಕಲ್ಲಿ
7019726619 / 9448579521
ಈ ನಂಬರ್ಗೆ ತಿಳಿಸಲು ಪೋಷಕರು ಮನವಿ ಮಾಡಿದ್ದಾರೆ.