ಹೊಸದುರ್ಗ ಸ್ವಾತಂತ್ರ್ಯೋತ್ಸವದಲ್ಲಿ ಪ್ರಕೃತಿ ಉಳಿಸಲು ಪಣ
– ಮನುಷ್ಯ ಪ್ರಕೃತಿಯ ವಿರುದ್ಧ ಹೋಗದೆ, ಅದನ್ನು ಉಳಿಸುವ ಕಾರ್ಯ ಮಾಡೋಣ: ಶಾಸಕ ಬಿ.ಜಿ. ಗೋವಿಂದಪ್ಪ ಕರೆ
– ಸದ್ಗುರು ಪ್ರದೀಪ್ ಸೇರಿ ಹಲವು ಸಾಧಕರಿಗೆ ಸನ್ಮಾನದ ಗೌರವ
NAMMUR EXPRESS NEWS
ಹೊಸದುರ್ಗ: ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯರಿಗೂ ಸಡಗರ ಸಂಭ್ರಮದ ದಿನವಾಗಿದೆ. ಈ ಬಾರಿ ರಾಜ್ಯದ್ಯಂತ ಉತ್ತಮ ಮಳೆಯಾಗಿದ್ದು, ಹಳ್ಳ ಕೊಳ್ಳ ನದಿಗಳು ಮೈದುಂಬಿ ಜಲಾಶಯಗಳು ಭರ್ತಿಯಾಗಿ ಹರಿಯುತ್ತಿವೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮನುಷ್ಯ ಪ್ರಕೃತಿಯ ವಿರುದ್ಧ ಹೋಗದೆ, ಅದನ್ನು ಉಳಿಸಿ ಬೆಳೆಸುವ ಕಾರ್ಯಮಾಡಬೇಕು. ಸ್ವಾತಂತ್ರ್ಯ ದಿನದಂದು ಪ್ರಕೃತಿ ಪ್ರೇಮಿಗಳಾಗಲು ಸಂಕಲ್ಪ ಮಾಡೋಣ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಸಲಹೆ ನೀಡಿದರು.
ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ’78 ನೇ ಸ್ವಾತಂತ್ರ್ಯ ದಿನಾಚರಣೆ ‘ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಾತಂತ್ರ್ಯೋತ್ಸವ ಒಂದು ದಿನದ ಆಚರಣೆ ಆಗಬಾರದು, ಶಾಲಾ ಕಾಲೇಜುಗಳಲ್ಲಿ ಬಿಡುವಿನ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಕ್ಕಳಿಗೆ ಪರಿಚಯ ಮಾಡಿಕೊಡಬೇಕು. ನಿತ್ಯವೂ ಹೋರಾಟಗಾರರ ಸ್ಮರಣೆ ಮಾಡಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿತು, ದೇಶಕ್ಕೆ ಸತ್ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಮೊದಲಿಗೆ ಧ್ವಜಾರೋಹಣ ನೆರವೇರಿಸಿ ತಹಶೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಬಹಳಷ್ಟು ಬಲಿಷ್ಠವಾಗಿ ಬೆಳೆಯುತ್ತಿದೆ. ಯುವಕರು ಎಲ್ಲಾ ರಂಗಗಳನ್ನು ಪ್ರಗತಿ ಸಾಧಿಸಿ, ದೇಶ ಕಟ್ಟುವ ಕೆಲಸಕ್ಕೆ ಮತ್ತಷ್ಟು ಬಳತುಂಬಬೇಕೆಂದರು.
ತಾ.ಪಂ. ಇಓ ಸುನೀಲ್ ಕುಮಾರ್, ನೌಕರ ಸಂಘದ ಅಧ್ಯಕ್ಷ ಆರ್. ಗಂಗಾಧರ್, ಕಸಾಪ ಅಧ್ಯಕ್ಷ ಬಿ.ಪಿ. ಓಂಕಾರಪ್ಪ, ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಮೈಲಾರಪ್ಪ, ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸೋಮಶೇಖರಯ್ಯ, ಪುರಸಭೆ ಸದಸ್ಯರುಗಳಾದ ದೊಡ್ಡಯ್ಯ, ಸರೋಜಮ್ಮ, ಪುಷ್ಪ, ಶ್ರೀನಿವಾಸ್, ಸ್ವಾತಿ ಪ್ರದೀಪ್, ಜಾಫರ್ ಸಾದಿಕ್, ತಾಹಿರಾಬಾನು, ಗಿರಿಜಮ್ಮ, ಶಂಕ್ರಪ್ಪ, ರಾಜೇಶ್ವರಿ ಆನಂದ್, ದಾಳಿಂಬೆ ಗಿರೀಶ್, ಹೆಚ್. ರಾಮಚಂದ್ರಪ್ಪ, ನಾಗರಾಜ್, ಬಿಇಒ ಸೈಯದ್ ಮೋಸಿನ್, ಗಣ್ಯರುಗಳಾದ ಸದಗುರು ಪ್ರದೀಪ್ ಡ.ಎಸ್, ಪೂರ್ಣಿಮಾ ಮಹೇಶ್, ಗಜೇಂದ್ರ, ರಮೇಶ್, ಹನುಮಂತಪ್ಪ, ಆಂಜನಪ್ಪ, ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿದ್ದರು. ಸದ್ಗುರು ಪ್ರದೀಪ್ ಸೇರಿ ಹಲವು ಸಾಧಕರಿಗೆ ಸನ್ಮಾನದ ಗೌರವ ನೀಡಲಾಯಿತು.