ಕಾರ್ಗಿಲ್ ವಿಜಯೋತ್ಸವ ಸವಿ ನೆನಪಿಗಾಗಿ ಮ್ಯಾರಥಾನ್!
– ಹೊಸದುರ್ಗ ವಾಕರ್ ಅಸೋಸಿಯೇಷನ್ ಆಯೋಜನೆ
-ಡೆಂಗ್ಯೂ ಮಹಾಮಾರಿ ತಡೆಯಲು ಜಾಗೃತಿ ಜಾಥಾ
NAMMUR EXPRESS NEWS
ಹೊಸದುರ್ಗ: ಕಾರ್ಗಿಲ್ ವಿಜಯೋತ್ಸವ ದೇಶದ ಹೆಮ್ಮೆಯ ಪ್ರತೀಕ, ಕಾರ್ಗಿಲ್ ವಿಜಯೋತ್ಸವದ 25 ನೇ ವರ್ಷದ ಸವಿನೆನಪು ಮತ್ತು ಹುತಾತ್ಮ ಯೋಧರ ಸ್ಮರಣೆಗಾಗಿ ಬರುವ 27 ನೇ ಶನಿವಾರದಂದು ಬೆಳಿಗ್ಗೆ 9:00 ಗಂಟೆಗೆ ಹೊಸದುರ್ಗ ವಾಕರ್ ಅಸೋಸಿಯೇಷನ್ ರವರಿಂದ ವಿನೂತನವಾಗಿ ಮ್ಯಾರಥಾನ್ ಸ್ಪರ್ಧೆ ಏರ್ಪಡಿಸಿದೆ. ಕಾರ್ಯಕ್ರಮಕ್ಕೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ನಗರದ ನಾಗರಿಕರು, ವಿವಿಧ ಸಂಘಟನೆಯ ಮುಖಂಡರು ಆಗಮಿಸಲಿದ್ದು ಅಂದು ಬೆಳಗ್ಗೆ 09 ಗಂಟೆಗೆ ಹೊಸದುರ್ಗ ಶಾಸಕರಾದ ಬಿಜಿ ಗೋವಿಂದಪ್ಪನವರು ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಲಿದ್ದು ದೇಶದಲ್ಲಿ ಕೊರೊನಾ ಮಹಾಮಾರಿಯ ರೀತಿಯಲ್ಲಿ ದೇಶದಾದ್ಯಂತ ಡೆಂಗ್ಯೂ ಮಹಾಮಾರಿ ಕಾಡುತ್ತಿದ್ದು ಇದರಿಂದ ಮುಕ್ತಿ ಹೊಂದಲು ಜಾಗೃತ ಸಂದೇಶಗಳನ್ನ ಹೊತ್ತು ಎಚ್ಚರಿಕೆಯ ಸಂದೇಶಗಳನ್ನು ಸಾರುತ್ತಾ ಡೆಂಗ್ಯೂ ಮಹಾಮಾರಿಯ ವಿರುದ್ಧದ ಸಂದೇಶಗಳ ಬಿತ್ತಿ ಪತ್ರಗಳನ್ನು ಹಿಡಿದು ವಿದ್ಯಾರ್ಥಿಗಳು ಮತ್ತು ಮುಖಂಡರು ನಗರದ ಮುಖ್ಯರಸ್ತೆಯಲ್ಲಿ ಸಾಗುವವರು ಎಂದು ಹೊಸದುರ್ಗ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಚ್ ಬಿ ಮಂಜುನಾಥ್ ತಿಳಿಸಿದ್ದಾರೆ. ನಗರದ ಎಸ್ ಎಲ್ ವಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ವಾಕರ್ ಅಸೋಸಿಯೇಷನ್ ಮತ್ತು ಲಯನ್ಸ್ ಕ್ಲಬ್ ನವರು ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಸಂಸ್ಥೆಯ ವತಿಯಿಂದ ನಗರದ ಪ್ರಜೆ ಆರೋಗ್ಯದ ದೃಷ್ಟಿಯಿಂದ ನಮ್ಮ ಸಂಸ್ಥೆಯು ನಿರಂತರವಾಗಿ ಆರೋಗ್ಯ ತಪಾಸಣೆ ಕ್ಯಾನ್ಸರ್ ತಪಾಸಣೆ ಯಂತಹ ಆರೋಗ್ಯ ಶಿಬಿರಗಳನ್ನ ಏರ್ಪಡಿಸುತ್ತಾ ಬಂದಿದ್ದು ಇಲ್ಲಿ ಮಾನವರ ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ ಎಂದರು.
ವಾಕರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ವೀರೇಂದ್ರ ಪಾಟೀಲ್ ಮಾತನಾಡಿ ಈಡಿಸ್ ಎಂಬ ಸೊಳ್ಳೆ ಮಾನವನಿಗೆ ಕಡಿಯುವುದರಿಂದ ಡೆಂಗ್ಯೂ ಮಹಾಮಾರಿ ಬರುತ್ತಿದ್ದು. ನಮ್ಮ ಮನೆಯ ಅಕ್ಕಪಕ್ಕದ ಪರಿಸರದಲ್ಲಿ ನೀರು ನಿಲ್ಲದಂತೆ ಜಾಗೃತ ವಹಿಸಬೇಕು. ಮನೆಯಲ್ಲಿ ಸೊಳ್ಳೆ ಪರದೆ ಕಡ್ಡಾಯವಾಗಿ ಬಳಸಬೇಕು, ಪ್ರತಿ ಶುಕ್ರವಾರ ಡೆಂಗ್ಯೂ ಜಾಗೃತ ಕಾರ್ಯಕ್ರಮವಿರುತ್ತದೆ ಎಂಬುವ ಸಂದೇಶಗಳನ್ನ ಈ ಮ್ಯರಥಾನ್ ಕ್ರೀಡೆಯಲ್ಲಿ ಸಾರ್ವಜನಿಕರಿಗೆ ನೀಡಲಾಗುವುದು ಎಂದರು.ಸಭೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರೇವಣ್ಣ ಕಾರ್ಯದರ್ಶಿ ಸುರೇಶ್ ಸಾಗರ್, ವಾಕರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಹರೀಶ್ ಬಾಬು, ಸದಸ್ಯರಾದ ಲಕ್ಷ್ಮಿಕಾಂತ್, ಗುರು ಸ್ಟುಡಿಯೋ ಬಬಣ್ಣ, ದೇವರಾಜ್ ಅರುಣ್ ವೆಂಕಟೇಶ್, ಅಶೋಕ್ ಹಾಗೂ ಮುಂತಾದವರಿದ್ದರು.