ಜಲಪಾತ ಸಿನಿಮಾಕ್ಕೆ ಮತ್ತೊಂದು ಪ್ರಶಸ್ತಿ ಗರಿ!
– ಬೇಗಾರು ರಮೇಶ್ ಅವರಿಗೆ ಉತ್ತಮ ಭರವಸೆಯ ನಿರ್ದೇಶಕ ವಿಶೇಷ ಪ್ರಶಸ್ತಿ
– ತೀರ್ಥಹಳ್ಳಿ ಮೂಲದ ಉದ್ಯಮಿ ರವೀಂದ್ರ ತುಂಬ್ರಮನೆ ನಿರ್ಮಾಪಕರಾಗಿರುವ ಸಿನಿಮಾ
NAMMUR EXPRESS NEWS
ಶೃಂಗೇರಿ: ಮಲೆನಾಡ ಖ್ಯಾತ ನಿರ್ದೇಶಕರಾದ ಬೇಗಾರು ರಮೇಶ್ ಉತ್ತಮ ಭರವಸೆಯ ನಿರ್ದೇಶಕ ಎಂಬ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1987ರಲ್ಲಿ ಗಿರೀಶ್ ಕಾಸರವಳ್ಳಿ ಇವರ ಜೊತೆಗೆ ಸಹಾಯಕರಾಗಿ, ಉದ್ಭವದಲ್ಲಿ ಕೋಡ್ಲು ರಾಮಕೃಷ್ಣ,ಸಂದಾನಂದ ಸುವರ್ಣ ಜೊತೆಗೆ ಕುಬಿ ಮತ್ತು ಇಯಾಲದಲ್ಲಿ ಕೆಲಸ ಮಾಡಿದ ಅನುಭವದೊಂದಿಗೆ ಧಾರಾವಾಹಿ, ಯಕ್ಷಗಾನ, ನಾಟಕ ಬಳಿಕ ಜಲಪಾತ ಸಿನಿಮಾ ನಿರ್ದೇಶಕರಾಗಿದ್ದು, ಚಿತ್ತಾರ ಅವಾರ್ಡ್ ಪಡೆದಿದೆ. ಇದೀಗ ಇದೇ ಸಿನಿಮಾಕ್ಕೆ ಚಿತ್ರ ಸಂತೆ ಫಿಲಂ ಅವಾರ್ಡ್ ಕಾರ್ಯಕ್ರಮದಲ್ಲಿ ಜಲಪಾತ ಸಿನಿಮಾದ ” ಉತ್ತಮ ಭರವಸೆಯ ನಿರ್ದೇಶಕ ” ಎಂಬ ವಿಶೇಷ ಪ್ರಶಸ್ತಿ ಸಿಕ್ಕಿದೆ. ಜಲಪಾತ ದಂಥ ಸಿನಿಮಾ ನನ್ನಲ್ಲಿ ಮಾಡಿಸಿದ ನಿರ್ಮಾಪಕ ಗೆಳೆಯ ರವೀಂದ್ರ ತುಂಬರಮನೆ ಇವರಿಗೆ ಅಪಾರ ಪ್ರೀತಿ ಗೌರವದಿಂದ ಪರಿಪೂರ್ಣ ಸಮರ್ಪಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.