ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಕಚೇರಿ ಆರಂಭ
– ಇನ್ಮೇಲೆ ಸಂಸದರ ಕಚೇರಿ ಜನರ ಸೇವೆಗೆ ಸಿದ್ಧ
– ನಮ್ಮ ಕ್ಷೇತ್ರಕ್ಕೆ ಕ್ಯಾಪ್ಟನ್ ಸಂಸದರು ಸಿಕ್ಕಿದ್ದಾರೆ: ಕಲ್ಲಡ್ಕ
– ವಿಕಸಿತ ದಕ್ಷಿಣ ಕನ್ನಡ ಮಾಡುವುದೇ ನನ್ನ ಗುರಿ: ಚೌಟ
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರ ಕಚೇರಿಯು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಉದ್ಘಾಟನೆಗೊಂಡಿದೆ. ಇನ್ಮೇಲೆ ಸಂಸದರ ಕಚೇರಿ ಜನರ ಸೇವೆಗೆ ಸಿದ್ಧವಾಗಿದೆ. ಉದ್ಘಾಟನೆ ವೇಳೆ ಮಾತನಾಡಿದ, ಆರ್ಎಸ್ಎಸ್ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್, ತುಳುನಾಡು ಹಿಂದುತ್ವದ ನಾಡು, ಈ ಸ್ಥಳದಲ್ಲಿ ನಾವು ದೈವವನ್ನು ಆರಾಧಿಸುತ್ತೇವೆ. ದೇವರ ದಯೆ ಮತ್ತು ಜನರ ಬೆಂಬಲದಿಂದ ನಮ್ಮ ಕ್ಷೇತ್ರಕ್ಕೆ ಕ್ಯಾಪ್ಟನ್ ಸಂಸದರು ಸಿಕ್ಕಿದ್ದಾರೆ. ಗಡಿಯಲ್ಲಿ ಸೈನಿಕರು ಹೇಗೆ ಕೆಲಸ ಮಾಡುತ್ತಾರೆಯೋ ಅದೇರೀತಿ ಜನರ ಹಕ್ಕುಗಳಿಗಾಗಿ ಚೌಟ ಕೆಲಸ ಮಾಡುತ್ತಾರೆ. ಆದರೆ ಸಂಸದರ ಸ್ಥಾನವು ಕೇವಲ ಕೇವಲ ಕುಳಿತುಕೊಳ್ಳುವುದು ಮಾತ್ರವಲ್ಲ ಅವರು ಪ್ರಮಾಣಿಕ ಸಂಸದರಾಗಿ ಕೆಲಸ ಮಾಡುತ್ತಾರೆ ಮತ್ತು ಶ್ರಮಿಸುತ್ತಾರೆ ಎಂದು ನಾನು ನಂಬುವುದಾಗಿ ಹೇಳಿದರು.
ವಿಕಸಿತ ದಕ್ಷಿಣ ಕನ್ನಡ ಮಾಡುವುದೇ ನನ್ನ ಗುರಿ: ಚೌಟ
ಬ್ರಿಜೇಶ್ ಚೌಟ ಮಾತನಾಡಿ, ನಾನು ಜನರ ಹಕ್ಕುಗಳಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೆ ಅವಕಾಶಗಳನ್ನು ಒದಗಿಸಲು ನಾನು ಸರ್ವಶಕ್ತನನ್ನು ಪ್ರಾರ್ಥಿಸುತ್ತೇನೆ. ಬಿಜೆಪಿ ಪಕ್ಷದ ಕಾರ್ಯಕರ್ತರ ಸಹಾಯದಿಂದ ನಾನು ಶ್ರಮಿಸುತ್ತೇನೆ. ನರೇಂದ್ರ ಮೋದಿಯವರ ವಿಕಸಿತ ಭಾರತ್ನ ಅದೇ ಕನಸಿನೊಂದಿಗೆ ನಾವು ವಿಕಸಿತ ದಕ್ಷಿಣ ಕನ್ನಡ ಮಾಡುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಜನರ ಸಮಸ್ಯೆ ಆಲಿಸಲು ಹಾಗೂ ಬಗೆಹರಿಸಲು ನಾನು ಕಚೇರಿಯಲ್ಲಿ ಕೆಲಸ ಮಾಡಲಿದ್ದೇನೆ ಎಂದರು.