NAMMUR EXPRESS NEWS
ಮುಂಬಯಿ: ಜಮೀನಿಗಾಗಿ ಅಣ್ಣ ತಮ್ಮಂದಿರೇ ಜಗಳವಾಡಿ ಕೊಳ್ಳುವ ಈ ಕಾಲದಲ್ಲಿ ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ಮಂಗಗಳ ಹೆಸರಿಗೇ 32 ಎಕ್ರೆ ಜಮೀನು ಬಿಟ್ಟುಕೊಡಲಾಗಿದೆ! ಒಸ್ಮಾನಾಬಾದ್ ಜಿಲ್ಲೆಯ ಉಪ್ಲಾ ಗ್ರಾಮದಲ್ಲಿ ಈ ರೀತಿ ಮಂಗಗಳ ಹೆಸರಿಗೆ ಜಮೀನಿದೆ. ಈ ಗ್ರಾಮದಲ್ಲಿ ಮಂಗಗಳಿಗೆ ವಿಶೇಷವಾದ ಮರ್ಯಾದೆ ಇದೆಯಂತೆ. ಪೂರ್ವಜರ ದಿಂದಲೂ ಮಂಗಗಳು ಮನೆ ಬಾಗಿಲಿಗೆ ಬಂದರೆ ಅವುಗಳಿಗೆ ಊಟ ಕೊಡುವ ಪದ್ಧತಿಯಿದೆ. ಹಾಗೆಯೇ ಊರಲ್ಲಿ ಯಾರದ್ದೇ ಮದುವೆಯಾದರೂ ಅಲ್ಲಿಮೊದಲನೇ ಉಡುಗೊರೆ ಯನ್ನು ಮಂಗಕ್ಕೆ ಕೊಡಲಾಗುತ್ತದೆಯಂತೆ.
ಈ ಊರಿನಲ್ಲಿರುವ 32 ಎಕ್ರೆ ಜಮೀನು ಊರಿನ ಮಂಗಗಳ ಹೆಸರಿನಲ್ಲಿ ನೋಂದಣಿಯಾಗಿದೆ. ಆದರೆ ಅದನ್ನು ಯಾವ ಕಾಲದಲ್ಲಿ ಯಾರು ನೋಂದಣಿ ಮಾಡಿಸಿದರು ಎನ್ನುವ ಬಗ್ಗೆ ನಮಗೂ ಮಾಹಿತಿಯಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯತ್ ಅಧ್ಯಕ್ಷರು. ಊರಿನಲ್ಲಿ ಒಟ್ಟು ಸರಿ ಸುಮಾರು 100 ಮಂಗಗಳು ಇವೆ. ಸದ್ಯ ಮಂಗಗಳ ಹೆಸರಿನಲ್ಲಿರುವ ಜಾಗವನ್ನು ಸರಕಾರ ಪ್ಲಾಂಟೇಶನ್ ಮಾಡಿದೆ.
ಈ ಗ್ರಾಮದಲ್ಲಿ ಮಂಗಗಳ ಹೆಸರಲ್ಲಿದೆ 32 ಎಕ್ರೆ ಜಮೀನು!
Related Posts
Add A Comment