ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗೆ “ಸುವರ್ಣ ಸಾಧಕರು ಪ್ರಶಸ್ತಿ”!
– ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ
– ಸಾಮಾಜಿಕ, ಶೈಕ್ಷಣಿಕ ಸೇವೆ ಗುರುತಿಸಿ ಗೌರವ
– 7 ಮಂದಿ ಸಂಸ್ಥಾಪಕರಿಂದ ಪ್ರಶಸ್ತಿ ಸ್ವೀಕಾರ
NAMMUR EXPRESS NEWS
ಬೆಂಗಳೂರು: ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಆಶ್ರಯದಲ್ಲಿ ಬೆಂಗಳೂರಲ್ಲಿ ನಡೆದ ಸುವರ್ಣ ಸಾಧಕರು-2024 ಪ್ರಶಸ್ತಿಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದರೆ ಪಾತ್ರವಾಗಿದ್ದು, ಬೆಂಗಳೂರಿನ ಶಾಂಗ್ರಿಲಾ ಹೋಟೆಲಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಕ್ರಿಯೇಟಿವ್ ಕಾಲೇಜಿನ 7 ಮಂದಿ ಸಂಸ್ಥಾಪಕರು ಅದ್ದೂರಿ ವೇದಿಕೆಯಲ್ಲಿ ಸ್ವೀಕರಿಸಿದರು.
ರಾಜ್ಯದ ವಿವಿಧ ಭಾಗದಿಂದ ಸುಮಾರು 32 ಮಂದಿ ಸಾಧಕರಿಗೆ ಈ ಬಾರಿಯ ಸುವರ್ಣ ಸಾಧಕರು 2024 ಪ್ರಶಸ್ತಿ ನೀಡಲಾಗಿದೆ.
ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ ಪ್ರಿನ್ಸಿಪಾಲರಾದ ವಿದ್ವಾನ್ ಗಣಪತಿ ಭಟ್, ಡಾ.ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ.ಕೆ, ಅಶ್ವಥ್ ಎಸ್. ಎಲ್, ವಿಮಲ್ ರಾಜ್, ಗಣಪತಿ ಕೆ. ಎಸ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಶಿಕ್ಷಣ ಸೇವೆಗೆ ಪ್ರಶಸ್ತಿಯ ಗರಿ
2020ರಲ್ಲಿ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜು ಸ್ಥಾಪಿಸಿದ್ದು ಇಂದಿನ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಹೊಸ ಕಟ್ಟಡ, ಹೊಸ ಹಾಸ್ಟೆಲ್, ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಅತ್ಯುತ್ತಮ ಸೌಲಭ್ಯ, ಪಠ್ಯ ಮತ್ತು ಶಿಕ್ಷಣ ಚಟುವಟಿಕೆ, ನೀಟ್, ಸಿಇಟಿ ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಕಂಪ್ಯೂಟರ್ ಜ್ಞಾನ, ಆನ್ಲೈನ್ ಶಿಕ್ಷಣ, ಹೊಸ ಬಗೆಯ ಕ್ರಾಶ್ ಕೋರ್ಸ್ ಸೇರಿ ಹತ್ತು ಹಲವು ವಿಶೇಷ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದು ರಾಜ್ಯದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಸುವರ್ಣ ಸಾಧಕರು ಪ್ರಶಸ್ತಿ ನೀಡಿ ಗೌರವಿಸಿದೆ.
ರಾಜಕೀಯ, ಸಿನಿಮಾ, ಮೀಡಿಯಾ ತಾರೆಯರಿಂದ ಪ್ರಶಸ್ತಿ ವಿತರಣೆ
ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್, ಖ್ಯಾತ ನಿರ್ದೇಶಕ ಪಿ. ಶೇಷಾದ್ರಿ, ನಟಿ ಚೈತ್ರಾ ಆಚಾರ್, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗ್ಡೆ, ಪ್ರಮುಖರಾದ ಅಜಿತ್ ಹನುಮಕ್ಕನವರ್, ಜೋಗಿ, ಮಲ್ಲಿಕಾರ್ಜುನಯ್ಯ ಸೇರಿ ಹಲವು ಗಣ್ಯರು ಇದ್ದರು.