ಟಾಪ್ ನ್ಯೂಸ್ ಹಾಸನ ಜಿಲ್ಲೆ
ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!
* ಅರಕಲಗೂಡಿನ ರಾಗಿಮರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ
* ಬೇಲೂರಿನಲ್ಲಿ ಮಿತಿ ಮೀರಿದ ಮೀಟರ್ ಬಡ್ಡಿ ದಂಧೆ!
* ಚಾಕೊಲೇಟ್ ಎಸೆದಿದ್ದು ಬ್ಯುಸಿನೆಸ್ ಕೆಡಿಸಲು ಪ್ಲಾನ್?!
* ಕೌಟಿಂಬಿಕ ಕಲಹ: ಕಾರಿನ ಗಾಜು ಪುಡಿಪುಡಿ ಮಾಡಿದ ಮಹಿಳೆ
NAMMUR EXPRESS NEWS
ಹಾಸನ: ಸೆ.26ರಂದು ಮಧ್ಯಾಹ್ನ ಹಲ್ಲಿ ಬಿದ್ದು ಬಿಸಿಯೂಟ ಸೇವಿಸಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಗಿಮರೂರು ಸರ್ಕಾರಿ ಪ್ರೌಢಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ನಡೆದಿದೆ.
ಕೂಡಲೇ ತಾಲೂಕಿನ ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಅರಕಲಗೂಡು ತಾಲೂಕು ಆಸ್ಪತ್ರೆಯಲ್ಲಿ ಅಸ್ವಸ್ಥ ವಿದ್ಯಾರ್ಥಿಗಳನ್ನು ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಸ್ವಸ್ಥಗೊಂಡ 8 ಮಕ್ಕಳನ್ನು ಹಾಸನ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮಧ್ಯಾಹ್ನ ಹಲ್ಲಿ ಬಿದ್ದು ಕಲುಷಿತಗೊಂಡ ಅಹಾರವನ್ನು ಸೇವಿಸಿದ ನೂರಾರು ಮಕ್ಕಳು ಏಕಾಎಕಿ ವಾಂತಿಯಿಂದ ಬಳಲಲು ಶುರುಮಾಡಿದ್ದಾರೆ. ಇದನ್ನು ಗಮನಿಸಿದ ಶಿಕ್ಷಕರು, ಕೂಡಲೇ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಇದೀಗ ಸುರಕ್ಷತಾ ಕ್ರಮ ವಹಿಸದ ಶಾಲಾ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಚಾಕೊಲೇಟ್ ಎಸೆದಿದ್ದು ಬ್ಯುಸಿನೆಸ್ ಕೆಡಿಸಲು ಪ್ಲಾನ್?!
ಬೇಲೂರು: ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದ ಮಲಸಾವರ, ಸಕಲೇಶಪುರ ಹಾಗೂ ಉದೆವಾರ ರಸ್ತೆಯ ವಿವಿದ ಸ್ಥಳಗಳಲ್ಲಿ ಬಿಸಾಡುತ್ತಿದ್ದ ವಿವಿದ ಬಗೆಯ ಚಾಕಲೇಟ್ ಗಳು ರಸ್ತೆಯಲ್ಲಿ ತಿರುಗಾಡುತ್ತಿದ್ದ ತೋಟದ ಕೂಲಿ ಕಾರ್ಮಿಕರಿಗೆ ಸಿಕ್ಕಿದ್ದು ಸಂಶಯ ಸೃಷ್ಟಿಯಾಗಿ ವಿಷಯ ಹೊರಬೀಳುತ್ತಿದ್ದಂತೆ ಎಚ್ಚೆತ್ತ ಚಾಕೋಲೆಟ್ ಕಂಪೆನಿಯ ಸಿಬ್ಬಂದಿವರ್ಗದವರು ಸ್ಥಳಕ್ಕೆ ಆಗಮಿಸಿ ಖುದ್ದು ಪರಿಶೀಲನೆ ನಡಿಸಿದ್ದಾರೆ. ಜತೆಗೆ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಕಂಪೆನಿಯ ಚಾಕೋಲೇಟ್ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಹೆಚ್ಚೆಚ್ಚು ಮಾರಾಟವಾಗುತ್ತಿದ್ದು ಇದೀಗ ನಮ್ಮ ಜಿಲ್ಲೆಯಲ್ಲೂ ಸಹಾ ಉತ್ತಮ ಮಾರುಕಟ್ಟೆ ದೊರೆತಿದೆ. ಹಾಸನ ಸೇರಿದಂತೆ ಚಿಕ್ಕಮಗಳೂರು, ಮೈಸೂರು ಮಡಿಕೇರಿ ಹಾಗು ಇನ್ನಿತರ ಜಿಲ್ಲೆಗಳಿಗೆ ನಾನು ಕಂಪೆನಿಯ ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿ ಉತ್ತಮ ಫಲಿತಾಂಶ ನೀಡಿದ್ದು ಬ್ರಾಂಡ್ ವೈಯಕ್ತಿಕವಾಗಿ ಕುಂಠಿತಗೊಳಿಸಲು ಹುನ್ನಾರ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾನೆ.
ಬೇಲೂರಿನಲ್ಲಿ ಮಿತಿ ಮೀರಿದ ಮೀಟರ್ ಬಡ್ಡಿ ದಂಧೆ!
ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಪಟ್ಟಣ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ರಾಜಾರೋಷವಾಗಿ ಯಾವುದೇ ಪರವಾನಗಿ ಪಡೆಯದೆ ಪೈನಾನ್ಸ್ ಹೆಸರಿನಲ್ಲಿ ಮೀಟರ್ ಬಡ್ಡಿ ದಂದೆ ನಡೆಸುತ್ತಿದ್ದು, ಇದರಿಂದ ಜನಸಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಮಾಡುವ ಜನರು ಬಡ್ಡಿ ದಂದೆಕೋರರ ಬಳಿ ಹಣ ಪಡೆದು ಅಧಿಕ ಬಡ್ಡಿ ಮರುಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನಗಳು ನಮ್ಮ ಮುಂದೆ ಇವೆ. ಹಾಗಾಗಿ ತಾವುಗಳು ಇದರ ಬಗ್ಗೆ ಸೂಕ್ತ ತನಿಖೆ ಮಾಡಿ ಜನಸಮಾನ್ಯರಿಗೆ ನ್ಯಾಯ ಒದಗಿಸಬೇಕಾಗಿ ಪೊಲೀಸ್ ಇಲಾಖೆಗೆ ಸ್ಥಳೀಯರು ಮನವಿ ಮಾಡಿದ್ದಾರೆ.
ಕೌಟಿಂಬಿಕ ಕಲಹ: ಕಾರಿನ ಗಾಜು ಪುಡಿಪುಡಿ ಮಾಡಿದ ಮಹಿಳೆ!
ಬೇಲೂರು: ಕೌಟಿಂಬಿಕ ಕಲಹದಿಂದ ಕಾರಿನ ಗಾಜು ಪುಡಿ ಪುಡಿ ಮಾಡಿದ ಘಟನೆ ಬೇಲೂರು ತಾಲೂಕಿನ ಸಮನ್ವಯ ಲಾಡ್ಜ್ ಬಳಿ , ಮಹಾಲಕ್ಷ್ಮಿ ಕಲ್ಯಾಣ ಮಂಟಪ ಹತ್ತಿರ ನಡೆದಿದೆ.