ಪೆನ್ ಡ್ರೈವ್ ಹಂಚಿಕೆ: ಪ್ರೀತಂ ಗೌಡ ವಿರುದ್ಧ ತನಿಖೆ ಮುಂದೂಡಿಕೆ
– ತನಿಖೆ ಮುಂದುವರೆಯಲಿ: ಅ. 24ಕ್ಕೆ ವಿಚಾರಣೆ ಮುಂದಕ್ಕೆ ಹಾಕಿದ ಹೈಕೋರ್ಟ್
– ಹೊಳೆನರಸೀಪುರ: ಪೊಲೀಸ್ ಕಟ್ಟಡದ 4ನೇ ಮಹಡಿಯಿಂದ ಜಿಗಿದ ವ್ಯಕ್ತಿ ಸಾವು: ಸಂಶಯ
– ಆಲೂರು: ಕಾರು ಬೈಕ್ ಅಪಘಾತಕ್ಕೆ ಯುವಕ ಬಲಿ!
NAMMUR EXPRESS NEWS
ಬೆಂಗಳೂರು: ‘ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ
ಲೈಂಗಿಕ ಹಗರಣದ ಆರೋಪಕ್ಕೆ ಸಂಬಂಧಿಸಿದ ಪೆನ್ ಡ್ರೈವ್ಗಳನ್ನು ಹಂಚಿಕೆ ಮಾಡಿದ ಆರೋಪದಡಿ ಮಾಜಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆ ಮುಂದುವರಿಯಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
‘ನನ್ನ ವಿರುದ್ಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ನಂತರದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ಪ್ರೀತಂ ಗೌಡ ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ಈ ಕುರಿತಂತೆ ಆದೇಶಿಸಿದ್ದಾರೆ.
ವಿಚಾರಣೆ ವೇಳೆ ಪ್ರೀತಂ ಗೌಡ ಪರ ವಕೀಲ ಸಂದೀಪ್ ಎಸ್.ಪಾಟೀಲ್, “ಅರ್ಜಿಯನ್ನು ದಸರಾ ರಜೆಯ ಬಳಿಕ ವಿಚಾರಣೆಗೆ ತೆಗೆದುಕೊಳ್ಳಬೇಕು. ನಿನ್ನೆಯಷ್ಟೇ ಪ್ರೀತಂ ಗೌಡ ಎಸ್ಐಟಿಯ ಮುಂದೆ ಹೇಳಿಕೆ ದಾಖಲಿಸಿದ್ದಾರೆ’ ಎಂದು ಮನವಿ ಮಾಡಿದರು. ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ರವಿವರ್ಮ ಕುಮಾರ್, ‘ಇದು ಡಿಜಿಟಲ್ ಅಪರಾಧ. ವಿಡಿಯೊಗಳಿಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಗೆ ಕಾಯಲಾಗುತ್ತಿದೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ತನಿಖೆ ಮುಂದುವರಿಯಬೇಕು ಮತ್ತು ಇದಕ್ಕೆ ಪ್ರೀತಂ ಗೌಡ ಸಹಕರಿಸಬೇಕು. ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ನಿಗದಿಗೊಳಿಸಲಾಗುವುದು. ಅಷ್ಟರಲ್ಲಿ ಎಫ್ಎಸ್ಎಲ್ ವರದಿ ಬರಬಹುದು. ಅಲ್ಲಿಯವರೆಗೂ ಅರ್ಜಿದಾರರಿಗೆ ಬಂಧನದಿಂದ ರಕ್ಷಣೆ ನೀಡಿರುವ ಮಧ್ಯಂತರ ಆದೇಶ ಮುಂದವರಿಯಲಿದೆ’ ಎಂದು ತಿಳಿಸಿತು. ‘ಮುಂದಿನ ವಿಚಾರಣೆ ವೇಳೆಗೆ ಪ್ರಕರಣದ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಿ’ ಎಂದು ಪ್ರಾಸಿಕ್ಯೂಷನ್ಗೆ ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿತು.
ಪೊಲೀಸ್ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದ ವ್ಯಕ್ತಿ ಸಾವು
ಹಾಸನ: ನಗರದ ಎನ್. ಆರ್. ವೃತ್ತದಲ್ಲಿರುವ ಪೊಲೀಸ್ ಸಂಕೀರ್ಣದ ನಾಲ್ಕನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೊಳೆನರಸೀಪುರ ತಾಲೂಕಿನ ದೊಡ್ಡಕಾಡ್ನೂರು ಮಲ್ಲೇನಹಳ್ಳಿ ನಿವಾಸಿ ಸುನೀಲ್ (30) ಮೃತಪಟ್ಟವರು. ಹಾಸನ ಪೊಲೀಸ್ ಉಪಾಧೀಕ್ಷಕರ ಕಚೇರಿ, ನಗರ ಸಂಕೀರ್ಣದ ಎಲ್ಲ ಕಚೇರಿಗಳಿಗೂ ಠಾಣೆ, ಗ್ರಾಮಾಂತರ ಪೊಲೀಸ್ ಹೋಗಿ ಸುತ್ತಾಡಿ ಬಂದಿರುವ ಠಾಣೆ, ಸಿಇಎನ್ ಪೊಲೀಸ್ ಆತನ ನಂತರ ಕಟ್ಟಡದ ನಾಲ್ಕನೇ ಠಾಣೆಗಳಿರುವ ಪೊಲೀಸ್ ಮಹಡಿಗೆ ಕೆಳಕ್ಕೆ ಜಿಗಿದಿದ್ದಾನೆ. ಇದರಿಂದ ತಲೆ, ಮುಖಕ್ಕೆ ಗಂಭೀರ ಗಾಯವಾಗಿ ಪೊಲೀಸರು ಆಶ್ಚರ್ಯವಾಗಿ ಗಮನಿಸಿ ಆತನನ್ನು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆತ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಆಲೂರು: ಕಾರು ಬೈಕ್ ಅಪಘಾತಕ್ಕೆ ಯುವಕ ಬಲಿ!
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ರಾಯರಕೊಪ್ಪಲು ಮಗ್ಗೆ ಸಮೀಪ ಕುಂದೂರು ಹೋಬಳಿಯ ಗಂಜಿಗೆರೆ ಪಂಚಾಯತಿ ಸಮಾಸೋಗೆ ಗ್ರಾಮದ ಸತೀಶ್ ಎಂಬುವರ ಮಗ ಹೇಮಂತ್ ( 20 ) ಕಾರು ಮತ್ತು ದ್ವಿಚಕ್ರ ವಾಹನ ಎರೆಡರ ಮಧ್ಯೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರು ಚಾಲಕ ಅಲ್ಲೇ ಕಾರು ನಿಲ್ಲಿಸಿ ಪರಾರಿ ಆಗಿ ಮುಂದಿನ ಗ್ರಾಮದಲ್ಲಿ ಸಿಕ್ಕಿದ್ದು ಆತನ ವಿಚಾರಣೆ ನಡೆಸಲಾಗಿದೆ.