ಹಾಸನದಲ್ಲಿ ಮೊಳಗಿತು ಮತ್ತೆ ರೈತ ಹೋರಾಟದ ದನಿ!
– ರೈತ ಒಡನಾಡಿಗಳ ಜೊತೆ ಸಂವಾದ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟದ ಕಥೆಯ ನಾಟಕ ಪ್ರದರ್ಶನ
– ರೈತ ಹೋರಾಟ ಏನಾಗಿದೆ? ಸರ್ಕಾರಗಳ ವಿರುದ್ಧ ಆಕ್ರೋಶ
NAMMUR EXPRESS NEWS
ಹಾಸನ: ರೈತ ಚಳುವಳಿಯ ಗರ್ಭ ಚೆನ್ನಾಗಿಯೇ ಇದೆ ಆದರೆ, ಸಂತಾನ ಅಭಿವೃದ್ಧಿ ತಡವಾಗುತ್ತಿದೆ ಎಂದು ರೈತ ಸಂಘಟನೆ ಮುಂಖಡ ಕೆ.ಟಿ.ಗಂಗಾಧರ್ ತಿಳಿಸಿದ್ದಾರೆ.
ಹಾಸನಾಂಬ ಕಲಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ ಭಾನುವಾರ ಹಮಿಕೊಂಡಿದ್ದ ರೈತ ಒಡನಾಡಿಗಳ ಜೊತೆ ಸಂವಾದ ಹಾಗು ಡೈರೆಕ್ಟ್ ಆಕ್ಷನ್ ಎಂಬ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟದ ಕಥೆಯ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
1980ರ ರೈತರ ಚಳುವಳಿ ನವಲಗುಂದ, ನರಗುಂದ, ಗಜೇಂದ್ರಗಡ, ನಿಪ್ಪಾಣಿ ಸೇರಿ ವಿವಿಧೆಡೆ ನಡೆದ ಹೋರಾಟದಲ್ಲಿ 156 ಜನರನ್ನು ಪೊಲೀಸರು ಗುಂಡಿಕ್ಕಿ ಕೊಂದರು. ಆಕಸ್ಮಿಕವಾಗಿ ಗುಂಡು ತಗುಲಿ ರೈತರು ಸಾಯಲಿಲ್ಲ, ನಿರ್ಧಾಕ್ಷಣ್ಯವಾಗಿ ಕೊಲ್ಲಲಾಯಿತು. ಕೊಲ್ಲುತ್ತಾರೆ ಎಂದು ಗೊತ್ತಿದ್ದರೂ ಮಹಿಳೆಯರು, ಮಕ್ಕಳು ಹೋರಾಟದಲ್ಲಿ ಭಾಗವಹಿಸಿದರು. ರೈತ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದವರು ಜೈಲಿನಲ್ಲಿ ಇಡಲು ಸಾಧ್ಯವಾಗದೆ ತೆರೆದ ಜೈಲಿನ ವ್ಯವಸ್ಥೆ ಮಾಡಲಾಗಿತ್ತು. ಇದೆಲ್ಲ ರೈತ ಚಳುವಳಿಯನ್ನು ನಿಯಂತ್ರಿಸಲು ಸರ್ಕಾರ ಮಾಡಿದ ಕುತಂತ್ರ. ಇದನ್ನೆಲ್ಲ ದಿಕ್ಕೆಡಿಸಿ ಚಳುವಳಿ ಕಟ್ಟಿದ್ದೇವೆ ಎಂದರೆ ಅದು ರೈತ ಚಳುವಳಿಗೆ ಇರುವ ಸತ್ವ ಎಂದರು.
ಇಡೀ ಜಗತ್ತಿನ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ, ಐಎಂಎಫ್ ಹೇಳಿದ ಹಾಗೆಯೇ ಭಾತರದ ಪ್ರಧಾನಿ ಸೇರಿ ಎಲ್ಲರೂ ಕೇಳಬೇಕಾದ ಪರಿಸ್ಥಿತಿ ಇಂದು ವಿಶ್ವಮಟ್ಟದಲ್ಲಿ ನಿರ್ಮಾಣವಾಗಿದೆ. ಇದನ್ನು ಮಟ್ಟ ಹಾಕಿ ದೇಶದ ಸಂಪತ್ತನ್ನು ಹೆಚ್ಚಿಸಬೇಕು. ಪ್ರಧಾನಿ ಮೋದಿ ಹೇಳುವಂತೆ ಆತನಿರ್ಭರ ಭಾರತವನ್ನು ಕಟ್ಟಬೇಕಾದರೆ ಆತ ಇರುವ ಜನರ ಸಂಖ್ಯೆ ದುಪ್ಪಟ್ಟಾಗಬೇಕು. ಐಎಂಎಫ್ಗೆ ಉತ್ತರ ನೀಡಲು ಜನಪರ ಹೋರಾಟಕ್ಕೆ ಮಾತ್ರ ಸಾಧ್ಯವಿದೆ. ಯಾವುದೇ ಪಕ್ಷ, ಸರ್ಕಾರವನ್ನು ಬದಲಾವಣೆ ಮಾಡಿದರೂ ಸಾಧ್ಯವಿಲ್ಲ. ಚಳುವಳಿಯಿಂದ ಮಾತ್ರ ವ್ಯವಸ್ಥೆ ಬದಲಾಯಿಸಲು ಸಾಧ್ಯ ಎಂದು ಹೇಳಿದರು.
ರೈತ ಸಂಘದ ನಾಯಕರು ಚದುರಿದ್ದಾರೆ:
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವನಂದ ತಗಡೂರು ಮಾತನಾಡಿ, ಜಿಲ್ಲೆಯಲ್ಲಿ ನಡೆದ ಬಾಗೂರು-ನವಿಲೆ ಹೋರಾಟದಲ್ಲಿ ಹಲವು ರೈತರು ಲಾಠಿ, ಬೂಟು ಎಟು ತಿಂದು ನೋವು ಅನುಭವಿಸಿ ರೈತರ ಪರ ಚಳುವಳಿ ಕಟ್ಟಿದರು. ರೈತರ ಹೋರಾಟ ಹತ್ತಿಕ್ಕಲು ಪೊಲೀಸರು ಕಾರ್ಫ್ಯೂ ಜಾರಿ ಮಾಡಿದ್ದರಿಂದ ಗ್ರಾಮದಲ್ಲಿದ್ದ ಗಂಡಸರೆಲ್ಲ ಊರು ತೊರೆಯುವಂತಾಗಿತು. ಆ ಸಂದರ್ಭದಲ್ಲಿ ನಿಮ ಜೊತೆ ನಾವಿದ್ದೇವೆ ಎಂದು ನಮ ಹೋರಾಟಕ್ಕೆ ಪ್ರೊ.ನಂಜುಂಡಸ್ವಾಮಿ ಅವರು ಹುರುಪು ತುಂಬಿದರು. ಆದರಿಂದು ರೈತ ಸಂಘದ ನಾಯಕರು ಚದುರು ಹೋಗಿದ್ದಾರೆ, ಈಗಲಾದರೂ ಒಟ್ಟಾದರೆ ಸಂಘಟನೆ ಮುಂದೆ ಹೋಗುತ್ತದೆ. ರಾಜ್ಯದಲ್ಲಿ ಮತ್ತೊಮೆ ರೈತ ಸಂಘ ಕಟ್ಟುವ ಅಗತ್ಯವಿದೆ. ಸಭೆಯಲ್ಲಿ ಮಾತನಾಡುವುದು, ಸಲಹೆ ನೀಡುವುದು ಸುಲಭ ಆದರೆ ಸಂಘಟನೆ ಮಾಡುವುದು ಕಷ್ಟ. ಆದರಿಂದು ಜಿಲ್ಲೆಯಿಂದಲೇ ರೈತ ಸಂಘಟನೆ ಬಲಗೊಳ್ಳುತ್ತಿದೆ ಎಂದು ಹೇಳಿದರು.
ಕುಲಾಂತರಿ ತಳಿ ವಿರುದ್ಧ ಹೋರಾಟ ಅಗತ್ಯ:
ರೈತ ಸಂಘಟನೆ ಮುಖಂಡರಾದ ಅನುಸೂಯಮ್ಮ ಮಾತನಾಡಿ, 80ರ ದಶಕ ರೈತರು ಅಸಹಾಯಕವಾಗಿದ್ದರಿಂದ ಸಾಲ ವಸೂಲಾತಿಗಾಗಿ ರೈತರ ಮನೆಗಳನ್ನು ಜಪ್ತಿ ಮಾಡಲಾಗುತ್ತಿತ್ತು. ಇಡೀ ದೇಶಕ್ಕೆ ರೈತ ಅನ್ನ ನೀಡಿದರೂ ಆತನ ಮನೆಯನ್ನು ಬ್ಯಾಂಕ್ನವರಿಂದ ಜಪ್ತಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು, ಆಗ ನಮ ನೆರವಿಗೆ ಬಂದಿದ್ದು ರೈತ ಸಂಘಟನೆ. ಪ್ರಸ್ತುತ ಅದೇ ರೀತಿ ಔಷಧ, ಗೊಬ್ಬರ, ಬೀಜದ ಕಂಪನಿಗಳು ನಮನ್ನು ಆಳುತ್ತಿವೆ, ಅದಕ್ಕೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿವೆ. ಆದ್ದರಿಂದ ಎಂಎಸ್ಬಿ, ಹೊಸಹಾತುಶಾಹಿ, ಕುಲಾಂತರಿ ತಳಿ ವಿರುದ್ಧ ಹೋರಾಟ ಬೇಕಾದರೆ ಮತ್ತೊಮೆ ರೈತ ಸಂಘಟನೆ ಗಟ್ಟಿಗೊಳ್ಳಬೇಕಿದೆ. ಸರ್ಕಾರಗಳು ಪಾರಂಪರಿಕ ಕೃಷಿ ಜ್ಞಾನ ನಾಶ ಮಾಡಿ, ಹೊಸ ಹಾತುಶಾಹಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಲಾಗುತ್ತಿದೆ. ಕೃಷಿಯಲ್ಲಿ ರಾಸಾಯಕ ಬಳಸಿ ಜೀವ ವೈವಿಧ್ಯತೆಯನ್ನೇ ನಾಶ ಮಾಡುತ್ತಿದ್ದೇವೆ. ಇನ್ನು ಕುಲಾಂತರಿ ತಳಿ ಬಂದರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ, ರೈತರ ಆತಹತ್ಯೆ ಸಂಖ್ಯೆಯೂ ಹೆಚ್ಚುತ್ತದೆ. ಆಹಾರ ಸಾರ್ವಭೌಮತ್ವ ಪಡೆದುಕೊಳ್ಳಲು ಕುಲಾಂತರಿ ತಳಿ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಸಂಘಟನಕಾರರು ದಾರಿ ತಪ್ಪಿದ್ದಾರೆ:
ರೈತರ ಸಂಘಟನೆ ಮುಖಂಡ ಡಾ.ಹನುಮಂತೇಗೌಡ ಅವರು ಮಾತನಾಡಿ, ಭತ್ತ, ರಾಗಿ, ಜೋಳ, ಕಾಳುಗಳನ್ನು ಭೂಮಿಯಿಂದ ಬೆಳೆಯಬೇಕೇ ಹೊರತು ಯಾವುದೇ ಕಾರ್ಖಾನೆಯಿಂದ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಅಹಾರ ಧಾನ್ಯವನ್ನು ಉತ್ಪಾದನೆ ಮಾಡುವಂತಹ ದೊಡ್ಡ ಕಾರ್ಖಾರೆಯನ್ನು ರೈತರು ಮುನ್ನಡೆಸುತ್ತಿದ್ದಾರೆ. ಆದ್ದರಿಂದ ರೈತ ಸಮಸ್ಯೆಗಳಿಗೆ ಸ್ಪಂದಿಸಲು ರೈತ ಸಂಘಟನೆಯನ್ನು ಬಲಗೊಳಿಸಬೇಕಾಗಿದೆ. ಜನರ ತಪ್ಪಿಲ್ಲ, ಸಂಘಟನಕಾರರು ದಾರಿ ತಪ್ಪಿದ್ದಾರೆ. ಪ್ರಸ್ತುತ ನಮ ಮುಂದೆ ಜಾತಿ, ಧರ್ಮ, ಬಡತನವಿದೆ, ಬೌದ್ಧಿಕ ದಾರಿದ್ರ್ಯವಿದೆ. ಇದನ್ನು ಅರ್ಥ ಮಾಡಿಕೊಂಡು ಶುದ್ಧ ಚಾರಿತ್ರ್ಯ, ಸತ್ಯ, ತತ್ವಕ್ಕೆ ಬದ್ಧರಾಗಿ, ವಿಶಾಲ ಮನೋಭಾವದಿಂದ ಹೋರಾಟವನ್ನು ಮುನ್ನಡೆಸಬೇಕೆಂದು ಹೇಳಿದರು.
ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್, ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್, ಹೆರಗು ವಾಸುದೇವ್, ಡಾ.ಹನುಮಂತೇಗೌಡ ಅವರು ಮಾತನಾಡಿದರು. ಸಂಘದ ಮುಖಂಡ ಪ್ರೊ.ಕೆ.ಸಿ.ಬಸವರಾಜು, ಕಣಗಾಲ್ ಮೂರ್ತಿ, ನಂದಿನಿ ಜಯರಾಮ್, ನಂಜುಂಡೇಗೌಡ, ಕೆ.ಟಿ.ಶಿವಪ್ರಸಾದ್, ಗುರುಸ್ವಾಮಿಗೌಡ, ಷಾಡ್ರಾಕ್, ವಿಷ್ಣುಕುಮಾರ್, ಮಂಜುನಾಥ್ ಮತ್ತಿತರು ಹಾಜರಿದ್ದರು