-ಪ್ರತಿಷ್ಠಿತ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ ನಿಂದ ಸರ್ಟಿಫಿಕೇಟ್
ದೆಹಲಿ: ಭಾರತೀಯ ಕೊರೊನಾ ಲಸಿಕೆ ಕುರಿತು ದೇಶದಲ್ಲಿ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದವು. ಲಸಿಕೆಗಳ ಅದರಲ್ಲೂ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದ ಕೊವ್ಯಾಕ್ಸಿನ್ ಲಸಿಕೆಯ ಬಗ್ಗೆ ಹಲವರು ಸಂದೇಹ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಪ್ರತಿಷ್ಠಿತ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ನಲ್ಲಿ ಈ ಕುರಿತು ಮಾಹಿತಿ ನೀಡಿದೆ. ಕೊವ್ಯಾಕ್ಸಿನ್ ಲಸಿಕೆ ಸುರಕ್ಷಿತ ಎಂದು ಲ್ಯಾನ್ಸೆಟ್ ಅಭಿಪ್ರಾಯಪಟ್ಟಿದೆ.
ಕೊವ್ಯಾಕ್ಸಿನ್ ಲಸಿಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಈ ಲಸಿಕೆ ಸುರಕ್ಷಿತವೂ ಆಗಿದೆ ಎಂದು ಹೇಳಿರುವ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ ಕೊವ್ಯಾಕ್ಸಿನ್ ಕುರಿತಾಗಿ ಎದ್ದಿದ್ದ ಗೊಂದಲವನ್ನು ಬಗೆಹರಿಸಿದೆ. ಈ ಮಧ್ಯೆ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸುತ್ತಿರುವ ಮೂಗಿನ ಮೂಲಕ ನೀಡಬಹುದಾದ ಕೊರೊನಾ ಲಸಿಕೆಯ ಮೊದಲ ಹಂತದ ವೈದ್ಯಕೀಯ ಪರೀಕ್ಷೆಗೂ ಅನುಮತಿ ಸಿಕ್ಕಿರುವುದು ಮತ್ತಷ್ಟು ನಿರೀಕ್ಷೆಗಳಿಗೆ ಕಾರಣವಾಗಿದೆ.