- ಮಾರಿಗೋಲ್ಡ್ ಹೂವಲ್ಲಡಗಿದೆ ಆರೋಗ್ಯ ಗುಟ್ಟು
- ಮನೆಯ ಉದ್ಯಾನದಲ್ಲಿದೆ ಔಷಧ
ಚೆಂಡು ಹೂವು ಅಥವಾ ಮಾರಿಗೋಲ್ಡ್ ಹೂವನ್ನು ಮನೆಯ ಅಲಂಕಾರ ಮಾಡಲು ಅತ್ಯಂತ ಸುಂದರ. ಹಾಗೆಯೇ ಇದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆಯಬಹುದು ಎನ್ನುವುದು ಗಮನದಲ್ಲಿರಲಿ.
ಈ ಹೂವನ್ನು ಚರ್ಮದ ಅಲರ್ಜಿಗೆ ಹಾಗೂ ಕಜ್ಜಿಯಂಥ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ. ಮೂತ್ರಪಿಂಡದ ಸಮಸ್ಯೆಗಳನ್ನು ದೂರಮಾಡುವ ಗುಣ ಇದರಲ್ಲಿದೆ. ಈ ಹೂವಿನ ಕಷಾಯವನ್ನು ತಯಾರಿಸಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲು ಕರಗಿ ಹೋಗುತ್ತದೆ.
ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣವಿದ್ದು ಮೊಡವೆಗಳನ್ನು ನಿವಾರಿಸುತ್ತದೆ. ಕಣ್ಣಿನ ನೋವು, ಬಾವು ಸಮಸ್ಯೆಗಳನ್ನೂ ಇದು ಗುಣಪಡಿಸುತ್ತದೆ.
ಇದರ ಹೂವಿನ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ. ಮಾರಿಗೋಲ್ಡ್ ಹೂವಿನ ಚಹಾ ಸೇವನೆಯಿಂದ ಅಲ್ಸರ್ ಹಾಗೂ ಹೊಟ್ಟೆಯೊಳಗಿನ ಗಾಯ ನಿವಾರಣೆಯಾಗುತ್ತದೆ. ಕೆಲವೊಮ್ಮೆ ಮೂಗಿನಿಂದ ರಕ್ತಸ್ರಾವವಾದರೆ ಅದ ನಿವಾರಣೆಗೂ ಈ ಹೂವಿನ ರಸವನ್ನು ಬಳಸಲಾಗುತ್ತದೆ.