- ರಾಜ್ಯದಲ್ಲೂ ಹೊಸ ನಿಯಮ ಜಾರಿ
- 6 ಜಿಲ್ಲೆಯಲ್ಲಿ ಮಾಸ್ಕ್, ಲಸಿಕೆ ಕಡ್ಡಾಯ
- ಮದುವೆ, ಅಂತ್ಯ ಸಂಸ್ಕಾರ, ಕಾರ್ಯಕ್ರಮಕ್ಕೆ ಏನು ನಿಯಮ?
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕರೋನಾ ಅಲರ್ಟ್ ಘೋಷಣೆ ಮಾಡಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆಗೆ ಸಭೆ, ಸಮಾರಂಭಗಳ ಮೇಲೆ ನಿಗಾ ಇಡಲಾಗಿದೆ.
ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯವನ್ನು ಚುರುಕುಗೊಳಿಸಲು ದಕ್ಷಿಣಕನ್ನಡ, ಬೀದರ್, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ ಮತ್ತು ಉಡುಪಿ ಜಿಲ್ಲೆಗಳ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.ಕಡ್ಡಾಯ
ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಮತ್ತು ಕೋವಿಡ್ ಪರೀಕ್ಷೆಗೆ ಒಳಪಡುವುದನ್ನು ವ್ಯಾಪಕವಾಗಿ ಹೆಚ್ಚಿಸಲು ಪರಿಣಾಮಕಾರಿ ಕ್ರಮವನ್ನು ತೆಗೆದುಕೊಳ್ಳಲು, ಮುಖ್ಯಮಂತ್ರಿಗಳ ಮತ್ತು ಆರೋಗ್ಯ ಸಚಿವರ ಸಂದೇಶವನ್ನು ಜನರಿಗೆ ತಲುಪಿಸಲು ಸೂಚಿಸಲಾಗಿದೆ.
ವಿವಿಧ ಸಮಾರಂಭಗಳಲ್ಲಿ ಹೆಚ್ಚು ಜನರು ಸೇರುತ್ತಿರುವುದರಿಂದ ಕೋವಿಡ್ ಪಸರಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಇಂತಹ ಕಾರ್ಯಕ್ರಮಗಳಲ್ಲಿ ಭಾರತೀಯ ಸರಕಾರದ ಮಾನದಂಡದ ಪ್ರಕಾರ 3.25 sq.mಣಡಿ ಮಾನದಂಡವನ್ನು ಪಾಲಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಮದುವೆ ಸಮಾರಂಭ (ಹಾಲ್, ಸಭಾಂಗಣ ಇತ್ಯಾದಿ, ಮುಚ್ಚಿದ ಪ್ರದೇಶಗಳಲ್ಲಿ) – 200 ಜನ ಮೀರಬಾರದು. ತೆರೆದ ಜಾಗದಲ್ಲಿ 500 ಮೀರಬಾರದು.
ಜನ್ಮದಿನ ಮತ್ತು ಇತರ ಸಮಾರಂಭಗಳು – (ತೆರೆದ ಪ್ರದೇಶಗಳಲ್ಲಿ) – 100 ಜನ ಮೀರಬಾರದು
ಜನ್ಮದಿನ ಮತ್ತು ಇತರ ಸಮಾರಂಭಗಳು – (ಹಾಲ್, ಸಭಾಂಗಣ ಇತ್ಯಾದಿ, ಮುಚ್ಚಿದ ಪ್ರದೇಶಗಳಲ್ಲಿ) – 50 ಜನ ಮೀರಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಎಲ್ಲಾ ಸುದ್ದಿಗಳಿಗೆ ಟಿಚಿmmuಡಿ exಠಿಡಿess ವೀಕ್ಷಿಸಿ..!