ರಿಸರ್ವ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ
– ವೈದ್ಯಕೀಯ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ
– ಅರೆಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿ
NAMMUR EXPRESS NEWS
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರೆಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ಬ್ಯಾಂಕ್ ನ ವೈದ್ಯಕೀಯ ಸಲಹೆಗಾರರ ಸ್ಥಾನಕ್ಕೆ ನೇಮಕಾತಿ ಹುದ್ದೆಗಳ ವಿವರ:
ಆರ್ ಬಿ ಐ ಮುಖ್ಯ ಕಚೇರಿ, ಔಷಧಾಲಯ, ನೃಪತುಂಗ ರಸ್ತೆ, ಬೆಂಗಳೂರು : 2
ಆರ್ ಬಿ ಐ ಅಧಿಕಾರಿಗಳ ಕ್ವಾರ್ಟಸ್, ಕನ್ನಿಂಗ್ ಹ್ಯಾಮ್ ಕ್ರೆಸೆಂಟ್, ಬೆಂಗಳೂರು: 1
ಆರ್ ಬಿ ಐ ಅಧಿಕಾರಿಗಳ ಕ್ವಾರ್ಟಸ್, ಕನ್ನಿಂಗ್ ಹ್ಯಾಮ್ ರಸ್ತೆ, ಬೆಂಗಳೂರು : 1
ಆರ್ ಬಿ ಐ ಸಿಬ್ಬಂದಿ ಕ್ವಾರ್ಟಸ್, ನಂದಿನಿ ಬಡಾವಣೆ, ಬೆಂಗಳೂರು: 1
ಆರ್ ಬಿ ಐ ಸಿಬ್ಬಂದಿ ಕ್ವಾರ್ಟಸ್, ಒಸ್ಟೋರ್ನ್ ರಸ್ತೆ, ಬೆಂಗಳೂರು : 1
ಆರ್ ಬಿ ಐ ಅಧಿಕಾರಿಗಳ ಕ್ವಾರ್ಟಸ್, ಕೋರಮಂಗಲ, ಬೆಂಗಳೂರು: 1
ವಿದ್ಯಾರ್ಹತೆ:
ಎಂಬಿಬಿಎಸ್, ಎಂಡಿ, ಬಿಡಿಎಸ್, ಇತರೆ ವೈದ್ಯಕೀಯ ಕ್ಷೇತ್ರದ ಅರ್ಹತೆಗಳು ಹಾಗೂ ಅನುಭವಗಳನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು:
* ಎಸ್ಎಸ್ಎಲ್ಸಿ ಅಂಕಪಟ್ಟಿ
* ಜನ್ಮ ದಿನಾಂಕ ದಾಖಲೆ
* ಹುದ್ದೆಗೆ ನಿಗದಿತ ಅರ್ಹತೆ ದಾಖಲೆ
* ಆಧಾರ್ ಕಾರ್ಡ್
ಆಯ್ಕೆ ವಿಧಾನ:
ಶೈಕ್ಷಣಿಕ ಅರ್ಹತೆ, ಸಂದರ್ಶನ, ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ :
25-01-2024
ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ:
opportunities.rbi.org.in