- ಕುಡಿತದ ಚಟ, ಕರೋನಾ ಎಫೆಕ್ಸ್: ನೇಣಿಗೆ ಶರಣು
ಬೆಳಗಾವಿ: ಹಬ್ಬ ಆಚರಿಸಲು ಹಣ ನೀಡುವಂತೆ ಕೇಳಿದ ಪತ್ನಿಯ ಮಾತಿನಿಂದ ಬೇಸತ್ತ ಪತಿ ಮಹಾಶಯನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಶಹಾಪುರದಲ್ಲಿ ನಡೆದಿದೆ.
ಶಹಾಪೂರದ ಹೊಸೂರಿನ ಬಸವನಗಲ್ಲಿ ನಿವಾಸಿ ರಾಹುಲ್ ಸಹದೇವ ಸೈನೂಚೆ (30) ಎಂಬುವನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇತ್ತೀಚಿಗೆ ಕೆಲದಿನಗಳ ಮದ್ಯದ ಸೇವನೆ ಅಭ್ಯಾಸ ಮಾಡಿಕೊಂಡಿದ್ದ ರಾಹುಲ್, ಸಂಪಾದಿಸಿದ ಹಣವನ್ನೆಲ್ಲ ಮದ್ಯ ಸೇವನೆಯಲ್ಲಿ ಕಳೆದುಕೊಳ್ಳುತ್ತಿದ್ದ. ದಸರಾ ಹಬ್ಬ ಆಚರಣೆಗೆ ಹಣ ಬೇಕು. ಮದ್ಯ ಸೇವನೆ ಬಿಟ್ಟುಬಿಡು ಎಂದು ಪತ್ನಿ ಒತ್ತಾಯಿಸಿದ್ದರಿಂದ ಆಕೆಯೊಂದಿಗೆ ಜಗಳ ಮಾಡಿಕೊಂಡಿದ್ದ.
ಇದರಿಂದ ಬೇಸತ್ತ ಪತಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತಂತೆ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.