- ಭೀಮಾ ತೀರದ ಶೂಟೌಟ್ ಕೇಸ್: ರಾಜ್ಯದಲ್ಲೇ ಪ್ರಥಮ
ವಿಜಯಪುರ: ಭೀಮಾತೀರದ ನಟೋರಿಯಸ್ ಕ್ರಿಮಿನಲ್ ಮೇಲೆ ನಡೆದಿರುವ ಗುಂಡಿನ ದಾಳಿ ತನಿಖೆಗೆ ರಾಜ್ಯ ಇದೇ ಪ್ರಥಮ ಬಾರಿಗೆ 1500 ಪೆÇಲೀಸರಿಗೆ ನಿಯೋಜಿಸಿದೆ.
ಗುಂಡಿನ ದಾಳಿಯ ಕಾರ್ಯಾಚರಣೆ ಬೆನ್ನು ಹತ್ತಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪೆÇಲೀಸರು, ಆರೋಪಿಗಳ ಜಾಡು ಹಿಡಿಯಲು ಹೊರಟಿದ್ದು ಇದೇ ಮೊದಲು ಅದು ಭೀಮಾತೀರದ ರಕ್ತತರ್ಪಣಕ್ಕಾಗಿ..
ವಿಜಯಪುರ ಜಿಲ್ಲೆ ಹಾಗೂ ಕಲಬುರ್ಗಿ ಜಿಲ್ಲೆಯ ಈ ಭೀಮಾತೀರದ ದಶಕಗಳಿಂದಲೂ ರಕ್ತಸಿಕ್ತ ಕ್ಷಣಗಳನ್ನು ನೋಡುತ್ತಲೇ ಬಂದಿದೆ. ಇಲ್ಲಿ ಹತ್ಯೆ ಮುಖ್ಯ. ಹೊರತಾಗಿ ಯಾರದ್ದೂ ಎನ್ನುವುದು ಆ ಎರಡು ಕುಟುಂಬಗಳ ಮಾತ್ರ ನಿರ್ಧಾರ ಮಾಡುತ್ತವೆ. ಹಾಗಾಗಿಯೇ ನಿರ್ಧಾರ ಮಾಡಿದ್ದಂತೆ ನಡೆದದ್ದೇ ಮಹಾದೇವ ಬೈರಗೊಂಡನ ಮೇಲೆ ಗುಂಡಿನ ದಾಳಿ ಎಂಬ ಮಾತುಗಳು ಕೇಳಿ ಬರುತ್ತೀವೆ.
ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೆÇಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಬೈಕ್, ಒಂದು ಟಿಪ್ಪರ್ ಸೇರಿದಂತೆ ಪೆಟ್ರೋಲ್ ಬಾಂಬ್, ಲಾಂಗ್ ಜಪ್ತಿ ಮಾಡಿದ್ದಾರೆ. ಹತ್ಯೆಯ ಹಿಂದೆ 15 ರಿಂದ 20 ಜನರು ಇರಬಹುದೆಂದು ಹಿರಿಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಈಗಾಗಲೇ ಬೈರಗೊಂಡನ ಮ್ಯಾನೇಜರ್ ಬಾಬೂರಾಯ ಕಂಚನಾಳಕರ ಹಾಗೂ ಚಾಲಕ ಲಕ್ಷ್ಮಣ ದಿಂಡೋರೆ ಮೃತಪಟ್ಟಿದ್ದಾರೆ. ಸಾಹುಕಾರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಘಟನೆಗೆ ಸಂಬಂಧಿಸಿದಂತೆ 3 ಜಿಲ್ಲೆಗಳಲ್ಲಿ 1500 ಪೆÇಲೀಸರು ಕಾರ್ಯಾಚರಣೆ ನಡೆಸಿದ್ದು ಆದಷ್ಟು ಬೇಗನೇ ಆರೋಪಿಗಳ ಪತ್ತೆ ಮಾಡುವ ವಿಶ್ವಾಸವನ್ನು ಮೂಲಗಳು ವ್ಯಕ್ತಪಡಿಸಿವೆ.
ಭೀಮಾತೀರದ ಹಂತಕ ಮಹಾದೇವ ಬೈರಗೊಂಡ ಉರ್ಫ್ ಸಾವುಕಾರ, ಎರಡು ವರ್ಷಗಳ ಹಿಂದೆ ಧರ್ಮರಾಜ ಚಡಚಣ ಮತ್ತು ಗಂಗಾಧರ ಚಡಚಣ ಅವರನ್ನು ಪೆÇಲೀಸರ ಸಹಾಯದಿಂದಲೇ ಕೊಲೆ ಮಾಡಿದ್ದ ಎಂಬ ಆರೋಪವೂ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರ ಬಂದ ಮೇಲೆಯೂ ತನ್ನ ಪ್ರಾಣ ರಕ್ಷಣೆಗಾಗಿ ಸಾವುಕಾರ ಗ್ಯಾಂಗ್ ಅನ್ನು ಸುತ್ತಲೂ ಕಟ್ಟಿಕೊಂಡು ಓಡಾಡುತ್ತಿದ್ದ. ಕೊನೆಗೂ ಮತ್ತದೇ ಘಟನೆ ಪುನರಾವರ್ತನೆಯಾಗಿದೆ ಎಂಬುದನ್ನು ಇಲ್ಲಿ ಉಲ್ಲೇಖನೀಯ.