ತಿಂಗಳ ಬಳಿಕ ಬಿಸಿಲು ನೋಡಿದ ಕರಾವಳಿ, ಮಲೆನಾಡು..!
– ಒಂದು ತಿಂಗಳ ಮಳೆ ಆರ್ಭಟಕ್ಕೆ ನಲುಗಿದ ಜನ
– ಅಡಿಕೆ ಮರದಿಂದ ಉದುರುತ್ತಿರುವ ಅಡಿಕೆ ಕಾಯಿ
– ಈಗ ಜನ ಜೀವನ ಸಹಜತೆಯತ್ತ: ಆದ್ರೂ ಮಳೆ ಅಲರ್ಟ್
NAMMUR EXPRESS NEWS
ಮಲೆನಾಡು/ಕರಾವಳಿ: ತಿಂಗಳ ಬಳಿಕ ಕರಾವಳಿ, ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಬಿಸಿಲಿನ ಛಾಯೆ ಕಾಣಿಸುತ್ತಿದೆ.
ಒಂದು ತಿಂಗಳಿಂದ ಸುರಿದ ಭಾರೀ ಮಳೆಗೆ ನಲುಗಿದ ಜನ ಇನ್ನು ಅದರ ಆರ್ಭಟದಿಂದ ಹೊರ ಬಂದಿಲ್ಲ.
ಎಲ್ಲಾ ನದಿ ಹಳ್ಳಗಳು ತುಂಬಿವೆ. ಆಣೆಕಟ್ಟುಗಳು ತುಂಬಿವೆ. ಶಾಲೆ ಕಾಲೇಜುಗಳಿಗೆ ಸುಮಾರು 10-15 ದಿನ ರಜೆ ಘೋಷಣೆ ಆಗಿತ್ತು. ಮಲೆನಾಡು ಹಾಗೂ ಕರಾವಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ.
ರಸ್ತೆ, ಸೇತುವೆಗಳು ಕುಸಿದಿವೆ. ಇದೀಗ ಬಿಸಿಲಿನ ಕಾರಣ ಎಲ್ಲಾ ಕೆಲಸಗಳು ಶುರುವಾಗಿದೆ. ಜನ ಜೀವನ ಮತ್ತೆ ಸಹಜ ಸ್ಥಿತಿಗೆ ಬರುತ್ತಿದೆ.
ಅಡಿಕೆ ಮರದಿಂದ ಉದುರುತ್ತಿರುವ ಅಡಿಕೆ ಕಾಯಿ
ಮಲೆನಾಡು, ಕರಾವಳಿ ಭಾಗದ ಜೀವನ ಆಧಾರ ಬೆಳೆ ಅಡಿಕೆ ಕಾಯಿ ಭಾರೀ ಮಳೆ ಕಾರಣ ಉದುರುತ್ತಿವೆ. ಇದು ರೈತರನ್ನು ಕಂಗಾಲು ಮಾಡಿದೆ. ತೋಟಗಳಲ್ಲಿ ಕಾಯಿಗಳು ಉದುರಿದ್ದು ಇನ್ನು ಮಳೆ ಬಂದರೆ ಮತ್ತಷ್ಟು ಹಾನಿ ಸಂಭವಿಸಲಿದೆ.
ಈಗ ಜನ ಜೀವನ ಸಹಜತೆಯತ್ತ: ಆದ್ರೂ ಮಳೆ ಅಲರ್ಟ್
ಮಳೆ ಇನ್ನು ಬರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಬೀಳಲಿದೆ ಎಂದು ಹೇಳಲಾಗಿದೆ. ಹಾಗಾದರೆ ಮತ್ತಷ್ಟು ಹಾನಿ ಸಂಭವಿಸಲಿದೆ.