ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣ ಸಂಭ್ರಮ!
– ಸಿಎಂ ಅನುಪಸ್ಥಿತಿಯಲ್ಲಿ ಧ್ವನಿ ಎತ್ತಿದ ಸತ್ಯಜಿತ್ ಸುರತ್ಕಲ್
– ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು: ಅತ್ಯುತ್ತಮ ಆಯೋಜನೆ
NAMMUR EXPRESS NEWS
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣ ಮಹೋತ್ಸವ ಅತ್ಯಂತ ಅದ್ದೂರಿಯಾಗಿ 3 ದಿನಗಳ ಕಾಸ್ಪರ್ಧೆ,ದಿದೆ. ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಸಸಿಹಿತ್ಲು ಇದರ ಗೌರವಾಧ್ಯಕ್ಷರಾದ ಚಂದಯ್ಯ ಬಿ ಕರ್ಕೆರ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಂಸದ ಮಾಲಿಕಯ್ಯ ಗುತ್ತೇದಾರ್ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಮಾಜ 1924ರಂದು ಪ್ರಾರಂಭವಾದದ್ದು, ಇದೀಗ ಈ ಸಂಘ 50 ನೇ ವರ್ಷಕ್ಕೆ ಕಾಲಿಟ್ಟಿದೆ, ಇದೀಗ ಈ ಸುವರ್ಣ ಮಹೋತ್ಸವ ವಿಶ್ವ ಸಮ್ಮೇಳನವಾಗಿದೆ. ಈ ಸಂಘದಲ್ಲಿ 26 ಪಂಗಡಗಳಿವೆ. ಇವರೆಲ್ಲರ ಸಂಗಮವಾಗಬೇಕು. ಜೊತೆಗೂಡ್ಬೇಕು. ಎಂಬ ಕಾರಣಕ್ಕೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಕರ್ನಾಟಕ ರಾಜ್ಯಧ್ಯಕ್ಷರಾಗಿರುವ ಸತ್ಯಜಿತ್ ಸುರತ್ಕಲ್ ಹೇಳಿದರು. ಸಂಘದ ಪ್ರತಿಯೊಂದು ವಿಚಾರಗಳನ್ನು ಮುಖ್ಯಮಂತ್ರಿಗಳಾಗಿರುವ ಸಿ.ಎಂ ಸಿದ್ದರಾಮಯ್ಯ ಮತ್ತು ಸಚಿವ ಮಧುಬಂಗಾರಪ್ಪ ಅವರ ಮುಂದೆ ತಮ್ಮ ಬೇಡಿಕೆಗಳನ್ನು ಗಟ್ಟಿ ಧ್ವನಿಯಲ್ಲಿ, ಮಂಡಿಸಬೇಕು. ತೋರಿಸಬೇಕೆಂಬ ಆಶಯವಿತ್ತು ಹಾಗೂ ಆ ಬೇಡಿಕೆಗಳಿಗೆ ಸ್ವರ ಸೇರಿಸಬೇಕೇಂಬ ಆಶಯ ಸಂಘಟಿಕರಲ್ಲಿತ್ತು ಆದರೆ ಇದೀಗ ನಿರಾಸೆಯಾಗಿದೆ. ಕುಲಕಸುಬುಗಳನ್ನು ಕಳೆದುಕೊಂಡ ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬಲು ಕಳೆದ ಐದಾರು ವರ್ಷಗಳಿಂದ ಧ್ವನಿ ಎತ್ತಿ ಕೇವಲ ಘೋಷಣೆಗಳು ನಡೆಯುತ್ತಾ ಇದೆಯೇ ಹೊರತು ಇವತ್ತಿನವರೆಗೂ ಸಮಿತಿ ರಚನೆಯಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ನಮಗೆ ಭರವಸೆ ಕೊಟ್ಟಿದ್ದರೂ ಅವರು ನಮಗೆ ನಿರಾಸೆಯನ್ನುಂಟು ಮಾಡಿದ್ದಾರೆ.
ಆದರೆ ಅವರಿಗೆ ಮನವಿ ನೀಡಲಿದ್ದು ಇವತ್ತು ಅವರ ಅನುಪಸ್ಥಿತಿಯಲ್ಲಿ ಧ್ವನಿ ಎತ್ತುತ್ತಿದ್ದೇವೆ. 2ನೇ ಅತಿದೊಡ್ಡ ಸಮಾಜದ ಪರವಾಗಿ ಬೇಡಿಕೆಯನ್ನು ಇಡುತ್ತಿದ್ದೇವೆ ಆಗ್ರಹ ಮಾತ್ರವಲ್ಲ ತಕ್ಷಣ ಇದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯಬೇಕು, ವೇದಿಕೆಯನ್ನು ಕಲ್ಪಿಸಿಕೊಡಬೇಕು ಈ ಬೇಡಿಕೆಗಳನ್ನು ಚರ್ಚೆಯಲ್ಲಿ ಇಡಬೇಕು. ಹಾಗೂ ಹಿರಿಯ ಕೋಟಿ ಚೆನ್ನಯ್ಯರ ಹೆಸರನ್ನು ಈ ವಿಮಾನ ನಿಲ್ದಾಣಕ್ಕೆ ಇಡಬೇಕೆಂಬ ಬೇಡಿಕೆಗಳನ್ನು ಸಮಾಜದ ಪರವಾಗಿ ಇಟ್ಟರು.
ಗಣ್ಯರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಗುರುತಿಸಿಕೊಂಡ ಸಮಾಜದ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ರಂಗು: ವಿಧಾನಸಭೆ ಸಭಾಧ್ಯಕ್ಷರಾದ ಯು. ಟಿ, ಖಾದರ್ ಫರೀದ್, ಸುವರ್ಣಾಕ್ಷರ, ಪುಸ್ತಕವನ್ನು ಗಣ್ಯರೊಂದಿಗೆ ಬಿಡುಗಡೆ ಮಾಡಿದರು. ತೆಲಂಗಾಣ ರಾಜ್ಯಪಾಲರಾದ ತಮಿಳ್ ಇಸೈ ಸೌಂದರರಾಜನ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್, ಕಾರ್ಕಳ ಶಾಸಕರಾದ ಸುನೀಲ್ ಕುಮಾರ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ವಿನಯ್ಕುಮಾರ್ ಸೊರಕೆ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷರಾದ ಮೂಲ್ಕಿ ರಾಜಶೇಖರ್ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರಾದ ಮಂಗಳೂರು ನವೀನ್ ಚಂದ್ರ ಡಿ. ಸುವರ್ಣ, ಖ್ಯಾತ ಬಹು ಭಾಷಾ ನಟರು ಸುಮನ್ ತಲ್ವಾರ್, ವಿಶ್ವನಾಥ ಕ್ಷೇತ್ರ ಕಟಪಾಡಿ ಬಿ.ಎನ್. ಶಂಕರ್ ಪೂಜಾರಿ, ಹರೀಶ್ ಜಿ ಅಮೀನ್, ವೇದಕುಮಾರ್, ವಿಶ್ವನಾಥ್ ಪೂಜಾರಿ, ಗೋಪಾಲ್ ಪೂಜಾರಿ, ಪ್ರಭಾಕರ್ ಬಂಗೇರಾ, ಹರೀಶ್ ಕುಮಾರ್, ಮೋಹನ್ ಸಿ. ಪೂಜಾರಿ, ಮುರಳಿ, ಮನೋಜ್ ಕುಮಾರ್ ಸೂರತ್, ಸೂರ್ಯಕಾಂತ್, ಶರತ್ಚಂದ್ರ ಸನಿಲ್, ಚಂದ್ರಹಾಸ ಅಮೀನ್, ಲೋಕೇಶ್ ಕೋಟ್ಯಾನ್, ದೀಪಕ್ ಪೂಜಾರಿ ಸೇರಿ ನೂರಾರು ಗಣ್ಯರು 3 ದಿನ ಭಾಗವಹಿಸಿದ್ದರು. ಬೀಚ್ ಬಳಿಯ ಆಹಾರ ಮೇಳ, ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ, ವಾಲಿಬಾಲ್, ನಾಟಕ ಗಮನ ಸೆಳೆಯಿತು. ರಾಜ್ಯದ ಅತ್ಯಂತ ಅಚ್ಚುಕಟ್ಟಿನ ಆಯೋಜನೆಯ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಜನರಿಂದ ಕೇಳಿ ಬಂದಿತು.