ಕರಾವಳಿ ಟಾಪ್ ನ್ಯೂಸ್
– ಕರಾವಳಿ ಆನ್ಲೈನ್ ಮೋಸಕ್ಕೆ ಲಕ್ಷ ಲಕ್ಷ ಡಮಾರ್!
– ವಿಟ್ಲ: ಮಾಣಿ -ಮೈಸೂರು ರಾಜ್ಯ ಹೈವೇ ಸಂಚಾರ ಬಂದ್
– ಮಲ್ಪೆ : ಡ್ರಗ್ಸ್ ಪಾರ್ಸೆಲ್ ಹೆಸರಲ್ಲಿ ಬೆದರಿಸಿ 20 ಲಕ್ಷ ವಂಚನೆ
– ಮಂಗಳೂರು : ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾವು
– ಉಡುಪಿ: ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ಲಕ್ಷ ಲಕ್ಷ ಮೋಸ
– ಸುಳ್ಯ: ಕಾರು ಪಲ್ಟಿ, ನಾಲ್ವರಿಗೆ ಗಾಯ
– ಉಡುಪಿ: ಲೈಂಗಿಕ ಕಿರುಕುಳ, ಇಬ್ಬರಿಗೆ 3 ವರ್ಷ ಜೈಲು ಶಿಕ್ಷೆ
NAMMUR EXPRESS NEWS
ವಿಟ್ಲ: ಮಾಣಿ -ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಬಳಿ ಮರವೊಂದು ಲಾರಿಯ ಮೇಲೆ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್ ಆಗಿದೆ. ನ.13ರ ರಾತ್ರಿ ಬಂದ ಭಾರೀ ಮಳೆಗೆ ಹೆದ್ದಾರಿಯಲ್ಲಿ ತೆರಳುತ್ತಿದ್ದ ಲಾರಿ ಮೇಲೆ ಮರ ಉರುಳಿ ಬಿದ್ದಿದೆ. ಇದರಿಂದ ಮಂಗಳೂರು-ಪುತ್ತೂರು ಸಂಪರ್ಕ ಕಡಿತಗೊಂಡಿದೆ. ಪುತ್ತೂರು ಕಡೆಯಿಂದ ಬರುವ ವಾಹನ ವಿಟ್ಲ ಮೂಲಕ ಮತ್ತು ಮಂಗಳೂರು ಕಡೆಯಿಂದ ಬರುವ ವಾಹನಗಳು ಮಾಣಿ ಮೂಲಕ ಬದಲಿ ರಸ್ತೆ ಮೂಲಕ ತೆರಳಿದೆ. ಹೆದ್ದಾರಿಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು.
ರಾತ್ರಿಯೇ ಮರವನ್ನು ತೆರವು ಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
* ಮಲ್ಪೆ : ಡ್ರಗ್ಸ್ ಪಾರ್ಸೆಲ್ ಹೆಸರಲ್ಲಿ ಬೆದರಿಸಿ 20 ಲ.ರೂ. ವಂಚನೆ
ಮಲ್ಪೆ: ಪಾರ್ಸೆಲ್ನಲ್ಲಿ ಡ್ರಗ್ಸ್ ಇದೆ ಎಂದು ಬೆದರಿಸಿ ಮಲ್ಪೆಯ ವ್ಯಕ್ತಿಯೋರ್ವರಿಗೆ 20 ಲಕ್ಷ ರೂ. ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ, ತನ್ನನ್ನು ಫೆಡೆಕ್ಸ್ ಕೊರಿಯರ್ ಕಂಪೆನಿಯ ಆಕಾಶ್ ವರ್ಮ ಎಂದು ಪರಿಚಯಿಸಿಕೊಂಡಿದ್ದ. ನೀವು ಕಳಿಸಿರುವ ಪಾರ್ಸೆಲ್ನಲ್ಲಿ 2 ಕೆಜಿ ಬಟ್ಟೆ, 4 ಎಕ್ಸ್ಪಯರ್ಡ್ ಪಾಸ್ಪೋರ್ಟ್, 4 ಡೆಬಿಟ್ ಕಾರ್ಡ್, 1 ಲ್ಯಾಪ್ಟಾಪ್, 420 ಗ್ರಾಂ ಎಂಡಿಎಂಎ ಡ್ರಗ್ಸ್ ಇದ್ದು, ಪಾರ್ಸೆಲ್ ಮುಂಬಯಿಯ ಎನ್ಸಿಬಿ ವಶದಲ್ಲಿದೆ. ಪರ್ಸನಲ್ ಲೋನ್ ಸೆಕ್ಷನ್ನಲ್ಲಿ 20 ಲಕ್ಷ ರೂ. ವಂಚನೆಯ ಹಣ ಇದ್ದು, ಅದನ್ನು ಫಿರ್ಯಾದಿದಾರರ ಖಾತೆಗೆ ಜಮೆ ಮಾಡಿಕೊಳ್ಳುವಂತೆ ಸೂಚಿಸಿರುತ್ತಾರೆ. ಅದರಂತೆ ದೂರುದಾರರು 20 ಲಕ್ಷ ರೂ. ವರ್ಗಾಯಿಸಿದ್ದು, ಬಳಿಕ ಇದು ವಂಚನೆ ಎಂಬುದು ಗೊತ್ತಾಗಿದೆ ಎಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
* ಮಂಗಳೂರು : ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾವು
ಮಂಗಳೂರು: ಕಾಲೇಜಿನಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದ ಉಪನ್ಯಾಸಕಿಯೋರ್ವರು ನ. 13ರಂದು ಮೃತಪಟ್ಟಿದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್(23) ಮೃತಪಟ್ಟವರು.
ಫುಡ್ ಅಲರ್ಜಿ ಕಾರಣ ಗ್ಲೋರಿಯಾ ಊಟ ಸೇವಿಸಿದ ಬಳಿಕ ಕಾಲೇಜಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು.
ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಗ್ಲೋರಿಯಾ ಅವರಿಗೆ ಫುಡ್ ಅಲರ್ಜಿ(ಅನಾಫಿಲ್ಯಾಕ್ಟಿಕ್ ರಿಯಾಕ್ಷನ್) ಸಮಸ್ಯೆ ಇತ್ತು. ಇದರಿಂದಾಗಿ ಈ ಹಿಂದೆಯೂ ಸ್ವಲ್ಪ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ಬಳಿಕ ಚೇತರಿಸಿಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಗ್ಲೋರಿಯಾ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.
* ಉಡುಪಿ: ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ವಂಚನೆ
ಉಡುಪಿ: ಪಾರ್ಟ್ ಟೈಮ್ ಉದ್ಯೋಗ ಬಗ್ಗೆ ಆನ್ಲೈನ್ ಲಿಂಕ್ ಕ್ಲಿಕ್ಕಿಸಿ ಮಹಿಳೆಯೊಬ್ಬರು ಹಣ ಕಳೆದುಕೊಂಡ ಘಟನೆ ನಡೆದಿದೆ.
ಅರ್ಚನಾ (25) ಅವರು ಪಾರ್ಟ್ಟೈಮ್ ಜಾಬ್ ಹುಡುಕಾಟದಲ್ಲಿದ್ದರು. ಈ ಬಗ್ಗೆ ಆನ್ಲೈನ್ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಸಿಕ್ಕಿದ ಇನ್ಸ್ಟ್ರಾಗ್ರಾಮ್ನಲ್ಲಿ ಪಾರ್ಟ್ಟೈಮ್ ಜಾಬ್ ಬಗ್ಗೆ ಲಿಂಕ್ ಒಂದನ್ನು ಕ್ಲಿಕ್ ಮಾಡಿದರು. ಆಗ ಅವರಿಗೆ ಪಾರ್ಟ್ಟೈಮ್ ಜಾಬ್ ಬಗ್ಗೆ ವಾಟ್ಸಾಪ್ ಸಂದೇಶ ಬಂದಿದೆ.ಅಮೆಜಾನ್ ಪ್ರಶರ್ ಜಾಬ್ ಇನ್ ಇಂಡಿಯಾನಲ್ಲಿ ಟಾಸ್ಕ್ ನಡೆಸಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂಬುದಾಗಿ ನಂಬಿಸಲಾಗಿತ್ತು.
ಅಪರಿಚಿತ ವ್ಯಕ್ತಿ ಯುಪಿಐ ಐಡಿಗೆ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದು, ಇದನ್ನು ನಂಬಿದ ಮಹಿಳೆ ಅಪರಿಚಿತರು ಸೂಚಿಸಿದ ವಿವಿಧ ಯುಪಿಐ ಐಡಿಗೆ ಹಂತಹಂತವಾಗಿ ಒಟ್ಟು 1,94,529 ರೂ. ವರ್ಗಾಯಿಸಿ ಮೋಸ ಹೋಗಿದ್ದಾರೆ ಎಂದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಆರಂತೋಡು ಕಲ್ಲುಗುಂಡಿ: ಕಾರು ಪಲ್ಟಿ, ನಾಲ್ವರಿಗೆ ಗಾಯ
ಅರಂತೋಡು: ಕಾರೊಂದು ನಿಯಂತ್ರಣ ತಪ್ಪಿ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೂಲಿಶೆಡ್ ಸಮೀಪದ ತಿರುವಿನಲ್ಲಿ ಪಲ್ಟಿಯಾಗಿ ನಾಲ್ವರು ಗಾಯಗೊಂಡ ಘಟನೆ ನ. 13ರಂದು ಸಂಭವಿಸಿದೆ.
ಘಟನೆಯಲ್ಲಿ ವಿಶಾಲ್ ಎಂಬ ಯುವಕ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇತರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರಿನ ಯುವಕರು ಬಲೆನೊ ಕಾರಿನಲ್ಲಿ ಮಡಿಕೇರಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
* ಬಾಲಕಿಗೆ ಲೈಂಗಿಕ ಕಿರುಕುಳ ಸಾಬೀತು; ಇಬ್ಬರಿಗೆ 3 ವರ್ಷ ಜೈಲು ಶಿಕ್ಷೆ
ಉಡುಪಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಮೂಲದ ಪ್ರವೀಣ್ ಕುಮಾರ್ (20) ಮತ್ತು ಅಜಯ್ ಕುಮಾರ್ ( 19) ಅಪರಾಧಿಗಳೆಂದು ಘೋಷಿಸಿದ ಜಿಲ್ಲಾ ವಿಶೇಷ ನ್ಯಾಯಾಲಯ, ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕುಂದಾಪುರ ಮೂಲದ ಬಾಲಕಿ ಹೆತ್ತವರೊಂದಿಗೆ ಶಿವಮೊಗ್ಗದಲ್ಲಿ ವಾಸಿಸುತ್ತಿದ್ದ ಸಂದರ್ಭ ಆರೋಪಿಗಳು ಪರಿಚಯವಾಗಿದ್ದರು.
ಬಾಲಕಿ ತನ್ನ ಅಜ್ಜಿ ಮನೆ ಕುಂದಾಪುರದಿಂದ ಶಾಲೆಗೆ ಹೋಗುತ್ತಿದ್ದಳು. 2022ರ ನವೆಂಬರ್ ತಿಂಗಳ ಒಂದು ದಿನ ಆರೋಪಿಗಳಿಬ್ಬರು ಆಕೆಯನ್ನು ಪುಸಲಾಯಿಸಿ ಹಾಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದರು. ಬಾಲಕಿ ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಆರೋಪಿತರು ಪರಾರಿಯಾಗಿದ್ದರು.
ಸಂಬಂಧಿಕರು ಬಾಲಕಿಯನ್ನು ಹುಡುಕಾಡಿದಾಗ ಹಾಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಲೈಂಗಿಕ ಕಿರುಕುಳ ನೀಡಿರುವ ವಿಚಾರ ಬೆಳಕಿಗೆ ಬಂದಿತ್ತು. ಆಕೆಯ ಅಜ್ಜ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಕುಂದಾಪುರ ಸಿಐ ಗೋಪಿಕೃಷ್ಣ ಕೆ.ಆರ್. ದೋಷರೋಪಣ ಪಟ್ಟಿ ಸಲ್ಲಿಸಿದ್ದರು