ಕರಾವಳಿ ಟಾಪ್ ನ್ಯೂಸ್
– ಸ್ನಾನ ಮಾಡುವಾಗ ವಿಡಿಯೋ: 5 ವರ್ಷ ಜೈಲು!
– ಸುರತ್ಕಲ್: ದುಷ್ಕರ್ಮಿಗಳಿಂದ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ
– ಮಂಗಳೂರು: ಸ್ನಾನ ಮಾಡುವಾಗ ವಿಡಿಯೋ ಪ್ರಕರಣ, ಶಿಕ್ಷೆ ಪ್ರಕಟ!
– ಪುತ್ತೂರು: ಮನೆಗೆ ನುಗ್ಗಿ ಲಕ್ಷಾಂತರ ರೂ.ಚಿನ್ನಾಭರಣ ಹಾಗೂ ನಗದು ಕಳ್ಳತನ!
– ಮಂಗಳೂರು: ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ವಂಚನೆ : ಆರೋಪಿಯ ಬಂಧನ
– ಮಂಗಳೂರು: ವಂಚನೆ ಪ್ರಕರಣ : ಆರೋಪಿಯ ಬಂಧನ
NAMMUR EXPRESS NEWS
ಸುರತ್ಕಲ್ : ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕ, ಚಾಲಕ ಹಾಗೂ ಒಬ್ಬ ಪ್ರಯಾಣಿಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಕುಳಾಯಿಯಲ್ಲಿ ಡಿ.21ರ ಬೆಳ್ಳಗ್ಗೆ ನಡೆದಿದೆ. ರಾಜಲಕ್ಷ್ಮೀ ಬಸ್ ನಲ್ಲಿ ಈ ಘಟನೆ ಸಂಭವಿಸಿದೆ. ಜಯರಾಮ್ ಆಚಾರ್ಯ, ಪ್ರಾಹ್ಲಾದ್ ಆಚಾರ್ಯ ಹಾಗೂ ಪ್ರಸಾದ್ ಎಂಬ ಮೂವರು ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ರಾಜಲಕ್ಷ್ಮೀ ಬಸ್ ಚಾಲಕ ಹಾಗೂ ನಿರ್ವಾಹಕ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆ ನಡೆಸಿದ ಈ ಆರೋಪಿಗಳು ಸಂಘಟನೆಯ ಪ್ರಮುಖರು ಎಂದು ತಿಳಿದುಬಂದಿದೆ.
ಕುಳಾಯಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಈ ಮೂವರು ದುಷ್ಕರ್ಮಿಗಳು ಗಲಾಟೆ ನಡೆಸಿದ್ದಾರೆ. ಜೊತೆಗೆ ಬೇರೆ ಬಸ್ ಗಳನ್ನು ತಡೆದು ಅವಾಚ್ಯವಾಗಿ ಬೈದು ತೊಂದರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಮಂಗಳೂರು: ಸ್ನಾನ ಮಾಡುವಾಗ ವಿಡಿಯೋ ಪ್ರಕರಣ, ಶಿಕ್ಷೆ ಪ್ರಕಟ!
ಮಂಗಳೂರು: ಅಪ್ರಾಪ್ತೆ ಹಾಗೂ ವಿವಾಹಿತೆಯ ಸ್ನಾನ ಮಾಡುತ್ತಿರುವುನ್ನು ಮೊಬೈಲ್ನಲ್ಲಿ ವೀಡಿಯೋ ಚಿತ್ರೀಕರಿಸಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ -1 (ಪೋಕ್ಸ್) ನ್ಯಾಯಾಲಯ 5ವರ್ಷಗಳ ಕಾರಾಗೃಹ ಶಿಕ್ಷೆ 15ಸಾವಿರ ರೂ. ದಂಡ ವಿಧಿಸಿದೆ.
ಶಿಕ್ಷೆಗೊಳಗಾದ ಅಪರಾಧಿಯನ್ನು ಮಂಗಳೂರಿನ ಸ್ಯಾಂಡ್ ಪಿಟ್ ಬೆಂಗ್ರೆ ನಿವಾಸಿ ಮುಹಮ್ಮದ್ ರಂಶೀದ್ ಅಲಿಯಾಸ್ ರಮ್ಶಿ ಎಂದು ಗುರುತಿಸಲಾಗಿದೆ. 2024ರ ಜು.5 ಮತ್ತು 7ರಂದು ರಾತ್ರಿ ಆರೋಪಿ ರಂಶೀದ್ ಅಪ್ರಾಪ್ತೆ ಮತ್ತು ವಿವಾಹಿತೆ ಮನೆಯ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿರುವ ವೀಡಿಯೊ ಚಿತ್ರೀಕರಿಸಿದ್ದಾನೆ. ಜು. 16ರಂದು ಇನ್ನೊಂದು ಮನೆಯ ಟೆರೇಸ್ ಮೇಲೆ ವೀಡಿಯೊ ಮಾಡುವ ಉದ್ದೇಶದಿಂದ ಹೋಗಿದ್ದಾನೆ. ಆ ಮನೆಯವರು ಗಮನಿಸಿದ್ದರಿಂದ ಈತ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವೇಳೆ ಮೊಬೈಲ್ ಕೆಳಗೆ ಬಿದ್ದಿದೆ. ಮನೆಯವರು ಆತನನ್ನು ಪತ್ತೆಹಚ್ಚಿ ಆತನ ಮೂಲಕವೇ ಮೊಬೈಲ್ ಲಾಕ್ ತೆಗೆಸಿ ನೋಡಿದಾಗ ಬಾತ್ರೂಂನಲ್ಲಿ ಸ್ನಾನ ಮಾಡುತ್ತಿದ್ದ ವೀಡಿಯೊ ಪತ್ತೆಯಾಗಿದೆ. ಮಹಿಳೆ ನೀಡಿರುವ ದೂರಿನಂತೆ ಆತನ ವಿರುದ್ಧ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಆರೋಪಿ ರಂಶೀದ್ ಅಲಿಯಾಸ್ ರಮ್ಶಿಗೆ ಶಿಕ್ಷೆ ಪ್ರಕಟವಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ಹೆಚ್ಚುವರಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಆರೋಪಿಯು ಜಾಮೀನು ಪಡೆಯಲು ಸಾಧ್ಯವಾಗದ ಕಾರಣ ಕಳೆದ ಐದು ತಿಂಗಳಿನಿAದ ನ್ಯಾಯಾಂಗ ಬಂಧನದಲ್ಲಿದ್ದ. ಈ ಸಮಯದಲ್ಲಿ, ವಿಚಾರಣೆ ಪೂರ್ಣಗೊಂಡಿತು, ಮತ್ತು ಅವನ ಅಪರಾಧ ಸಾಬೀತಾಗಿದೆ.
* ಪುತ್ತೂರು: ಮನೆಗೆ ನುಗ್ಗಿ ಲಕ್ಷಾಂತರ ರೂ.ಚಿನ್ನಾಭರಣ ಹಾಗೂ ನಗದು ಕಳ್ಳತನ!!
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪ ಮನೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನಗೈದ ಘಟನೆ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ಹಾಡ ಹಾಗಲೇ ಘಟನೆ ನಡೆದ ವರದಿಯಾಗಿದೆ. ಭಕ್ತಕೋಡಿ ಸರಕಾರಿ ಆಸ್ಪತ್ರೆ ಬಳಿಯ ಕಿಶೋರ್ ಅವರ ಮನೆಯ ಹಿಂಬಾಗಿಲನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ಮನೆಯ ಕಪಾಟಿನಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ. ಸುಮಾರು 11 ಪವನ್ ಚಿನ್ನ ಕಳ್ಳರ ಪಾಲಾಗಿದೆ ಎನ್ನಲಾಗಿದೆ. ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
* ಮಂಗಳೂರು: ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ವಂಚನೆ : ಆರೋಪಿಯ ಬಂಧನ
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ಆಮಿಷವೊಡ್ಡಿದ ಪ್ರಕರಣದಲ್ಲಿ ಒಡಿಶಾದ ಗಂಜಂ ಜಿಲ್ಲೆಯ ಕಣಾತಲ ವಾಸುದೇವ ರೆಡ್ಡಿ (25) ಎಂಬಾತನನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ. ದೂರುದಾರರೊಬ್ಬರಿಗೆ ಲಿಂಕ್ ಕಳುಹಿಸಿ ಹಂತಹಂತವಾಗಿ ಅವರಿಂದ 10,84,017 ರೂ. ಪಡೆದು ವಂಚನೆ ಮಾಡಿದ್ದ. ಈ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ಈಗಾಗಲೇ ಪ್ರಕರಣದಲ್ಲಿ ದಸ್ತಗಿರಿಯಾಗಿದ್ದ ನಡವೂಲು ವೀರ ವೆಂಕಟ ಸತ್ಯ ನಾರಾಯಣ ರಾಜು ಎಂಬಾತನ ಹೇಳಿಕೆಯಂತೆ ವಾಸುದೇವ ರೆಡ್ಡಿ ಎಂಬಾತನನ್ನು ಹೊಸ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆತ ದುಬಾೖಗೆ ತೆರಳುತ್ತಿದ್ದಾಗ ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದು ಸೆನ್ ಪೊಲೀಸರಿಗೆ ಹಸ್ತಾಂತರಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ರವಿಶಂಕರ್ ಮಾರ್ಗದರ್ಶನದಂತೆ ಸೆನ್ ಠಾಣಾಧಿಕಾರಿಯಾದ ಎಸಿಪಿ ರವೀಶ್ ನಾಯಕ ಮತ್ತು ಸೆನ್ ನಿರೀಕ್ಷಕರಾದ ಸತೀಶ್ ಎಂ.ಪಿ. ಭಾಗವಹಿಸಿದ್ದಾರೆ.
* ಮಂಗಳೂರು: ವಂಚನೆ ಪ್ರಕರಣ : ಆರೋಪಿಯ ಬಂಧನ
ಮಂಗಳೂರು: ನಗರದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಭಾರಿ ಲಾಭಗಳಿಸಬಹುದೆಂಬ ಮಿಷವೊಡ್ಡಿ ಲಕ್ಷಾಂತರ ರೂ.ವಂಚನೆ ಮಾಡಿದ ಪ್ರಕರಣದಲ್ಲಿ ಕೇರಳ ನಿವಾಸಿ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿ ಕೇರಳ ಕೋಝಿಕ್ಕೋಡ್ ಪುಳಕ್ಕಲ್ ನಿವಾಸಿ ಜಯಂತ್ ಪಿ. (35) ಎಂದು ಗುರುತಿಸಲಾಗಿದೆ.
ದೂರುದಾರರಿಗೆ ಯಾರೋ ಅಪಚಿರಿತ ವ್ಯಕ್ತಿ ವಾಟ್ಸಪ್ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ತಿಳಿಸಿ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ ಲಿಂಕ್ನ್ನು ಕಳುಹಿಸಿದ್ದಾನೆ. ಬಳಿಕ ಹಂತ ಹಂತವಾಗಿ ಒಟ್ಟು 40,64,609ರೂ. ಹಣವನ್ನು ಪಡೆದು ವಂಚನೆ ಮಾಡಿದ್ದಾನೆ. ಜಯಂತ್ ನ ಬ್ಯಾಂಕ್ ಖಾತೆಯ ಮೇಲೆ ದೇಶದ್ಯಾಂತ ಸುಮಾರು 90ಕ್ಕೂ ಹೆಚ್ಚಿನ ದೂರು ಇರುವುದು ತನಿಖೆಯ ವೇಳೆ ಕಂಡುಬಂದಿದೆ. ಈ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ರವಿಶಂಕರ್ ಮಾರ್ಗದರ್ಶನದಂತೆ ಸೆನ್ ಠಾಣಾಧಿಕಾರಿ ಎಸಿಪಿ ರವೀಶ್ ನಾಯಕ ಮತ್ತು ಸೆನ್ ನಿರೀಕ್ಷಕರಾದ ಸತೀಶ್ ಎಂ.ಪಿ. ಪಾಲ್ಗೊಂಡಿದ್ದರು.