ಕರಾವಳಿ ಟಾಪ್ ನ್ಯೂಸ್
– ಉಡುಪಿ ಶಾರದಾ ರೆಸಿಡೆನ್ಸಿಯಲ್ ಶಾಲೆಗೆ ಬಾಂಬ್ ಬೆದರಿಕೆ! – ಉಡುಪಿ: ಬೆಂಕಿ ದುರಂತ, ಬೆಳೆಬಾಳುವ ವಸ್ತು ಸುಟ್ಟು ಕರಕಲು!
– ಬಜ್ಪೆ: ಭೂಗತ ಪಾತಕಿ ಹೆಸರಿನಲ್ಲಿ ಉದ್ಯಮಿಗೆ ಬೆದರಿಕೆ ಕರೆ
– ಉಡುಪಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಬಂಧನ
NAMMUR EXPRESS NEWS
ಉಡುಪಿ: ಉಡುಪಿಯ ಪ್ರತಿಷ್ಠಿತ ವಸತಿ ಶಾಲೆಯಾದ ಶಾರದಾ ಶಾಲೆಗೆ ಬಾಂಬ್ ಬೆದರಿಕೆಪ್ರಕರಣದಲ್ಲಿ ಆರೋಪಿತನು ಅಪರಿಚಿತನಾಗಿದ್ದರಿಂದ, ಆರೋಪಿತನ ಪತ್ತೆಗೆ ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತು. ಹಲವಾರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಆರೋಪಿಯ ಮಾಹಿತಿಯನ್ನು ಸಾರ್ವಜನಿಕರಿಗೂ ಪ್ರಚಾರಪಡಿಸಲಾಗಿತ್ತು. ಸಾರ್ವಜನಿಕರ ಸಹಾಯ ಮತ್ತು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಸತತ ಪ್ರಯತ್ನದಿಂದ, ಜ. 26ರ ಭಾನುವಾರ ಸಂಜೆ ಆರೋಪಿ ಮುತ್ತುನನ್ನು ಉಡುಪಿ ಶ್ರೀಕೃಷ್ಣ ಮಠದ ಪರಿಸರದ ವಾದೀರಾಜ 3ನೇ ಕ್ರಾಸ್ ಬಳಿ ಬಂಧಿಸಲಾಯಿತು.
ಆರೋಪಿ ಉಡುಪಿಯಲ್ಲಿ ಯಾವುದೇ ವಿಳಾಸವನ್ನು ಹೊಂದದೆ ಅಲೆಮಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.