ಅದ್ಧೂರಿಯಾಗಿ ನಡೆಯುತ್ತಿರುವ ಅತ್ತೂರು ಜಾತ್ರೆ
– 21ರಿಂದ 26ರ ಸತತ 6 ದಿನಗಳ ಜಾತ್ರೆ!
– ಸರ್ವಧರ್ಮ ಏಕತೆಯನ್ನು ಎತ್ತಿ ತೋರಿಸುವ ಹಬ್ಬ!
– ಹರಕೆ ತೀರಿಸಿದ ಯು.ಟಿ ಖಾದರ್!
NAMMUR EXPRESS NEWS
ಕಾರ್ಕಳ: ಸಂತ ಲಾರೆನ್ಸ್ ಪುಣ್ಯ ಕ್ಷೇತ್ರ ಅತ್ತೂರು ಬಸಿಲಿಕಾದ ವಾರ್ಷಿಕ ಮಹೋತ್ಸವ (ಅತ್ತೂರು ಜಾತ್ರೆ) ಜ.21ರಿಂದ ಶುರುವಾಗಿದ್ದು ನಾಳೆ ಅಂದರೆ 26ರ ವರೆಗೆ ಅದ್ಧೂರಿಯಾಗಿ ನಡೆಯುತ್ತಿದೆ. ಸರ್ವಧರ್ಮ ಏಕತೆಯ ಹಬ್ಬವಾಗಿ ನಡೆಯುತ್ತಿರುವ ಬಸಿಲಿಕಾದ ಅತ್ತೂರು ಜಾತ್ರೆ ‘ಕೇಳಿರಿ ನಿಮಗೆ ಕೊಡಲಾಗುವುದು’ ಎಂಬ ವಿಷಯದೊಂದಿಗೆ ನಡೆಯುವ ಜಾತ್ರೆಯಾಗಿದೆ. 6 ದಿನಗಳ ಈ ಉತ್ಸವದಲ್ಲಿ ಕೊಂಕಣಿ ಭಾಷೆಯಲ್ಲಿ 45. ಕನ್ನಡದಲ್ಲಿ 3 ಸೇರಿದಂತೆ ಒಟ್ಟು 48 ಬಲಿ ಪೂಜೆಗಳು ನಡೆಯಲಿವೆ.
ಕಾರ್ಕಳಕ್ಕೆ ಬೇಟಿ ಕೊಟ್ಟ ಸ್ಪೀಕರ್ :
ಬಸಿಲಿಕದ ವಾರ್ಷಿಕ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಪತಿ ಹಾಗೂ ಉಳ್ಳಾಲ ವಿಧಾನ ಸಭೆಯ ಶಾಸಕ ಯು.ಟಿ.ಖಾದರ್ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಂತ ಲಾರೆನ್ಸ್ ದರ್ಶನ ಪಡೆದು ಕ್ಯಾಂಡಲ್ ಉರಿಸುವ ಮೂಲಕ ಹರಕೆ ತಿರಿಸಿದರು. ಬಸಿಲಿಕಾದ ನಿರ್ದೇಶಕ ಅ.ವಂ. ಅಲ್ಬನ್ ಡಿಸೋಜಾ ರವರು ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಅವರಿಗೆ ಸ್ವಾಗತಿಸಿ, ಶಾಲು ಹೊದಿಸಿ ಗೌರವದೊಂದಿಗೆ ಸನ್ಮಾನಿಸಿದರು. ಸರ್ವ ಧರ್ಮಗಳ ಭಾವೈಕ್ಯಯ ಸಂದೇಶ ಸಾರುವ ಸಂತ ಲಾರೆನ್ಸ್ ಬಸಿಲಿಕ ಪುಣ್ಯ ಕ್ಷೇತ್ರವು ಸರ್ವ ಜನತೆಗೆ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಶುಭಹಾರೈಸಿದರು. ಅಧ್ಯಾತ್ಮಕ ಧರ್ಮಗುರು ರೋಮನ್ ಮಸ್ಕರಸ್, ಸಹಾಯಕ ಧರ್ಮ ಗುರು ಲ್ಯಾರಿ ಪಿಂಟೋ, ಆಡಳಿತ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿ ಸಿಲ್ವ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಪಾಲನಾ ಮಂಡಳಿಯ ಸದಸ್ಯರುಗಳಾದ ವಂದೀಶ್ ಮಥಾಯಿಸ್, ಪ್ರಕಾಶ್ ಪಿಂಟೋ, ರಿತೇಶ್ ಪಿಂಟೋ ರೋಶನ್ ಸಾಲಿಸ್ ಮೊದಲಾದವರು ಉಪಸ್ಥಿತರಿದ್ದರು.