- ಸಿಎಂ ತವರು ಶಿವಮೊಗ್ಗದಲ್ಲಿ ಕರೋನಾ ಅಟ್ಟಹಾಸ
- ದಿನ ನಿತ್ಯ ಹತ್ತಾರು ಸಾವು, ಸಾವಿರಾರು ಕೇಸ್
- ಅರೋಗ್ಯ ಸೌಲಭ್ಯ ಕೊರತೆ ಕಾರಣ..?
NAMMUR EXPRESS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ 793 ಜನರಲ್ಲಿ ಸೋಂಕು ಪತ್ತೆಯಾಗಿದ್ದು12 ಮಂದಿ ಸಾವನ್ನು ಕಂಡಿದ್ದಾರೆ. ಆದ್ರೆ ಪ್ರಕರಣ, ಸಾವಿನ ಸಂಖ್ಯೆ ಕಡಿಮೆ ಆಗಿಲ್ಲ.
ಜನ ಹೊರ ಬಾರದ ಕಾರಣ ಕರೋನಾ ಟೆಸ್ಟ್ ಮಾಡಿಸಿಲ್ಲ. ಆದರೂ ಕೇಸ್ ಕಡಿಮೆ ಆಗಿಲ್ಲ.
ಶಿವಮೊಗ್ಗ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6861 ಆಗಿದೆ. ಬುಧವಾರ ಜಿಲ್ಲೆಯಲ್ಲಿ 12 ಜನ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಇದುವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 832ಕ್ಕೇರಿದೆ.
ಭಾರೀ ಬಂದೋಬಸ್ತ್! ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಲ್ಲು ಆಡಳಿತ ಮತ್ತು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಎಲ್ಲಾ ಕಡೆ ಅಗತ್ಯ ವಸ್ತು ಬಿಟ್ಟರೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಬುಧವಾರ ಎಷ್ಟು ಕೇಸ್?: ಶಿವಮೊಗ್ಗ 285,ಭದ್ರಾವತಿ 150,ಶಿಕಾರಿಪುರ 87,ತೀರ್ಥಹಳ್ಳಿ 49,ಸೊರಬ 51,ಹೊಸನಗರ 76,ಸಾಗರ 69,ಇತರೆ ಜಿಲ್ಲೆ 26.
ಕರೋನಾ ಅಲೆಯಲ್ಲಿ ವಯೋವೃದ್ಧರು, ಯುವ ಜನತೆ, ಮಕ್ಕಳು ಬಲಿಯಾಗುತ್ತಿದ್ದಾರೆ. ಹೀಗಾಗಿ ಎಲ್ಲಾ ಕಡೆ ಜನ ಕರೋನಾ ನಿಯಮ ಪಾಲಿಸಬೇಕು. ಇಲ್ಲವಾದರೆ ಮತ್ತಷ್ಟು ಸಂಕಷ್ಟ ಎದುರಿಸಬೇಕಿದೆ.