- ಮರಳು, ಕಲ್ಲು,ಭೂ ಒತ್ತುವರಿ, ಅರಣ್ಯ ಅಕ್ರಮ
- ಹಳ್ಳಿ ಹಳ್ಳಿಯಲ್ಲೂ ಅಕ್ರಮ ಮದ್ಯದ ಅಮಲು
- ಬಾಲಕಿ ಮೇಲೆ ರೇಪ್: ಓರ್ವ ಅರೆಸ್ಟ್..!
- ತಂದೆಯನ್ನು ಕೊಡಲಿಯಿಂದ ಕೊಚ್ಚಿದ ಮಗ!
ಮಲೆನಾಡು: ಮಲೆನಾಡಲ್ಲಿ ಒಂದು ಕಡೆ ಕರೋನಾ ಕೇಕೆ ಹಾಕಿ ನೂರಾರು ಬಲಿ ಪಡೆಯುತ್ತಿದೆ. ಪ್ರತಿ ದಿನ ಜನ ಹಾಸಿಗೆ ಮೇಲೆ ನರಳಾಟ ನಡೆಸುತ್ತಿದ್ದಾರೆ. ಆದರೆ ಅಕ್ರಮಗಳು ಹೆಚ್ಚಿವೆ. ರಾತ್ರಿ ಹಗಲು ಕಲ್ಲು, ಮರಳು, ಮರ, ಭೂ ಒತ್ತುವರಿ, ಅಕ್ರಮ ಮದ್ಯ ಸೇರಿದಂತೆ ಅನೇಕ ಅಕ್ರಮಗಳು ಸದ್ದಿಲ್ಲದೇ ನಡೆಯುತ್ತಿದೆ. ಮಲೆನಾಡಿನ ತೀರ್ಥಹಳ್ಳಿ, ಶೃಂಗೇರಿ, ಹೊಸನಗರ, ಸಾಗರ, ಕೊಪ್ಪ ಸೇರಿ ಇಲ್ಲಾ ತಾಲೂಕಲ್ಲಿ ಅಕ್ರಮ ಒಳಗಿಂದ ನಡೆಯುತ್ತಿದೆ.
ತೀರ್ಥಹಳ್ಳಿಯಲ್ಲಿ ಕರೋನಾ ನಡುವೆಯೂ ಕುರುವಳ್ಳಿ ಸೇರಿ ಹಲವೆಡೆ ಕಲ್ಲು ಅಕ್ರಮ ನಡೆಯುತ್ತಿದೆ. ಮರಳು ಕ್ವಾರಿಗಳಲ್ಲಿ ಡಬಲಿಂಗ್ ನಡೆಯುತ್ತಿದೆ. ಅಕ್ರಮಕ್ಕೆ ಕೆಲವರ ಸಾಥ್ ಕಾಣುತ್ತಿದೆ.
ಪ್ರತಿ ಹಳ್ಳಿಯಲ್ಲಿ ಅರಣ್ಯ ನಾಶ ಆಗುತ್ತಿದೆ. ಭೂ ಒತ್ತುವರಿ ಕಾಣುತ್ತಿದೆ. ಅಕ್ರಮವಾಗಿ ತೋಟ ಮಾಡಲಾಗುತ್ತಿದೆ. ಮಣ್ಣು ಅಗೆಯಲಾಗುತ್ತಿದೆ. ಕರೋನಾ ನಡುವೆಯೂ ಜನರು ಅರಣ್ಯ ಲೂಟಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಎಲ್ಲದರಲ್ಲೂ ಹಣ ಮಾಡುವ ಪ್ಲಾನ್ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅಕ್ರಮ ಮದ್ಯ: ಅಬಕಾರಿ ಇಲಾಖೆ ನಿದ್ದೆ ಮಾಡುತ್ತಿದೆ. ಇಲ್ಲಾ ವೈನ್ಸ್ ಮಾಲೀಕರ ಜತೆ ಶಾಮೀಲಾಗಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಅಕ್ರಮ ಮದ್ಯ ಸಿಗುತ್ತಿದೆ. ಕದ್ದು ಮುಚ್ಚಿ ಮಾರಲಾಗುತ್ತಿದೆ. ಅಬಕಾರಿ ಇಲಾಖೆ ಇದ್ದು ಇಲ್ಲದಂತಾಗಿದೆ.
ತೀರ್ಥಹಳ್ಳಿಯ ಬೆಜ್ಜವಳ್ಳಿಯಲ್ಲಿ ಓರ್ವ ಯುವಕ ಮದ್ಯ ಚಟಕ್ಕೆ ಬಲಿಯಾಗಿದ್ದಾನೆ.. ಮೂಡಿಗೆರೆ ಬಾಳೂರು ವ್ಯಾಪ್ತಿಯಲ್ಲಿ ಮದ್ಯ ಕುಡಿಯಲು ಹಣ ಕೊಡದಕ್ಕೆ, ಕುಡಿದ ಮತ್ತಲ್ಲಿ ಯುವಕ ತಂದೆ ತಾಯಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಮೂಡಿಗೆರೆ ತಾಲೂಕು ಚನ್ನಹಡ್ಲು ಬಳಿ ಘಟನೆ ನಡೆದಿದೆ. ಹಲ್ಲೆಯಲ್ಲಿ ತಂದೆ ಗಂಭೀರ ಗಾಯಗೊಂಡಿದ್ದಾರೆ. ಬಳಿಕ ಮಗನೆ ಪೊಲೀಸರಿಗೆ ಶರಣಾಗಿದ್ದಾನೆ.
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಬಳಿ ಸಿಂಗನಬಿದಿರೆಯಲ್ಲಿ ತನ್ನ ಅಕ್ಕನ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಮಾವ ಜೈಲು ಪಾಲಾಗಿದ್ದಾನೆ. ಕರೋನಾ ವೇಳೆ ಈ ಘಟನೆ ನಡೆದಿದೆ.