- ತೀರ್ಥಹಳ್ಳಿ ಪಟ್ಟಣದ ಸಮೀಪವೇ ಘಟನೆ
- ಮೇಳಿಗೆ ಬಳಿ ದ್ವೇಷಕ್ಕೆ ಅಡಿಕೆ ಮರ ಕಡಿತಲೆ
- ಸಹಾಯವಾಣಿಗೆ ಕಾಲ್ ಮಾಡಲು ನೆಟ್ವರ್ಕ್ ಇಲ್ಲ!
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಹತ್ತಿರ ವಾಟಗಾರು ಗ್ರಾಮದಲ್ಲಿ ಕಾಡಿನಲ್ಲಿ ಕಾಡು ಕೋಣದ ಶವವೊಂದು ಪತ್ತೆಯಾಗಿದೆ . ಶಿಕಾರಿಯಿಂದ ಹತ್ಯೆ ಮಾಡಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಸುಮಾರು 8 -10 ದಿನಗಳ ಹಿಂದೆ ಈ ಕೋಣವು ಸತ್ತು ಬಿದ್ದಿರುವಂತೆ ಕಂಡುಬರುತ್ತಿದೆ ಎಂದು ಹೇಳಲಾಗಿದೆ. ಶಿಕಾರಿಯ ಗುಂಡು ತಗಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಡಿಕೆ ಮರ ಕಡಿತ.. ದ್ವೇಷ ಕಾರಣ..!
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮೇಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರಡಿಗದ್ದೆಯಲ್ಲಿ 25-30 ಅಡಿಕೆ ಸಸಿಗಳನ್ನು ವಯುಕ್ತಿಕ ದ್ವೇಷ ಕಡಿದಿದ್ದಾರೆ ಎಂದು ಹೇಳಲಾಗಿದೆ. ಗರಡಿಗದ್ದೆ ಶ್ರೀನಿವಾಸ್ ಎಂಬುವರ ತೋಟ ಕಡಿಯಲಾಗಿದೆ. ಈ ಬಗ್ಗೆ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ಶ್ರೀನಿವಾಸ್ ಪತ್ನಿ ಮೇಲೂ ಹಲ್ಲೆ ನಡೆದು ದೂರು ದಾಖಲಾಗಿತ್ತು. ಈ ಪ್ರಕರಣ ಕೋರ್ಟ್ ಅಲ್ಲಿ ಇರುವಾಗಲೇ ಈ ಘಟನೆ ನಡೆದಿದೆ.
ಸಹಾಯವಾಣಿಯೂ “ನಾಟ್ ರೀಚಬಲ್”!
ನೆಟ್ವರ್ಕ್ ಸಮಸ್ಯೆಯಿಂದ ಜನ ಕಂಗಾಲು!
ತೀರ್ಥಹಳ್ಳಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಯಾವುದೇ ನೆಟ್ವರ್ಕ್ ಸಿಗುತ್ತಿಲ್ಲ. ಬಿಎಸ್ಎನ್ಎಲ್, ಏರ್ಟೆಲ್, ಜಿಯೋ ಟವರ್ ಕೆಲಸ ಮಾಡುತ್ತಿಲ್ಲ. ಇದರಿಂದ ಸಾವಿರಾರು ಜನ ಸಮಸ್ಯೆಗೆ ಒಳಗಾಗಿದ್ದಾರೆ. ಬೆಂಗಳೂರು ಸೇರಿ ಎಲ್ಲಾ ಕಡೆಯಿಂದ ಬಂದ ವರ್ಕ್ ಫ್ರಮ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಪ್ರತಿ ಊರಲ್ಲೂ ಹೋರಾಟ ನಡೆಯಬೇಕಿದೆ.
ಎಲ್ಲಾ ಸುದ್ದಿಗಳಿಗೆ NAMMUR EXPRESS ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!. ತಾಲೂಕಿನ ಎಲ್ಲರಿಗೂ ಶೇರ್ ಮಾಡಿ..!.