- 3 ದಿನ ಮಳೆ ಸಾಧ್ಯತೆ: ಮೋಡ ಕವಿದ ವಾತಾವರಣ
- ಯಾಸ್ ಚಂಡ ಮಾರುತ ಎಫೆಕ್ಟ್: ತಂಡಿ ಹವಾ
- ಕೃಷಿ ಚಟುವಟಿಕೆ ಎಲ್ಲೆಡೆ ಚುರುಕು..!
- ಕಾಡು ನಾಶ ಮಾಡಬೇಡಿ, ಹಸಿರು ಗಿಡ ನೆಡಿ..!
ಬೆಂಗಳೂರು: ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗುವ ಸಾಧ್ಯತೆಯಿದ್ದು ಮೂರ್ನಾಲ್ಕು ದಿನ ಮಳೆ ಸಾಧ್ಯತೆ ಇದೆ.
ಕೇರಳಕ್ಕೆ ಮೇ 31ರಂದು ಪ್ರವೇಶಿಸಲಿರುವ ಮುಂಗಾರಿನಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1ರಂದು ನೈಋತ್ಯ ಮುಂಗಾರು ಕೇರಳ ರಾಜ್ಯ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 5ರಂದು ಪ್ರವೇಶಿಸುವ ನಿರೀಕ್ಷೆ ಇದೆ.ರಾಜ್ಯದ್ಲಲಿ ಮೇ 29ರವರೆಗೆ ಮಳೆ ಮುಂದುವರೆಯಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತರು ಕೃಷಿ ಕಾಯಕಲ್ಲಿ ತೊಡಗಿಕೊಂಡಿದ್ದು, ಮುಂಗಾರು ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಲಾಕ್ ಡೌನ್ ಹಿನ್ನೆಲೆ ಎಲ್ಲಾ ಕಡೆ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಮನೆ ಮನೆಯಲ್ಲೂ ಸಣ್ಣ ಪುಟ್ಟ ಮನೆ ಕೆಲಸ, ಕೃಷಿ ಕೆಲಸ ನಡೆಯುತ್ತಿದೆ.
ಕೃಷಿಯ ಅತೀ ಆಸೆಯಿಂದ ಮಲೆನಾಡಲ್ಲಿ ಭಾರೀ ಕಾಡು ನಾಶವಾಗುತ್ತಿದೆ. ದಯವಿಟ್ಟು ಅರಣ್ಯ ನಾಶ ಮಾಡಬೇಡಿ. ಪ್ರತಿ ಮನೆಯಲ್ಲೂ ಗಿಡ ನೆಡಿ. ಪರಿಸರ ಕಾಪಾಡಿ..!.