- ಶಾಲೆ ಓಪನ್ ಡೌಟು: ಆನ್ಲೈನ್ ಶಿಕ್ಷಣಕ್ಕೆ ವ್ಯವಸ್ಥೆ
- ಸರಕಾರಿ ಶಾಲೆ ಮಕ್ಕಳಿಗೆ ಟ್ಯಾಬ್ ಭಾಗ್ಯ..?
- ಇನ್ನು ಪರೀಕ್ಷೆ ಆಗಿಲ್ಲ: ಪೋಷಕರಿಗೆ ಗೊಂದಲ
ಬೆಂಗಳೂರು: ಕರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೈಕ್ಷಣಿಕ ವರ್ಷವನ್ಮು ಜೂನ್ 15 ರಿಂದ ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಪ್ರೌಢಶಾಲಾ ಬೇಸಿಗೆ ಅವಧಿಯನ್ನು 15 ದಿನಗಳ ಕಾಲ ಮುಂದುವರಿಸಲಾಗಿದೆ. ಆದರೆ ಇನ್ನು ಎಲ್ಲಿಯೂ ಸಿದ್ಧತೆ ನಡೆದಿಲ್ಲ. ಎಲ್ಲಾ ಕಡೆ ಲಾಕ್ ಡೌನ್ ಇರುವಾಗ ಸರಕಾರದ ಈ ಆದೇಶ ಕುತೂಹಲ ಮೂಡಿಸಿದೆ.
ಜೂ.14ರವರೆಗೆ ಬೇಸಿಗೆ ರಜೆ ವಿಸ್ತರಿಸಲಾಗಿದೆ. ಆದರೆ, ಜೂನ್ 15ರಿಂದ 8, 9, 10ನೆ ತರಗತಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ಅವಧಿಯನ್ನು ಶಿಕ್ಷಣ ಇಲಾಖೆ ಮತ್ತೆ ಪರಿಷ್ಕರಿಸಿದೆ.
ಸರಕಾರಿ ಶಾಲೆಯ ಶೇ.70ರಷ್ಟು ಮಕ್ಕಳಿಗೆ ಆನ್ಲೈನ್ ಪಾಠಗಳನ್ನು ಕೇಳಲು ಸಾಧ್ಯವಾಗಿಲ್ಲ. ಕೆಲ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಗಳಿಂದ ಮಕ್ಕಳಿಗೆ ಟ್ಯಾಬ್ ಕೊಡಿಸುವ ಪ್ರಯತ್ನ ನಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಇನ್ನು ನಡೆದಿಲ್ಲ. ಡಿಗ್ರಿ, ಡಿಪ್ಲೋಮೋ, ಇಂಜಿನಿಯರಿಂಗ್ ಪರೀಕ್ಷೆಗಳು ಕೂಡ ನಡೆದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದೆ.