- ಕರೋನಾ ತುರ್ತು ವೇಳೆ ಅಧಿಕಾರಿಗಳ ದಾಳಿ
- 2 ಕಡೆ ಮದ್ಯ ವಶ: ಮದ್ಯ ಮಾರಿದ್ರೆ ಹುಷಾರ್
- ಹಳ್ಳಿಗಳ ಮೇಲೆ ಈಗ ಅಬಕಾರಿ ಅಧಿಕಾರಿಗಳ ಕಣ್ಣು
NAMMUR EXPRESS
ತೀರ್ಥಹಳ್ಳಿ: ಕರೋನಾ ಸಂಕಷ್ಟದಲ್ಲಿ ಹಣ ಇಲ್ಲದೆ ಜನ ಬೀದಿಯಲ್ಲಿ ಸಾಯುತ್ತಿದ್ದಾರೆ. ಚಿಕಿತ್ಸೆ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಈ ನಡುವೆ ಲಾಕ್ ಡೌನ್ ಹಿನ್ನೆಲೆ ಎಲ್ಲಾ ಮದ್ಯದಂಗಡಿ ಬಂದ್ ಮಾಡಲಾಗಿದೆ. ಆದ್ರೆ ಹಳ್ಳಿಗಳಲ್ಲಿ ಅಂಗಡಿ, ಗೂಡಂಗಡಿ, ಚಿಕನ್ ಅಂಗಡಿಗಳಲ್ಲಿ ಅಕ್ರಮ ಮದ್ಯ ಎಂಆರ್ಪಿಗೂ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮನೆ ಮನೆಯಲ್ಲಿ ನೆಮ್ಮದಿ ಮರೆಯಾಗಿದೆ. ಈ ನಡುವೆ ತೀರ್ಥಹಳ್ಳಿ ಅಬಕಾರಿ ಇನ್ಸ್ಪೆಕ್ಟರ್ ಅಮಿತ್ ಕುಮಾರ್ ಹಳ್ಳಿ ಹಳ್ಳಿಯಲ್ಲಿ ದಾಳಿ ಮಾಡಿ ಅಕ್ರಮ ಮದ್ಯ ಮಾರಾಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಂಡಿದ್ದಾರೆ.
ಬುಧವಾರ ಎರಡು ಕಡೆ ಅಕ್ರಮ ಮದ್ಯ ವಶಪಡಿಸಿಕೊಂಡು ಕ್ರಮ ತೆಗೆದುಕೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಕ್ಯಾಪ್ಶನ್ ಅಜಿತ್ ಕುಮಾರ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗದ ಸಂತೋಷ್ ಕುಮಾರ್.ಎಲ್.ತಿಪ್ಪಣ್ಣನವರವರ ನೇತೃತ್ವದಲ್ಲಿ, ತೀರ್ಥಹಳ್ಳಿ ವಲಯ ಮತ್ತು ಉಪವಿಭಾಗ ಕಛೇರಿಯ ಸಿಬ್ಬಂದಿಗಳಾದ ಶಕೀಲ್, ರಾಘವೇಂದ್ರ, ಮಲಿಕ್ ಮತ್ತು ವಾಹನ ಚಾಲಕ ಕಿರಣ್ ಅವರೊಂದಿಗೆ ಖಚಿತ ಮಾಹಿತಿ ಮೇರೆಗೆ ಬಂದ್ಯಾ ಗ್ರಾಮದ ಮಹಾಬಲ ಬಿನ್ ಸೀನನಾಯ್ಕ ಅವರ ವಾಸದ ಮನೆಯ ಮೇಲೆ ದಾಳಿ ಮಾಡಿ ಶೋಧಿಸಿದಾಗ 10.08 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ನಿರೀಕ್ಷಕರಾದ ಅಮಿತ್ ಕುಮಾರ್.ಎಸ್.ಎಂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಸಂತೆಹಕ್ಲು- ಮಲ್ಲಾಪುರ ಗ್ರಾಮದ ವೆಂಕಟೇಶ ಬಿನ್ ಭೈರಪ್ಪ ಅವರ ವಾಸದ ಮನೆಯ ಮೇಲೆ ದಾಳಿ ಮಾಡಿ 11.52 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಕರೋನಾ ಹಿನ್ನೆಲೆ ಮನೆಗಳಲ್ಲಿ ನೆಮ್ಮದಿಯನ್ನು ಅಕ್ರಮ ಮದ್ಯ ತೆಗೆಯುತ್ತಿದೆ. ದುಡಿದ ಹಣ ಸಂಪೂರ್ಣ ಕುಡಿತಕ್ಕೆ ಬಳಕೆಯಾಗುತ್ತಿದೆ ಎಂದು ನಮ್ಮೂರ್ ಎಕ್ಸ್ಪ್ರೆಸ್ ವಿಶೇಷ ವರದಿ ಪ್ರಕಟ ಮಾಡಿತ್ತು. ಅಬಕಾರಿ ನಿರೀಕ್ಷಕರಾದ ಅಮಿತ್ ಕುಮಾರ್ ಅವರ ಜತೆ ಮಾತುಕತೆ ಕೂಡ ನಡೆಸಿತ್ತು. ಇದೀಗ ಇಲಾಖೆ ಖಡಕ್ ಕ್ರಮ ತೆಗೆದುಕೊಳ್ಳುತ್ತಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.