- ನಿನ್ನೆ 79 ಕೇಸ್:ಪ್ರತಿ ನಿತ್ಯ ಸಾವು: ಹೆಚ್ಚಿದ ಆತಂಕ
- ಲಸಿಕೆ ಇಲ್ಲ: ಸಿಎಂ ಭೇಟಿ ಮಾಡಿದ ಶಾಸಕ ಜ್ಞಾನೇಂದ್ರ
- ತೀರ್ಥಹಳ್ಳಿ ಆಟೋ ಚಾಲಕರಿಗೆ ಆಧ್ಯತೆ ಲಸಿಕೆ
- ಕೋಣಂದೂರು ಬಳಿಕ ಇಂದಿರಾನಗರ ಸೀಲ್ಡೌನ್?!
- ತೀರ್ಥಹಳ್ಳಿ ಭಜರಂಗ ದಳ, ವಿಎಚ್ಪಿ “ಮಾದರಿ ಸೇವೆ”
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಕರೋನಾ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಪ್ರತಿ ಹಳ್ಳಿಯಲ್ಲೂ ಸೋಂಕು ಹೆಚ್ಚುತ್ತಿದೆ. ಗುರುವಾರ 79 ಕೇಸ್ ವರದಿಯಾಗಿದೆ. ಸಾವು ಕೂಡ ಸಂಭವಿಸುತ್ತಿವೆ. ತೀರ್ಥಹಳ್ಳಿ ಜೇಸಿ ಆಸ್ಪತ್ರೆಯಲ್ಲಿ 13 ಬೆಡ್ ಲಭ್ಯವಿದೆ.
ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಂಪೂರ್ಣ ಲಾಕ್ ಡೌನ್ ಆಗಿದೆ. ಇದೀಗ 1ವಾರ ಕಾಲ ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಇಂದಿರಾನಗರ ಬಡಾವಣೆ ಸೀಲ್ ಡೌನ್ ಆಗುವ ಸಾಧ್ಯತೆ ಇದೆ.
ಸಿಎಂ ಭೇಟಿ ಮಾಡಿದ ಶಾಸಕ ಆರಗ!: ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕರೋನಾ ಸೇವೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದಾರೆ. ಆದರೆ ತೀರ್ಥಹಳ್ಳಿ ತಾಲೂಕಿನವರು ಅತೀ ಹೆಚ್ಚು ಮಂದಿ ಬೆಂಗಳೂರಿನಿಂದ ಬಂದ ಕಾರಣ ಕರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೂ ಆಡಳಿತ, ಶಾಸಕ ಆರಗ ಜ್ಞಾನೇಂದ್ರ, ತಹಶೀಲ್ದಾರ್ ಶ್ರೀಪಾದ್, ಇಒ ಆಶಾಲತಾ, ಎಲ್ಲಾ ಆರೋಗ್ಯಾಧಿಕಾರಿಗಳು, ಎಲ್ಲಾ ಸಿಬ್ಬಂದಿ, ಜನಪ್ರತಿನಿಧಿಗಳು ಶ್ರಮಿಸುತ್ತಿದ್ದಾರೆ. ಈ ನಡುವೆ ಲಸಿಕೆ ಅವ್ಯವಸ್ಥೆ ಜನರಿಗೆ ತೊಂದರೆ ಆಗಿದೆ. ಈ ಹಿನ್ನೆಲೆ ಶಾಸಕ ಆರಗ ಜ್ಞಾನೇಂದ್ರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯ ನೀಡುವಂತೆ ಮನವಿ ಮಾಡಿದ್ದಾರೆ.
ಆಟೋ ಚಾಲಕರಿಗೆ ಲಸಿಕೆ!: ತೀರ್ಥಹಳ್ಳಿ ತಾಲೂಕಿನ ಎಲ್ಲಾ ಆಟೋ ಚಾಲಕರು ಲಸಿಕೆ ಪಡೆಯಲು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರನ್ನು ಸಂಪರ್ಕಿಸಬಹುದು. ಸರಕಾರ ಆಟೋ ಚಾಲಕರನ್ನು ಫ್ರಂಟ್ ಲೈನ್ ವಾರಿಯರ್ ಎಂದು ಘೋಷಿಸಿದೆ. ಸೊಪ್ಪುಗುಡ್ಡೆ ರಾಘವೇಂದ್ರ ಅವರ ದೂರವಾಣಿ ಸಂಖ್ಯೆ 9448255953.
ತೀರ್ಥಹಳ್ಳಿ ತಾಲೂಕಿನ ಸುತ್ತ ಮುತ್ತ ಕರೋನಾದಿಂದ ಯಾವುದೇ ಸಮಯದಲ್ಲಿ ತೊಂದರೆ ಆದರೆ ಅಂಬುಲೆನ್ಸ್ ವ್ಯವಸ್ಥೆ, ಮನೆಗೆ ದಿನಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ, ಕರೋನ ಪೀಡಿತ ವ್ಯಕ್ತಿಯ ಶವ ಸಂಸ್ಕಾರ, ಇನ್ನಿತರ ಸಹಕಾರಕ್ಕೆ ತೀರ್ಥಹಳ್ಳಿ ಭಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಸಜ್ಜಾಗಿದ್ದಾರೆ. ತಾಲೂಕಿನ ಯಾವುದೇ ಮೂಲೆಯಲ್ಲಿದ್ದರೂ ಸೇವೆ ನೀಡುತ್ತಿದ್ದಾರೆ. ತುರ್ತು ಸಂಧರ್ಭದಲ್ಲಿ ಸಂಪರ್ಕಿಸಲು ತಂಡ ರಚನೆ ಮಾಡಿ ಸೇವೆ ಮಾಡುತ್ತಿದ್ದಾರೆ.
ಸಂಪರ್ಕಕ್ಕೆ….ಗಣೇಶ್ ಪ್ರಸಾದ್ (ತೀರ್ಥಹಳ್ಳಿ ತಾಲೂಕು ವಿಶ್ವ ಹಿಂದು ಪರಿಷತ್ತು ಮತ್ತು ಭಜರಂಗದಳ ಕಾರ್ಯದರ್ಶಿ). 9611020807
ಮದನ್ ನಾಯ್ಕ್ ಗೊರ್ಕೊಡು (ತೀರ್ಥಹಳ್ಳಿ ತಾಲ್ಲೂಕು ಭಜರಂಗದಳ ಗೋ ರಕ್ಷಕ್ ಪ್ರಮುಖ್)7026337212
ಶಶಿ ಕುಂದರ್ (ತೀರ್ಥಹಳ್ಳಿ ಭಜರಂಗದಳ ನಗರ ಸಂಚಾಲಕರು).9481063825, ಮಹಂತ್ (ತೀರ್ಥಹಳ್ಳಿ ಭಜರಂಗದಳ ಸಂಚಾಲಕರು), 8277173803
ವಿಶ್ವನಾಥ ಗಾಣಿಗ:8546815561.