- ತೀರ್ಥಹಳ್ಳಿ ತಾಲೂಕಿನಲ್ಲೆ ಉತ್ತಮ ಸಾಧನೆ
- ಕರೋನಾ ನಿಯಂತ್ರಣದಲ್ಲಿ ಆಡಳಿತದ ಶ್ರಮ
- ಯಾವ ಗ್ರಾಮ ಪಂಚಾಯತ್ ಕರೋನಾ ಮುಕ್ತ?
ತೀರ್ಥಹಳ್ಳಿ: ಕರೋನಾ ನಿಯಂತ್ರಣ ಮತ್ತು ಜಾಗೃತಿ, ಉತ್ತಮ ಕಾರ್ಯ ದಕ್ಷತೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮ ಪಂಚಾಯತ್ ಸ್ಥಾನ ಪಡೆದಿದೆ.
ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಗಡಿಯಲ್ಲಿರುವ ಗ್ರಾಮ ಪಂಚಾಯತ್ ಇದೀಗ ಜಿಲ್ಲೆಯಲ್ಲಿ ಗಮನ ಸೆಳೆದಿದೆ.
ಶಿವಮೊಗ್ಗ ಜಿಲ್ಲೆಯ 271 ಗ್ರಾಮ ಪಂಚಾಯತ್ ಪೈಕಿ 4 ಗ್ರಾಮ ಪಂಚಾಯತ್ ಕರೋನಾ ಮುಕ್ತವಾಗಿದ್ದವು. ಜೊತೆಗೆ ಗ್ರಾಮ ಪಂಚಾಯತ್ ಆಡಳಿತದ ಶ್ರಮದಿಂದ ಸೋಂಕು ಹರಡಿರಲಿಲ್ಲ.
ಸಾಗರದ ಶಂಕಣ್ಣ ಶಾನುಬೋಗ್, ಚನ್ನಾಗೊಂಡ, ಶಿವಮೊಗ್ಗದ ಕೊನಗವಳ್ಳಿ ಸೇರಿ 4 ಪಂಚಾಯತ್ ಮಾತ್ರ ಕರೋನಾ ಮುಕ್ತವಾಗಿ ಹಸಿರು ವಲಯ ಪಟ್ಟಿಗೆ ಸೇರಿವೆ.
ಶಾಸಕ ಆರಗ ಜ್ಞಾನೆಂದ್ರ, ತಹಸೀಲ್ದಾರ್ ಶ್ರೀಪಾದ, ಇಒ ಆಶಾಲತಾ, ಗ್ರಾಮ ಪಂಚಾಯತ್ ಪಿಡಿಓ, ಎಲ್ಲಾ ಸಿಬ್ಬಂದಿ, ಸದಸ್ಯರು, ಎಲ್ಲಾ ಜನತೆಯ ಸಹಕಾರದೊಂದಿಗೆ ಈ ಸಾಧನೆ ಆಗಿದೆ. ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ಜಾಗೃತಿ ಆಗಬೇಕಾಗಿದೆ ಎಂದು ಯುವ ನಾಯಕ, ಗ್ರಾಮ ಪಂಚಾಯತ್ ಸದಸ್ಯ ಅಮೃತ್ ರಾಜ್ ಬಾಳೆಹಳ್ಳಿ ತಿಳಿಸಿದ್ದಾರೆ.
ಬೇಗಾರು, ಅಕ್ಷಲ್ಕೊಡಿಗೆ ಭಾಗದಲ್ಲಿ ಬಹಳಷ್ಟು ಪ್ರಕರಣ ಇವೆ. ಇಲ್ಲಿ ಪ್ರತಿ 100 ಜನರಲ್ಲಿ 64 ಮಂದಿಗೆ ಕರೋನಾ ಬರುತ್ತಿದೆ. ಬೇಗಾರು ಭಾಗದಲ್ಲಿ ಕರೋನಾ ಸೊಂಕಿಗೆ ಹೆದರಿ ಜನ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ದಯವಿಟ್ಟು ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ.