- ತರೀಕೆರೆಯ ಅರೋಗ್ಯಧಿಕಾರಿ ಅಪಘಾತಕ್ಕೆ ಬಲಿ
- ಇನ್ನೋವಾ ಕಾರಲ್ಲಿ ಕುಳಿತು ನೋಡುತ್ತಿದ್ದ ಶಾಸಕ
- ತರೀಕೆರೆ ಶಾಸಕ ಸುರೇಶ್ ಅಮಾನವೀಯ ಮುಖ
- ಬಿಜೆಪಿ ಶಾಸಕನ ವಿರುದ್ಧ ಜನಾಕ್ರೋಶದ ಕಿಡಿ..!
- ಕಾರಿನಿಂದ ಇಳಿಯದ ಶಾಸಕ: ಲಕ್ಕವಳ್ಳಿ ಬಳಿ ಘಟನೆ
- ನಾನು ಅನಾರೋಗ್ಯದಿಂದ ನಿದ್ದೆ ಮಾಡಿದ್ದೆ: ಶಾಸಕ
ತರೀಕೆರೆ: ಬಿಜೆಪಿ ಶಾಸಕನೊಬ್ಬನ ಅಮಾನವೀಯ ವರ್ತನೆಗೆ ಓರ್ವ ವೈದ್ಯ ಬಲಿಯಾಗಿದ್ದಾನೆ. ಹೌದು. ಇಂತಹ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಬಳಿ ನಡೆದಿದ್ದು, ಇದೀಗ ತರೀಕೆರೆ ಬಿಜೆಪಿ ಶಾಸಕನ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಿದೆ.
ಕರೊನಾ ಕರ್ತವ್ಯ ಮುಗಿಸಿ ಹಿಂದಿರುಗುವಾಗ ತರೀಕೆರೆ ತಾಲೂಕು ಹಿರಿಯ ಆರೋಗ್ಯಾಧಿಕಾರಿ ಬೈಕ್ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತಕ್ಕೆ ಒಳಗಾಗಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರಕ್ತದ ಮಡುವಿನಲ್ಲಿ ಒದ್ದಾಟ ನಡೆಸುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ತರೀಕೆರೆ ಶಾಸಕ ಸುರೇಶ್ ತಮ್ಮ ಕಾರಿನಿಂದ ಕೆಳಗಿಳಿಯದೇ ವೈದ್ಯ ರಸ್ತೆಯಲ್ಲಿ ಬಿದ್ದರೂ ನೆರವಿಗೆ ಧಾವಿಸುವ ಪ್ರಯತ್ನ ಮಾಡಿಲ್ಲ. ಪರಿಣಾಮ ವೈದ್ಯರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಶಾಸಕರು ಅಲ್ಲಿಂದ 5 ಕಿಮೀ ವ್ಯಾಪ್ತಿಯ ತರೀಕೆರೆ ಆಸ್ಪತ್ರೆಗೆ ತಕ್ಷಣಕ್ಕೆ ಕೊಂಡೋಯ್ದಿದ್ದರೆ ಬದುಕುವ ಸಾಧ್ಯತೆ ಇತ್ತು.ಆಂಬುಲೆನ್ಸ್ ಕೂಡ ಘಟನಾ ಸ್ಥಳಕ್ಕೆ ಬರುವುದು ತಡವಾಯಿತು. ಈ ಕಾರಣ ವೈದ್ಯರು ಜೀವ ಕಳೆದುಕೊಂಡಿದ್ದಾರೆ. ಅರ್ಧ ಗಂಟೆ ಸಮಯ ವ್ಯರ್ಥ ಮಾಡುವ ಬದಲು ಅವರ ಕಾರಿನಲ್ಲೇ ಕರೆದೊಯ್ದಿದ್ದರೆ ಪ್ರಾಣ ಉಳಿಯುವ ಸಾಧ್ಯತೆ ಇತ್ತು. ಇದೀಗ ಸುರೇಶ್ ನಡೆ ಇಡೀ ರಾಜಕೀಯ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ.
ಅರ್ಧ ಗಂಟೆ ಬಳಿಕ ಆಂಬುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯೆ ರಮೇಶ್ ಅವರು ಸಾವನ್ನಪ್ಪಿದ್ದು ಇದೀಗ ಈ ಘಟನೆ ದೇಶದ ಗಮನ ಸೆಳೆದಿದೆ. ಈ ನಡುವೆ ಶಾಸಕರ ಈ ವರ್ತನೆ ವಿಡಿಯೋ ಮಾಡಿದವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಶಾಸಕರು ಮುಂದಾಗಿದ್ದಾರೆ ಎನ್ನಲಾಗಿದ್ದು, ಇದು ಜನರ ಮತ್ತಷ್ಟು ಕೋಪಕ್ಕೆ ಕಾರಣವಾಗಿದೆ.
ಕರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರ ಜೀವ ಉಳಿಸುವುದು ದೇವರ ದಯೆ. ಆದರೆ ಕನಿಷ್ಠ ಜನ ನಾಯಕನಾಗಿ ಸಹಾಯ ಮಾಡಿದ್ದರೇ ಸುರೇಶ್ ಕೂಡ ದೇವರಾಗುತ್ತಿದ್ದರು. ತರೀಕೆರೆ ಶಾಸಕರ ವರ್ತನೆಗೆ ರಾಜ್ಯದ ಎಲ್ಲಾ ಜನತೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಶಾಸಕರು ಹೇಳಿದ್ದೇನು..?: ನನಗೆ ಕಣ್ಣು ನೋವು ಹೆಚ್ಚಾಗಿದ್ದು, ಕಾರಿನಲ್ಲಿ ಮಲಗಿದ್ದೆ. ಆಪ್ತ ಸಹಾಯಕ ಮತ್ತು ಚಾಲಕನನ್ನು ಕಳುಹಿಸಿದ್ದೆ. ವಿಡಿಯೋ ತೆಗೆದವರ ವಿರುದ್ಧ ತನಿಖೆ ಮಾಡಲಾಗುವುದು ಎಂದು ಸುರೇಶ್ ಹೇಳಿದ್ದಾರೆ. ಈ ಹೇಳಿಕೆ ಸುಳ್ಳು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಕರೋನಾ ಸಮಯದಲ್ಲಿ ರಾಜಕಾರಣ ಬಿಟ್ಟು ರಾಜಕಾರಣಿಗಳು ಸೇವೆ ಮಾಡಬೇಕು. ಆದರೆ ಕೆಲ ಶಾಸಕರು, ನಾಯಕರು ಇನ್ನು ಅಹಂಕಾರ ಬಿಟ್ಟಿಲ್ಲ. ಬಿಜೆಪಿ ಎಲ್ಲಾ ಶಾಸಕರ ಪೈಕಿ ಹೊನ್ನಾಳಿಯ ರೇಣುಕಾಚಾರ್ಯ, ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ ಶಿವಮೊಗ್ಗದ ಈಶ್ವರಪ್ಪ, ಸಾಗರದ ಹಾಲಪ್ಪ ಹಗಲು ಇರುಳು ಸೇವೆ ಸಲ್ಲಿಸುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿವರೆಗೆ ಯಾರು ಜನ ಸೇವೆ ಮಾಡುತ್ತಾರೆ ಅವರಿಗೆ ಮಾತ್ರ ಬೆಲೆ ಕೊಡಿ. ಇಲ್ಲವೇ ಮನೆಗೆ ಕಳುಹಿಸಿ. ಯಾವ ಪಕ್ಷ, ಯಾವ ಧರ್ಮ, ಯಾವ ಜಾತಿ, ಶ್ರೀಮಂತ ಬಡವ ಬೇಡ. ಸೇವೆಯೇ ಈಗ ಮಾನದಂಡ.