- ತೀರ್ಥಹಳ್ಳಿಯ ತನಿಕಲ್ ಸರ್ಕಾರಿ ಶಾಲೆಯ ಹುಡುಗನ ಸಾಧನೆ
- ಕನ್ನಡ ಮಾಧ್ಯಮ, ಸರ್ಕಾರಿ ಶಾಲೆಯ ಹುಡುಗರ ಮೇಲುಗೈ
NAMMUR EXPRESS
ತೀರ್ಥಹಳ್ಳಿ: ಆತ ಹಳ್ಳಿ ಹುಡುಗ. ಕೃಷಿ ಕುಟುಂಬದಲ್ಲಿ ಬೆಳೆದ ಹುಡುಗ. ಯಾವುದೇ ಹೈಟೆಕ್ ಶಿಕ್ಷಣ ಇಲ್ಲ. ಟ್ಯೂಷನ್ ಇಲ್ಲ. ಆದರೂ ರಾಜ್ಯದ ಟಾಪ್ ವಿದ್ಯಾರ್ಥಿಯಾಗಿ ಸ್ಥಾನ ಪಡೆದಿದ್ದಾನೆ.
ತೀರ್ಥಹಳ್ಳಿ ತಾಲೂಕು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಓದಿದ ತೀರ್ಥಹಳ್ಳಿ ತಾಲೂಕು ತನಿಕಲ್ ಸತೀಶ್ ಹಾಗೂ ವೀಣಾ ದಂಪತಿಯ ಪುತ್ರ ಶ್ರೀಷ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾನೆ.
ಈತ ಯಾವುದೇ ಟ್ಯೂಷನ್ ಪಡೆದಿಲ್ಲ. ರಾತ್ರಿ ಹಗಲು ಓದಿ ಈತ ಸಾಧನೆ ಮಾಡಿದ್ದಾನೆ. ತನಿಕಲ್ ಶಾಲೆಯಲ್ಲಿ 13 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಕೃಷಿ ಕುಟುಂಬದ ಶ್ರೀಷ ಸಾಧನೆ ಇದೀಗ ರಾಜ್ಯಕ್ಕೆ ಮಾದರಿಯಾಗಿದೆ.
ನಾನು ಈ ಫಲಿತಾಂಶ ನಿರೀಕ್ಷೆ ಮಾಡಿದ್ದೆ. ನನ್ನ ಸಾಧನೆಗೆ ನಮ್ಮ ತಂದೆ ತಾಯಿ, ಶಿಕ್ಷಕರು, ಗ್ರಾಮಸ್ಥರು ಕಾರಣ. ನಾನು ಯಾವುದೇ ಟ್ಯೂಷನ್ ಪಡೆದಿಲ್ಲ. ಸರ್ಕಾರಿ ಶಾಲೆಯಲ್ಲೇ ಉತ್ತಮ ಶಿಕ್ಷಣ ಪಡೆದಿದ್ದೇನೆ. ವಿಜ್ಞಾನ ಶಿಕ್ಷಣ ಪಡೆದು ಮುಂದೆ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗುವ ಆಸೆ ಇದೆ ಎಂದಿದ್ದಾನೆ.
ತಂದೆ ಸತೀಶ್, ಮಗನ ಕನಸನ್ನು ಈಡೇರಿಸುವುದು ಗುರಿ. ಸರ್ಕಾರಿ ಶಾಲೆಯಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ.
ಮಗಳು ಕೂಡ ಸರ್ಕಾರಿ ಕಾಲೇಜು ಮಾಳೂರಲ್ಲಿ ವಿಜ್ಞಾನ ವಿಭಾಗದಲ್ಲಿ ಓದಿ ಶೇ. 87.83 ಪಡೆದಿದ್ದಳು. ಆಕೆ ಕೂಡ ಮಾದರಿಯಾಗಿದ್ದಳು.
ಗೃಹ ಸಚಿವರ ಮೆಚ್ಚುಗೆ
ತೀರ್ಥಹಳ್ಳಿಯ ಸರ್ಕಾರಿ ಶಾಲೆಯ ಹುಡುಗನೊಬ್ಬ ರಾಜ್ಯಕ್ಕೆ ಮೊದಲ ರಾಂಕ್ ಬಂದಿರುವುದು ಹೆಮ್ಮೆಯ ವಿಚಾರ. ಅಲ್ಲದೆ ತಾಲೂಕಲ್ಲಿ ಶೇ.100ರಷ್ಟು ಫಲಿತಾಂಶ ಬಂದಿರುವುದು ಸಂತಸ ತಂದಿದೆ. ಕರೋನಾ ವೇಳೆ ನಾವು, ತಾಲೂಕು ಆಡಳಿತ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದೆವು. ಈಗ ಅದು ಫಲ ನೀಡಿದೆ. ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಗೆ ಅಭಿನಂದನೆಗಳು.
- ಆರಗ ಜ್ಞಾನೇಂದ್ರ
ಗೃಹ ಸಚಿವರು
ಸಾಗರ, ಶಿವಮೊಗ್ಗದಲ್ಲೂ ಸಾಧಕರು!
ಸಾಗರ ತಾಲೂಕು ಮಡಸೂರು ಗ್ರಾಮದ ಅಭೀಷಾ ಭಟ್ 625 ಅಂಕಗಳನ್ನು ಪಡೆದಿದ್ದಾರೆ. ಈಕೆ ಸಾಗರದ ಸೊರಬ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ಮಡಸೂರಿನ ಶ್ರೀಪಾದ್ ಭಟ್ ಮತ್ತು ಸಂಧ್ಯಾ ದಂಪತಿಯ ಪುತ್ರಿ ಈಕೆ.
625 ಅಂಕಗಳು ಬಂದಿರುವುದಕ್ಕೆ ಖುಷಿಯಾಗುತ್ತಿದೆ. ಚನ್ನಾಗಿ ಓದಿಕೊಂಡಿದ್ದೆ. ಪಿಯುಸಿಯಲ್ಲಿ ಪಿಸಿಎಂಸಿ ತೆಗೆದುಕೊಂಡು ಮುಂದೆ ಇಂಜಿನಿಯರ್ ಆಗಬೇಕು ಅಂದುಕೊಂಡಿದ್ದೇನೆ ಎಂದು ಅಭೀಷಾ ಭಟ್ ಸಂತಸ ಹಂಚಿಕೊಂಡಿದ್ದಾರೆ.
ಶಿವಮೊಗ್ಗದ ಗೋಪಾಳದ ವಿನಯ್ ಜಿ. ಹೆಬ್ಬಾರ್ ಕೂಡ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಗೋಪಾಳದ ಶ್ರೀ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಯಾದ ವಿನಯ್ ಹೆಬ್ಬಾರ್ ತಂದೆ ಗಣೇಶ್ ಹೆಬ್ಬಾರ್ ಉದ್ಯಮಿ. ತಾಯಿ ವೇದಾವತಿ ಹೆಬ್ಬಾರ್ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ.
ಪರೀಕ್ಷೆಗಾಗಿ ವಿಶೇಷ ಸಿದ್ಧತೆ ಮಾಡಿಕೊಂಡಿರಲಿಲ್ಲ. ಆದರೆ ಪರೀಕ್ಷೆಗೆ ಹತ್ತು ದಿನ ಮೊದಲು ಸ್ವಲ್ಪ ನಿಗಾ ವಹಿಸಿ ಓದಿ, ಮನನ ಮಾಡಿಕೊಂಡೆ. ಶಿಕ್ಷಕರು, ಪೋಷಕರ ತಿಳಿಸಿದಂತೆ ಓದಿಕೊಂಡೆ. ಈಗ 625 ಅಂಕ ಗಳಿಸಿರುವುದಕ್ಕೆ ಖುಷಿಯಾಗುತ್ತಿದೆ ಎಂದು ವಿನಯ್ ಹೆಬ್ಬಾರ್ ತಿಳಿಸಿದ್ದಾರೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು