- ಹಾಲು ಔಷಧಿ ಓಕೆ, ಉಳಿದೆಲ್ಲ ವ್ಯವಹಾರ ನಿಷೇಧ?
- ಜಿಲ್ಲೆಯೂ ಸಂಪೂರ್ಣ ಬಂದ್ ಸಾಧ್ಯತೆ?
ಶಿವಮೊಗ್ಗ: ಕರೋನಾ ತಡೆಗೆ ಶಿವಮೊಗ್ಗ ಜಿಲ್ಲಾಡಳಿತ ಇದೀಗ ಸಂಪೂರ್ಣ ಲಾಕ್ ಡೌನ್ ಮಾಡಲು ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಸಾಗರ ಘೋಷಣೆಯಾಗಿದೆ. ತೀರ್ಥಹಳ್ಳಿ, ಹೊಸನಗರ ಘೋಷಣೆ ಬಾಕಿ ಇದೆ.
ಭಾನುವಾರ ಮಧ್ಯಾಹ್ನದವರೆಗೆ ಅಗತ್ಯ ವಸ್ತು ಪಡೆಯಲು ಅವಕಾಶ ನೀಡಿದ್ದು, ಮಾರ್ಗಸೂಚಿ ಹೊರ ಬೀಳಲಿದೆ. ಒಂದು ವಾರ ಕಾಲ ಇಡೀ ತಾಲ್ಲೂಕು ಸಂಪೂರ್ಣ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ಅಧಿಕಾರಗಳನ್ನು ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದರು. ಇದೀಗ ಹೊಸನಗರ, ತೀರ್ಥಹಳ್ಳಿ ಬಂದ್ ಬಹುತೇಕ ಪಕ್ಕಾ ಆಗಿದೆ.
ಸಾಗರದಲ್ಲಿ ಈಗಾಗಲೆ ಸೋಮವಾರದಿಂದ ಬಂದ್ ಘೋಷಣೆ ಆಗಿದೆ. ಈ ವೇಳೆ ಹಾಲು, ಔಷಧಕ್ಕೆ ಮಾತ್ರ ಅವಕಾಶ ಇರಲಿದೆ. ಪೊಲೀಸರು ಎಲ್ಲಾ ಕಡೆ ಹದ್ದಿನಗಣ್ಣು ಇಡಲಿದ್ದಾರೆ.