- ತೀರ್ಥಹಳ್ಳಿಯಲ್ಲಿ ಮೊದಲ ದಿನವೇ ಉತ್ತಮ ಸೇವೆ
- ಸರಕಾರ, ಆರಗ ವಿರುದ್ಧ ಕಿಮ್ಮನೆ ಗುಡುಗು
- ಬಡ ಜನರ ನೆರವಿಗೆ ಬಂದ ನಾಯಕರ ತಂಡ!
ತೀರ್ಥಹಳ್ಳಿ: ಬಡವರು, ನಿರ್ಗತಿಕರು, ಕಾರ್ಮಿಕರಿಗೆ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಅನ್ನು ತೀರ್ಥಹಳ್ಳಿಯ ಸರ್ವ ಜನೋ ಸುಖಿನೋ ಭವತು ಸಂಘಟನೆ ಬುಧವಾರ ಶುರು ಮಾಡಿದೆ.
ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದ ಸಮೀಪದ ಕಾರ್ ಸ್ಟಾಂಡ್ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ಬುಧವಾರದಿಂದ ಶುರುವಾಗಿದ್ದು ಮೊದಲ ದಿನವೇ 300ಕ್ಕೂ ಹೆಚ್ಚು ಮಂದಿ ಮಧ್ಯಾಹ್ನದ ಊಟ,ಬೆಳಗ್ಗಿನ ಉಪಹಾರ ಸ್ವೀಕರಿಸಿದರು.
ಕಾಂಗ್ರೆಸ್ ನಾಯಕರ ಉಸ್ತುವಾರಿಯಲ್ಲಿ ತಾಲೂಕಿನ ಎಲ್ಲಾ ಪಕ್ಷ, ಜಾತಿ, ಧರ್ಮ, ನಾಯಕರು, ಸಂಘಟನೆಗಳ ಸಹಕಾರದಿಂದ ಈ ಯೋಜನೆ ಆರಂಭಗೊಂಡಿದೆ.
ಕ್ಯಾಂಟೀನ್ ಉದ್ಘಾಟನೆ ಮಾಡಿದ ಕಿಮ್ಮನೆ!: ದೇಶದಲ್ಲಿ 50 ಕೋಟಿ ಜನ ಸಂಕಷ್ಟದಲ್ಲಿದ್ದಾರೆ. ಕರೋನಾ ತುರ್ತು ವೇಳೆ ಯಾವುದೇ ಚುನಾವಣೆ ಸಭೆ ಸಮಾರಂಭದ ಅವಶ್ಯಕತೆ ಇರಲಿಲ್ಲ.ಆದರೆ ರಾಜ್ಯದಲ್ಲಿ ದುರಾಡಳಿತದ ಮೂಲಕ ಎಲ್ಲವೂ ನಡೆದು ಹೋಗಿದ್ದು,ಕರೋನಾ ವ್ಯಾಪಿಸಿದೆ. ಜನ ಬೀದಿ ಹೆಣವಾಗುತ್ತಿದ್ದಾರೆ. ಆದರೆ ಮೋದಿಗೆ ರಾಜಕೀಯ ಬಿಟ್ಟು ಯಾವುದೂ ಬೇಕಿಲ್ಲ.
ಸರ್ಕಾರಿ ಆಸ್ಪತ್ರೆಯ ಬಳಿ ಸಮಾನ ಮನಸ್ಕರು ಉಚಿತ ಊಟ ಉಪಹಾರ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿ ಬಿಜೆಪಿಯವರು ಮಾತ್ರ ಸೇರಿಕೊಂಡರು. ನಾನೇ ಹೋಗಿ ವಿನಂತಿಸಿದರೂ ಅವಕಾಶ ನೀಡಲಿಲ್ಲ ಆ ಕಾರಣಕ್ಕಾಗಿ ನಾವು ಪ್ರತ್ಯೇಕವಾಗಿ ಇಂದಿರಾ ಕ್ಯಾಂಟೀನ್ ತೆರೆಯಬೇಕಾಯಿತು. ಕರೋನಾ ನಿಯಂತ್ರಣದಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ. ಯಾರನ್ನೂ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಕಳೆದ ಬಾರಿ ಕಿಟ್ ವಿತರಣೆ ಮಾಡಲು ರಂಗಮಂದಿರ ನೀಡಲಿಲ್ಲ. ಈ ಬಾರಿ ಜ್ಞಾನೇಂದ್ರರವರಿಗೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿಗರಿಂದ ಕರೋನಾ ಬರುವುದಿಲ್ಲವೇ?. ಶಿವಮೊಗ್ಗದಲ್ಲಿ ಒಂದೇ ದಿನ 47 ಜನ ಸತ್ತು ಹೋಗಿದ್ದಾರೆ. ಸಂಜೆ 14 ಜನರ ಲೆಕ್ಕ ಕೊಟ್ಟಿದ್ದಾರೆ. ಈ ರೀತಿಯ ಸುಳ್ಳು ಲೆಕ್ಕ ಕೊಟ್ಟು ಜನರನ್ನು ಮಂಗ ಮಾಡುತ್ತಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಮರನಾಥ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್, ವಿಲಿಯಂ, ಬಾಳೇಹಳ್ಳಿ ಪ್ರಭಾಕರ್, ಹಾರೊಗೊಳಿಗೆ ಪದ್ಮನಾಬ್, ವಾದಿರಾಜ್ ಭಟ್, ಆದರ್ಶ್ ಹುಂಚದಕಟ್ಟೆ, ಪೂರ್ಣೇಶ್, ಸುಭಾಷ್ ಕುಲಾಲ್, ನಮ್ರತ್, ರತ್ನಾಕರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಮಹಿಳಾ ನಾಯಕಿಯರಾದ ಸುಶೀಲ ಶೆಟ್ಟಿ, ಗೀತಾ ರಮೇಶ್ ಶೆಟ್ಟಿ, ಹರೀಶ್ ಮಿಲ್ಕೇರಿ, ನಾಗರಾಜ್ ಪೂಜಾರಿ ಸೇರಿದಂತೆ ಹಲವರು ಹಾಜರಿದ್ದರು.
ಲಾಕ್ ಡೌನ್ ಮುಗಿಯುವವರೆಗೆ ಪ್ರತಿ ದಿನ ಉಪಹಾರ, ಊಟ ನೀಡಲಾಗುವುದು. ಎಲ್ಲಾ ಜನತೆ, ಸಂಘ ಸಂಸ್ಥೆಗಳು, ಎಲ್ಲಾ ಪಕ್ಷದ ನಾಯಕರು ಈ ಯೋಜನೆಗೆ ಕೈಜೋಡಿಸಬೇಕು ಎಂದು ಯುವ ನಾಯಕ ಮುಡುಬ ರಾಘವೇಂದ್ರ ಮನವಿ ಮಾಡಿದ್ದಾರೆ.