- ಕರೋನಾ ನಡುವೆ ವೇಗ, ಮಳೆ ಕಾರಣ ಆಕ್ಸಿಡೆಂಟ್
- ಆಗುಂಬೆ ಘಾಟಿಯಲ್ಲಿ ಪಲ್ಟಿ ಹೊಡೆದ ಲಾರಿ
- 15 ಲಕ್ಷ ಮೌಲ್ಯದ ಬ್ಯಾಟರಿ ಹಾಳು
- ಮಂಡಗದ್ದೆಯಲ್ಲಿ ವೇಗಕ್ಕೆ ಬೈಕ್ ಬಲಿ!
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ನಡುವೆಯೂ ಅಪಘಾತ ಸಂಭವಿಸುತ್ತಿವೆ. ಇದಕ್ಕೆ ಅತೀ ವೇಗ ಕಾರಣ ಎನ್ನಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ತಿರುವಿನಲ್ಲಿ ಬ್ಯಾಟರಿ ತುಂಬಿದ್ದ ಲಾರಿ ಪಲ್ಟಿ ಹೊಡೆದ ಕಾರಣ ಚಾಲಕ,ಕ್ಲಿನರ್ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಲಾರಿ ಪುಡಿ ಪುಡಿಯಾಗಿದ್ದು, ಅದರಲ್ಲಿದ್ದ 13 ಲಕ್ಷ ಮೌಲ್ಯದ ಬ್ಯಾಟರಿ ಹಾನಿಯಾಗಿದೆ. ಮಂಗಳೂರಿನಿಂದ ಬ್ಯಾಟರಿಗಳನ್ನು ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ 7 ಮತ್ತು 8ನೇ ತಿರುವಲ್ಲಿ ಪಲ್ಟಿ ಹೊಡೆದಿದೆ. ಲಾರಿ ಸಂಪೂರ್ಣವಾಗಿ ಜಖಂ ಆಗಿದ್ದು ಎಲ್ಲಾ ಕಡೆ ಬ್ಯಾಟರಿಗಳು ಬಿದ್ದಿವೆ. ಚಾಲಕ ಹಾಗೂ ಕ್ಲಿನರ್ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಆಗುಂಬೆ ಪೊಲೀಸ್ ಸ್ಥಳಕ್ಕೆ ಬಂದು ಮಹಜರು ಮಾಡಿ ಚಾಲಕರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಆಂಧ್ರ ಪ್ರದೇಶ ಮೂಲದ ಲಾರಿ ಎನ್ನಲಾಗಿದೆ.
ಮಂಡಗದ್ದೆ ಬಳಿ ಬೈಕ್ ಕಾರು ಪುಡಿ!: ರಸ್ತೆ ಬದಿ ನಿಂತಿದ್ದ ಬೈಕ್ಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿತ್ತು.
ರಸ್ತೆ ಬದಿಯ ತಡೆಗೋಡೆಗೆ ನುಗ್ಗಿದ ಕಾರು ಸಂಪೂರ್ಣ ಜಖಂಗೊಂಡಿದೆ. ಘಟನೆ ವೇಳೆ ಕಾರು ಚಾಲಕ ಸಂತೋಷ್, ಅವರ ತಾಯಿ ಯಶೋದಾ, ತಂದೆ ಶಿವಣ್ಣ ಕಾರಿನಲ್ಲಿದ್ದು, ಶಿವಣ್ಣ ಎಂಬುವರು ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಳೂರು ಠಾಣೆ ಎಸೈ ಮಂಜುನಾಥ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.