- ಸಹಾಯ್ ತಂಡದಿಂದ ಕೋವಿಡ್ ಸೆಂಟರ್ ಭೇಟಿ
- ಹಣ್ಣು ಹಂಪಲು ವಿತರಣೆ: ಸೇವಕರಿಗೆ ಸಾಂತ್ವನ
- ಅಬ್ದುಲ್ ರೆಹಮಾನ್ ತಂಡದ ಮಾದರಿ ಸೇವೆ
NAMMUR EXPRESS
ತೀರ್ಥಹಳ್ಳಿ: ಕರೋನಾ ಇಡೀ ದೇಶವನ್ನು ಕಷ್ಟಕ್ಕೆ ನೂಕಿದೆ. ಇಂತಹ ಸಂದರ್ಭದಲ್ಲಿ ಪಕ್ಷ, ಜಾತಿ, ಧರ್ಮ ಬಿಟ್ಟು ಎಲ್ಲರೂ ಮಾನವೀಯ ಸೇವೆ ಮಾಡುತ್ತಿದ್ದಾರೆ. ಜೊತೆಗೆ ಸಂಘಟನೆಗಳು ಕೂಡ ಸೇವೆಗೆ ಮುಂದಾಗಿವೆ.
ಅದರಂತೆ ತೀರ್ಥಹಳ್ಳಿ ತಾಲೂಕು ಕೆಎಂಜೆ ಎಸ್ ವೈಎಸ್ ಹಾಗೂ ಎಸ್ ಎಸ್ ಎಫ್ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಾಯ್ ತಂಡ ಕರೋನಾ ಸೇವೆ ಮಾಡುತ್ತಿದೆ.
ಈಗಾಗಲೇ ತಾಲೂಕಿನಲ್ಲಿ ಅನೇಕ ಸೇವೆ ಮಾಡುತ್ತಿರುವ ಸಂಘಟನೆ ದೇವಂಗಿ ಬಳಿಯ ವಾಟಿಗಾರು ಕೋವಿಡ್ ಕೇರ್ ಸೆಂಟರ್ ರೋಗಿಗಳಿಗೆ ಹಣ್ಣು ಹಂಪಲು ನೀಡಿದ್ದಾರೆ. ಜೊತೆಗೆ ಕೋವಿಡ್ ಕೇರ್ ಸೆಂಟರ್ ಸಿಬ್ಬಂದಿಯ ಕ್ಷೇಮ ವಿಚಾರಿಸಿದ್ದಾರೆ. ಕರೋನಾ ಸೇವೆ ಮಾಡುತ್ತಿರುವ ಎಲ್ಲಾ ಸಿಬ್ಬಂದಿಗೂ ಆತ್ಮಸ್ಟೈರ್ಯ ತುಂಬಿದ್ದಾರೆ.
ಕೆಎಂಜೆ ರಾಜ್ಯ ಸದಸ್ಯರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಪ್ರಸಿದ್ಧ ಕನ್ಸ್ಟ್ರಕ್ಷನ್ ಸಂಸ್ಥೆ ನ್ಯಾಷನಲ್ ಮುಖ್ಯಸ್ಥರಾದ ಅಬ್ದುಲ್ ರೆಹಮಾನ್, ಕೆಎಂಜೆ ತೀರ್ಥಹಳ್ಳಿ ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್, ಎಸ್ ಎಸ್ಎಸ್ ತಾಲೂಕು ಉಪಾಧ್ಯಕ್ಷರಾದ ಅಶ್ರಫ್ ಸಖಾಫಿ ಜೊತೆಗಿದ್ದರು.
ಸಂಘಟನೆ ಈಗಾಗಲೇ ಕುರುವಳ್ಳಿ ಜೋಪಡಿ ಸೇರಿದಂತೆ ಹಲವೆಡೆ ಆಹಾರದ ಕಿಟ್ ನೀಡುವ ಮೂಲಕ ಸಹಾಯ ಮಾಡಿದೆ. ಕರೋನಾ ಸೊಂಕಿನಿಂದ ನಿಧನರಾದ ಅನೇಕರ ಶವ ಸಂಸ್ಕಾರ ಮಾಡಿದೆ.
ಬಡ ರೋಗಿಗಳಿಗೆ ಆಂಬುಲೆನ್ಸ್ ಸೇವೆ ನೀಡುತ್ತಿದೆ. ಜೊತೆಗೆ ರಕ್ತದಾನ ಕೂಡ ಮಾಡಲಾಗುತ್ತಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.