ಶ್ರೀ ಕ್ಷೇತ್ರ ಹೆಗಲತ್ತಿಯಲ್ಲಿ ವಾರ್ಷಿಕೋತ್ಸವದ ಸಂಭ್ರಮ
– ಶ್ರೀ ನಾಗಯಕ್ಷೆ ದೇವಿ, ನವಗ್ರಹ ಮತ್ತು ಶ್ರೀ ನಾಗದೇವರ 11 ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ
– ಫೆ 5 ರಿಂದ 9ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ
– ಫೆ 8 ರಂದು 11 ಪಲ್ಲಕ್ಕಿ ದೇವರುಗಳ ಆರಾಧನೆ ಹಾಗೂ ಶ್ರೀ ಕ್ಷೇತ್ರ ಗುತ್ತಿಯಡೇಹಳ್ಳಿ ಇವರಿಂದ ನಾಗನಂದನ ಯಕ್ಷಗಾನ
NAMMUR EXPRESS NEWS
ಶ್ರೀ ನಾಗಯಕ್ಷೆ ಸೇವಾ ಸಮಿತಿ (ರಿ.) ಶ್ರೀ ಕ್ಷೇತ್ರ ಹೆಗಲತ್ತಿ ಶಿಂಗನಬಿದರೆ ಅಂಚೆ, ತೀರ್ಥಹಳ್ಳಿ ತಾಲ್ಲೂಕು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿಗಳಾದ ಪರಮ ಪೂಜ್ಯಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ ಮತ್ತು ಮೂಲ ಪಾತ್ರಿಗಳಾದ ಶ್ರೀ ಶಾರದಮ್ಮನವರ ದಿವ್ಯ ಪೂರ್ಣಾನುಗ್ರಹ ಆಶೀರ್ವಾದದೊಂದಿಗೆ ಹಾಗೂ ಪಾತ್ರಿಗಳಾದ ಶ್ರೀಮತಿ ಕಲ್ಪನಮ್ಮಸಂತೋಷ್ ರವರ ಉಪಸ್ಥಿತಿಯಲ್ಲಿ ಶ್ರೀ ನಾಗಯಕ್ಷೆ ದೇವಿ, ನವಗ್ರಹ ಮತ್ತು ಶ್ರೀ ನಾಗದೇವರ 11 ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಹಾಗೂ ಶತಚಂಡಿಕಾಹವನ ಫೆ. 5 ರಿಂದ 9 ರ ವರೆಗೆ ಇದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಫೆ. 5 ಬುಧವಾರ ಅಷ್ಟಮಿ ಬೆಳಿಗ್ಗೆ 9-00 ಗಂಟೆಗೆ ಗ್ರಾಮ ದೇವರಾದ ಶ್ರೀ ಕಂಬದ ನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ವ್ಯವಸ್ಥೆ ಕೂಡ ಇರುತ್ತದೆ. ಫೆ 6 ರಂದು ಗುರುವಾರ, ನವಮಿ ಬೆಳಗ್ಗೆ 9-00 ಗಂಟೆಗೆ. ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ಶ್ರೀ ಮಹಾಗಣಪತಿ ಹೋಮ, ಶ್ರೀ ನಾಗ ಮೂಲಮಂತ್ರ ಹೋಮ ಮತ್ತು ನವಗ್ರಹ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ಇರುತ್ತದೆ. ಸಂಜೆ 6 ಗಂಟೆಗೆ ಬ್ರಹ್ಮಕಲಶ ಸ್ಥಾಪನೆ, ಶ್ರೀ ನವಾರ್ಣಮಂತ್ರ ಜಪ, ಶ್ರೀ ನಾಗಯಕ್ಷಿ ಮೂಲಮಂತ್ರ ಜಪ, ಅಷ್ಟಾವಧಾನ ಸೇವೆ. ಶ್ರೀ ಚಂಡಿಕಾ ಪಾರಾಯಣ, ಶ್ರೀ ಸುದರ್ಶನ ಹೋಮ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ. ನಂತರ ಅನ್ನಸಂತರ್ಪಣೆ ಇರುತ್ತದೆ. ಫೆ. 7 ರಂದು ಶುಕ್ರವಾರ, ದಶಮಿ ಬೆಳಗ್ಗೆ 9-00 ಗಂಟೆಗೆ ಶ್ರೀ ಶತಚಂಡಿಕಾಹವನ, ಶ್ರೀ ನಾಗಯಕ್ಷಿ ಮೂಲಮಂತ್ರ ಹವನ, ಬ್ರಹ್ಮಕಲಶ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ಇರುತ್ತದೆ. ಸಂಜೆ 6 ಗಂಟೆಗೆ ಶ್ರೀ ದುರ್ಗಾದೀಪ ನಮಸ್ಕಾರ, ಆಶ್ಲೇಷ ಬಲಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ಇರುತ್ತದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪೂಜಾ ವಿಧಿ ವಿಧಾನಗಳು. ವೇ॥ ಬ್ರ॥ ಶ್ರೀ ರಾಘವೇಂದ್ರ ಭಟ್ರು. ಪ್ರಧಾನ ಅರ್ಚಕರು, ಶ್ರೀ ನಾಗಯಕ್ಷೆ ದೇವಾಲಯ, ಶ್ರೀ ಕ್ಷೇತ್ರ ಹೆಗಲತ್ತಿ ಹಾಗೂ ವೇ।। ಬ್ರ। ಶ್ರೀ ವಿವೇಕ ಭಟ್ರು ತೂದೂರು ಇವರ ಆಚಾರ್ಯತ್ವದಲ್ಲಿ ನೆರವೇರಲಿದೆ. ಫೆ 8 ರಂದು ಶನಿವಾರ ಏಕಾದಶಿ ಬೆಳಿಗ್ಗೆ 9-00 ಗಂಟೆಗೆ 11 ಪಲ್ಲಕ್ಕಿ ದೇವರುಗಳ ಆರಾಧನೆ, ಶತಚಂಡಿಕಾಹವನ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಶಿವಮೊಗ್ಗ ನಗರದ ಭಾವಸಾರ ಕ್ಷತ್ರಿಯ ಸಮಾಜದ ಶ್ರೀ ತುಳಜಾ ಭವಾನಿ ದೇವಾಲಯದ ಹಾಗೂ ಗ್ರಾಮದ ಭಕ್ತರಿಂದ ಮೆರವಣಿಗೆ ಮತ್ತು ಭಜನೆ ಮೂಲಕ ಭಂಡಾರದ ಸ್ವಾಗತವನ್ನ ಮಾಡಲಾಗುತ್ತದೆ. ದಿವ್ಯ ಸಾನಿಧ್ಯದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ಧರ್ಮದರ್ಶಿಗಳು, ಶ್ರೀ ಕ್ಷೇತ್ರ ಬಂಗಾರಮಕ್ಕಿ ಇವರ ಸಾನಿಧ್ಯದಲ್ಲಿ ಶ್ರೀ ದೇವಸ್ಥಾನಕ್ಕೆ ಆಗಮಿಸುವ 11 ಪಲ್ಲಕ್ಕಿ ದೇವರುಗಳು
* ಮಾಳೂರು ಸೀಮೆ ಶ್ರೀ ಗುತ್ಯಮ್ಮ ದೇವಸ್ಥಾನ, ಶ್ರೀ ಕ್ಷೇತ್ರ ಗುತ್ತಿಯಡೇಹಳ್ಳಿ
* ಶ್ರೀ ಗುತ್ಯಮ್ಮ ದೇವಸ್ಥಾನ, ಶ್ರೀ ಕ್ಷೇತ್ರ ಸೋಮವಾರಸಂತೆ-ಹೊಸಹಳ್ಳಿ
* ಶ್ರೀ ಗಾಳಿಮಾರಮ್ಮ ದೇವಸ್ಥಾನ, ಮಾಳೂರು, ಮಾಳೂರು ಸೀಮೆ
* ಶ್ರೀ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಾನ, ಶ್ರೀ ಕ್ಷೇತ್ರ ಅಲಬಳ್ಳಿ
* ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀ ಕ್ಷೇತ್ರ ಸಮಕಾನಿ, ಹೊಸಬೀಡು
* ಶ್ರೀ ಗುತ್ಯಮ್ಮ ಮತ್ತು ಶ್ರೀ ದುರ್ಗಮ್ಮ ದೇವಸ್ಥಾನ, ಮಂಡಗದ್ದೆ ಸೀಮೆ
* ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀ ಕ್ಷೇತ್ರ ಮೇಗರವಳ್ಳಿ
* ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ನೆಲ್ಲಿಸರಕ್ಯಾಂಪ್ ಮಂಡಗದ್ದೆ
* ಕುಟ್ಲುಗಾರು ಶ್ರೀ ಗುತ್ತಿಯಮ್ಮ ದೇವಸ್ಥಾನ, ಕುಟ್ಲುಗಾರು
* ಶ್ರೀ ಕುಮಾರರಾಮ ಗ್ರಾಮ ದೇವರು, ಶ್ರೀ ಕ್ಷೇತ್ರ ಕೀಗಡಿ
ಈ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತಿಯಾಗಿ ಕೆ.ಎಸ್. ಈಶ್ವರಪ್ಪ, ಕಾಂತೇಶ್, ಮುಳ್ಳೂರು ಕಲ್ಕುಡೆ ಲೋಕಶ್ ಶೆಟ್ಟಿ, ಅರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್.ಎಂ. ಮಂಜುನಾಥ ಗೌಡರು, ಆಯನೂರು ಮಂಜುನಾಥ್, ಶ್ರೀಕಾಂತ್, ಲೋಕೇಶ್ವರಿ ಸತೀಶ್, ನಿವೇದನ್ ನೆಂಪೆ, ಕುಳ್ಳುಂಡೆ ನಾಗರಾಜ್ ಗೌಡ್ರು, ಇಂದ್ರಮ್ಮ ಮತ್ತು ಮಕ್ಕಳು, ಅಳಿಯಂದಿರು, ದಿವ್ಯ ಪ್ರೇಮ್ಕುಮಾರ್, ಸಿಂಚು ಸುರೇಶ್ ಮತ್ತು ಕುಟುಂಬದವರು, ಸತ್ಯನಾರಾಯಣ ಭಟ್ರು, ಪೂರ್ಣೇಶ್, ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಿ.ಡಿ.ಓ.. ಗ್ರಾಮ ಪಂಚಾಯತ್, ಶಿಂಗನಬಿದರೆ, ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ, ಮಂಡಗದ್ದೆ ವಲಯ, ಮೆಸ್ಕಾಂ ಇಲಾಖೆ ಮಂಡಗದ್ದೆ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ದಿನಾಂಕ 08-02-2025 ರ ಶನಿವಾರ ರಾತ್ರಿ 8-00 ಗಂಟೆಗೆ ಮಾಳೂರು ಸೀಮೆ ಶ್ರೀ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಗುತ್ತಿಯಡೇಹಳ್ಳಿ ಇವರಿಂದ ಯಕ್ಷಗಾನ ನಾಗನಂದನ ಹಾಗೂ 09-02-2025 ನೇ ಭಾನುವಾರ ದ್ವಾದಶಿ ಬೆಳಗ್ಗೆ 10-00 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಶ್ರೀ ಪಲ್ಲಕ್ಕಿ ದೇವರುಗಳು ಸ್ವಕ್ಷೇತ್ರಕ್ಕೆ ತೆರಳಲಿವೆ. ಮಾನ್ಯ ಭಕ್ತಾದಿಗಳು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು-ಮನ-ಧನದೊಂದಿಗೆ ಸಹಕರಿಸಿ, ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಸರ್ವರಿಗೂ ಆದರದ ಸುಸ್ವಾಗತವನ್ನ ಶ್ರೀ ನಾಗಯಕ್ಷೆ ಸೇವಾ ಸಮಿತಿ (ರಿ.) ಮತ್ತು ಹೆಗಲತ್ತಿ ಗ್ರಾಮಸ್ಥರು ಹಾಗೂ ಕುಟುಂಬದವರು, ಸರ್ವ ಭಕ್ತವೃಂದ, ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಶಿಂಗನಬಿದರೆ ಗ್ರಾಮ ಪಂಚಾಯತ್ ರವರು ಕೋರಿದ್ದಾರೆ.