- ಜನರಲ್ಲಿ ಮೂಡಿದ ಆತಂಕ!
- ಪವಿತ್ರ ರಾಮಯ್ಯ ಅವರಿಂದ ಸ್ಥಳ ಪರಿಶೀಲನೆ
ಶಿವಮೊಗ್ಗ: ಹುಣಸೋಡು ಗ್ರಾಮದ ಬಳಿ ಕ್ವಾರಿಯಲ್ಲಿ ಗುರುವಾರ ರಾತ್ರಿ ಭಾರಿ ಪ್ರಮಾಣದ ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಘಟನೆಯಲ್ಲಿ ಐದಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಈ ನಡುವೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಪವಿತ್ರ ರಾಮಯ್ಯ ಘಟನೆ ನಡೆದ ರಾತ್ರಿಯೇ ಭದ್ರಾ ಡ್ಯಾಂಗೆ ಭೇಟಿ ನೀಡಿ ಪವಿತ್ರ ರಾಮಯ್ಯ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಪವಿತ್ರ ರಾಮಯ್ಯ ಸದ್ಯದ ಮಟ್ಟಿಗೆ ಯಾವುದೇ ಅಪಾಯ ಕಂಡು ಬಂದಿಲ್ಲ ಎಂದು ತಿಳಿಸಿದರು. ಇನ್ನೂ ಒಂದು ವೇಳೆ ಭದ್ರಾ ಅಣೆಕಟ್ಟೆಗೆ ತೊಂದರೆ ಯಾಗಿದ್ದರೆ ತರಿಕೇರೆ, ಭದ್ರವಾತಿ, ಶಿವಮೊಗ್ಗ ಜಿಲ್ಲೆಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು, ಇದರಿಂದ ನೂರಾರು ಹಳ್ಳಿಗಳು ಜಲಾವೃತ್ತವಾಗುತ್ತಿದ್ದವು. ಸದ್ಯದ ಮಟ್ಟಿಗೆ ಅಪಾಯ ಇಲ್ಲವಾದರೂ ಸ್ಥಳಕ್ಕೆ ತಜ್ಞರು ಬಂದು ಪರಿಶೀಲನೆ ನಡೆಸುವ ತನಕ ಜಿಲ್ಲೆಯಲ್ಲಿ ಯಾರೂ ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯವಾಗುವುದಿಲ್ಲಎಂದು ಸ್ಥಳೀಯ ಜನರು ಹೇಳಿದ್ದಾರೆ.