ಕಾಂಗ್ರೇಸ್ ಸರ್ಕಾರದ ವಿರುದ್ಧ ಶೃಂಗೇರಿಯಲ್ಲಿ ಗುಡುಗಿದ ಬಿಜೆಪಿ!
– ರೈತರ ಒತ್ತುವರಿ ತೆರುವು ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾದ ನೂರಾರು ರೈತರು
– ಕೊಪ್ಪ, ಎನ್. ಆರ್. ಪುರದಲ್ಲಿ ಶೀಘ್ರದಲ್ಲಿ ಪ್ರತಿಭಟನೆ?
NAMMUR EXPRESS NEWS
ಶೃಂಗೇರಿ: ರಾಜ್ಯ ಸರ್ಕಾರದ ರೈತರ ಒತ್ತುವರಿ ತೆರವು ವಿರುದ್ಧ ಶೃಂಗೇರಿ ತಾಲೂಕು ಬಿಜೆಪಿ ಕರೆಕೊಟ್ಟಿದ್ದ ಬೃಹತ್ ಪ್ರತಿಭಟನೆಯಲ್ಲಿ ನೂರಾರು ರೈತರು,ಕಾರ್ಯಕರ್ತರು ಭಾಗಯಾಗಿ ರಾಜ್ಯ ಸರ್ಕಾರ ಹಾಗೂ ಕ್ಷೇತ್ರದ ಶಾಸಕರ ವಿರುದ್ಧ ಪ್ರತಿಭಟಿಸಿದರು.
ಶೃಂಗೇರಿ ಮುಖ್ಯ ಬಸ್ ನಿಲ್ದಾಣದಿಂದ ಸಂತೆ ಮಾರುಕಟ್ಟೆಯವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಶಾಸಕರಾದ ಡಿ.ಎನ್ ಜೀವರಾಜ್, ಭಾಜಪಾ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಪುಣ್ಯಪಾಲ್,ತಾಲೂಕು ಭಾಜಪಾ ಅಧ್ಯಕ್ಷರಾದ ಉಮೇಶ್ ತಲಗಾರು,ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಸೇರಿದಂತೆ ಬಿಜೆಪಿ,ಜೆಡಿಎಸ್ ಕಾರ್ಯಕರ್ತರು,ರೈತರು ಮಳೆಯನ್ನು ಲೆಕ್ಕಿಸದೇ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ರೈತರ ಪರ ದನಿ
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪುಣ್ಯಪಾಲ್, ಸರ್ಕಾರ ಕೇವಲ ಹಗರಣಗಳಲ್ಲಿ ಾಗೂ ಹಗರಣಗಳನ್ನು ಮು್ಚಿಹಾಕುವುದರಲ್ಲಿ ಮುಳುಗಿದ್ದು,ಬಡ ಜನರ ಅನುದಾನದ ಹಣದಲ್ಲಿ ಭ್ರಷ್ಟಾಚಾರ ಮಾಡಿ ಜನರಿಗೆ ದ್ರೋಹ ಮಾಡಿದೆ. ಸಾಲದೆಂಬಂತೆ ಹಲವು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸಿಕೊಂಡಬಂದ ರೈತರ ಜಮೀನನ್ನು ಒತ್ತುವರಿ ಹೆಸರಿನಲ್ಲಿ ರೈತರ ಬದುಕಿಗೆ ಬೆಂಕಿ ಇಡುವ ಕೆಲಸ ಮಾಡುತ್ತಿದೆ.ತಕ್ಷಣವೇ ಕ್ಷೇತ್ರದ ಶಾಸಕರು ಕ್ಷೇತ್ರದ ರೈತರ ಪರವಾಗಿ ನಿಂತು ಒತ್ತುವರಿ ತೆರವು ಆದೇಶವನ್ನು ವಿರೋಧಿಸಬೇಕು ಎಂದರು.
ಶಾಸಕರ ವಿರುದ್ದ ಗುಡುಗಿದ ಜೀವರಾಜ್!
ಮಾಜಿ ಶಾಸಕ ಡಿ.ಎನ್ ಜೀವರಾಜ್ ಮಾತನಾಡಿ, ಇಂತಹ ವಿಷಯದಲ್ಲಿ ರಾಜಕೀಯ ಮಾಡದೇ ಶಾಸಕರು ರೈತರ ಪರ ನಿಲ್ಲಬೇಕು. ರೈತರ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು. ಹಾಗೇನಾದರು ತೆರವಿಗೆ ಅಧಿಕಾರಿಗಳು ಬಂದರೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ರಾಜಕೀಯ ಮಾಡದೇ ರೈತರ ಪರವಾಗಿ ನಿಲ್ಲುತ್ತೇವೆ. ಕೆರೆಕಟ್ಟೆಯಲ್ಲಿ ತಲೆತಲಾಂತರದಿಂದ ಜನರು ವಾಸಿಸುತ್ತಿದ್ದು ಈಗ ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಅವರಿಗೆ ಸೂಕ್ತ ಪರಿಹಾರಿ ನೀಡಿ ಅವರ ಮುಂದಿನ ಜೀವನಕ್ಕೆ ನೆರವಾಗಿ ನಂತರ ತೆರವು ಕಾರ್ಯಕ್ಕೆ ಮುಂದಾಗಬೇಕು.ಅವರ ಬೆಳೆಗೆ ಗ್ರೇಡ್1 ಮಾನ್ಯತೆ ನೀಡಿ ಪರಿಹಾರ ನೀಡಬೇಕು ಎಂದರು.
ಶಾಸಕರೇ ಆದೇಶಗಳನ್ನು ಕಳಿಸಿ,ಸುಳ್ಳು ಹೇಳಬೇಡಿ ಕಸ್ತೂರಿರಂಗನ್ ಯೋಜನೆಯ ಆಧಾರದಲ್ಲಿ ಈ ತೆರವು ಪ್ರಕ್ರಿಯೆ ನಡೆಯುತ್ತಿಲ್ಲ ಕಸ್ತೂರಿ ರಂಗನ್ ವರದಿಗೂ ಈ ಒತ್ತುವರಿ ತೆರವು ಆದೇಶಕ್ಕೂ ಸಂಬಂಧವಿಲ್ಲ. ಕಾಂಗ್ರೇಸ್ ಸರ್ಕಾರ,ಸಚಿವರು, ಶಾಸಕರು,ಸ್ಥಳೀಯ ನಾಯಕರು ಜನರ ಿಕ್ಕು ಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಮಲೆನಾಡಿಗರನ್ನು ಬದುಕಲು ಬಿಡಿ. ನಿಮ್ಮ ಸರ್ಕಾರಕ್ಕೆ ನಿಜಕ್ಕೂ ಕೃತಕ ಕಾಡುಗಳನ್ನು ಅಭಿವೃದ್ದಿ ಪಡಿಸುವ ಉದ್ದೇಶವಿದ್ದರೆ ಬಯಲು ಸೀಮೆಯಲ್ಲೂ ಅರಣ್ಯ ಇಲಾಖೆಯ ಜಾಗಗಳಿವೆ ಅಲ್ಲಿ ಪ್ಲಾಂಟೇಷನ್ ಅಭಿವೃದ್ಧಿಪಡಿಸಿ ಅದನ್ನು ಬಿಟ್ಟು ನೈಸರ್ಗಿಕವಾಗಿ ಕಾಡು ಬೆಳೆಯುವ ಈ ಭಾಗದಲ್ಲಿ ಪ್ಲಾಂಟೇಷನ್ನ್ನು ಬೆಳೆಸುವ ಅವಶ್ಯಕತೆಯಿಲ್ಲ. ರೈತರಿಂದ ಇಷ್ಟೆಲ್ಲ ಪ್ರತಿಭಟನೆ ವಿರೋಧ ವ್ಯಕ್ತವಾಗುತ್ತಿದ್ದರೂ ಅರಣ್ಯ ಸಚಿವರು ರೈತರ ವಿರುದ್ಧವಾದ ಆದೇಶವನ್ನು ಹೊರಡಿಸುತ್ತಿರುವುದು ಸರಿಯಲ್ಲ. ಈ ಕೂಡಲೇ ಇಂತಹ ಆದೇಶಗಳನ್ನು ಸ್ಥಗಿತಗೊಳಿಸಬೇಕು ಇಲ್ಲವಾದಲ್ಲಿ ಕೊಪ್ಪ,ಎನ್ ಆರ್ ಪುರ ನಂತರ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿದರು.
ಸ್ಥಳಕ್ಕೆ ತಹಶೀಲ್ದಾರ್ ಹಾಗೂ ವಲಯಾರಣ್ಯಾಧಿಕಾರಿಗಳನ್ನು ಕರೆಸಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.