ಚಿಕ್ಕಮಗಳೂರು: ಜಮೀನು ಒತ್ತುವರಿ ತೆರವು ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
– ತೀರ್ಥಹಳ್ಳಿ : ಅನಾರೋಗ್ಯದಿಂದ ಜಿಗುಪ್ಪೆಗೊಂಡು ಬಾವಿಗೆ ಹಾರಿದ ವ್ಯಕ್ತಿ!
– ಸಾಗರ: ಜೋಗ ಜಲಪಾತ, ಫಾಲ್ಸ್ ಸಮೀಪವೇ ಇದ್ದ ಮನೆ ತೆರವು
– ಶಿವಮೊಗ್ಗ : ವಿದ್ಯುತ್ ಶಾಕ್ ತಗುಲಿ ಯುವಕ ಸಾವು
– ಸಾಗರ: ಬಾಣಂತಿಗೆ ಕಪಾಳಮೋಕ್ಷ ಆರೋಪ!
ವೈದ್ಯ ಡಾ. ನಾಗೇಂದ್ರಪ್ಪ ವಿರುದ್ಧ ಪ್ರಕರಣ ದಾಖಲು!
– ಶಿವಮೊಗ್ಗ : ಧಾರವಾಹಿ ನಟಿಯ ಪ್ರೇಮ ಪ್ರಕರಣ, ಪ್ರಿಯಕರನ ಆತ್ಮಹತ್ಯೆ!
NAMMUR EXPRESS NEWS
ಚಿಕ್ಕಮಗಳೂರು: ಒತ್ತುವರಿ ತೆರವು ವೇಳೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿಯ ಕೆ.ಆರ್ ಪೇಟೆ ಪೋಸ್ಟ್ ಕಂಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಲ್ಲೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ. ಬೊಮ್ಮನ ಕೊಡಿ ಕೆರೆ ಪಕ್ಕ ಆಲಮ್ಮ, ಕಲ್ಲೇಗೌಡ ಇವರ ಜಮೀನು ಇದ್ದು, ಕೆರೆಯ ಒಂಬತ್ತು ಗುಂಟೆ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಅಧಿಕಾರಿಗಳು ತೆರವಿಗೆ ಬಂದ ವೇಳೆ ಮಲ್ಲೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
– ತೀರ್ಥಹಳ್ಳಿ : ಅನಾರೋಗ್ಯದಿಂದ ಜಿಗುಪ್ಪೆಗೊಂಡು ಬಾವಿಗೆ ಹಾರಿದ ವ್ಯಕ್ತಿ!
ತೀರ್ಥಹಳ್ಳಿ : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ತಾಲೂಕಿನ ಜಿಗಳಗೊಡು ಸಮೀಪದ ಯೋಗಿ ನರಸೀಪುರ ಗ್ರಾಮದ ಬನಸಂಗೆ ವಾಸಿ ಸಿದ್ದಪ್ಪ ಇಂದು ಬೆಳಗಿನ ಜಾವ ಮನೆ ಪಕ್ಕದಲ್ಲಿ ಇದ್ದಂತಹ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ವ್ಯವಸಾಯ ಮಾಡಿಕೊಂಡಿದ್ದ ಸಿದ್ದಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು. ಓರ್ವ ಪುತ್ರ ಹಾಗೂ ಪುತ್ರಿ ಹೊರಗಡೆ ಕೆಲಸ ಮಾಡುತ್ತಿದ್ದು ಮನೆಯಲ್ಲಿ ಇವರ ಜೊತೆಗೆ ಪತ್ನಿ ಮಾತ್ರ ಇದ್ದರು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಸಾಗರ: ಜೋಗ ಜಲಪಾತ, ಫಾಲ್ಸ್ ಸಮೀಪವೇ ಇದ್ದ ಮನೆ ತೆರವು
ಸಾಗರ: ಜೋಗದ ರಾಣಿ ಫಾಲ್ಸ್ ಪ್ರದೇಶದಲ್ಲಿ ಕಳೆದ 2 ದಶಕಗಳಿಂದ ವಾಸವಿದ್ದ ಹಸ್ತಿಕ್ ರೋಡ್ರಿಗಸ್ ಎಂಬುವರ ಮನೆಯನ್ನು ಜಿಲ್ಲಾಧಿಕಾರಿ ಆದೇಶದಂತೆ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಮನೆಯವರ ಪ್ರತಿರೋಧದ ನಡುವೆಯೂ ಕಾರ್ಯಾಚರಣೆ ಮೂಲಕ ತೆರವುಗೊಳಿಸ ಲಾಯಿತು. ಇಲ್ಲಿ ವಾಹನ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡುವ ಸಲುವಾಗಿ ಮನೆ ತೆರವು ಮಾಡಲಾಗಿದೆ. ಈ ಹಿಂದೆ ಅವರು ಕಟ್ಟಿಕೊಂಡಿದ್ದ ಕೊಟ್ಟಿಗೆ ಮತ್ತು ಅಡಕೆ ತೋಟಗಳನ್ನು ತೆರವುಗೊಳಿಸಲಾಗಿತ್ತು. ಆಗ ಅವರಿಗೆ ಪರಿಹಾರ ರೂಪದಲ್ಲಿ ನಿಗಮದಿಂದ ವಾಸಕ್ಕೆ ಮನೆ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರದಲ್ಲಿ ಕುಟುಂಬದ ಒಬ್ಬ ಸದಸ್ಯರಿಗೆ ಕೆಲಸ ನೀಡುವ ಭರವಸೆ ನೀಡಲಾಗಿತ್ತು. ಆದರೆ ಗಡುವು ಮೀರಿದರೂ ತಾವು ವಾಸಿಸುತ್ತಿರುವ ಮನೆ ತೆರವುಗೊಳಿಸುವುದಕ್ಕೆ ಕುಟುಂಬಸ್ಥರು ನಿರಾಕರಿಸಿದ್ದರು. ಅನಿವಾರ್ಯವಾಗಿ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಸಾಗರದ ಉಪ ವಿಭಾಗಾಧಿಕಾರಿ ಯತೀಶ್ ನೇತೃತ್ವ ದಲ್ಲಿ ಮನೆ ತೆರವು ಗೊಳಿಸಲಾಯಿತು. ಈ ಸಂದರ್ಭ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜೋಗ ಜಲಪಾತಕ್ಕೆ ಹೆಚ್ಚುತ್ತಿರುವ ಪ್ರವಾಸಿಗರ ವಾಹನ ದಟ್ಟಣೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಗೆ ಈ ಮನೆ ಅಡ್ಡಿಯಾಗಿತ್ತು. ಸಾಕಷ್ಟು ಬಾರಿ ಸಂಧಾನ ನಡೆಸಿದರೂ ಸಹ ಮನೆಯವರು ಒಪ್ಪದಿದ್ದ ಕಾರಣ ಅನಿವಾರ್ಯವಾಗಿ ಕ್ರಮ ಕೈಗೊಳ್ಳಲಾಯಿತು ಎಂದು ರಕ್ಷಿತ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭ ಪಟ್ಟಣ ಇಓ ಎಂ. ಕೆ. ಸುರೇಶ್, ಕಾರ್ಗಲ್ ಠಾಣೆ ಸಬ್ ಇನ್ಸ್ಪೆಕ್ಟರ್ ಹೊಳೆಬಸಪ್ಪ ಹೋಳಿ ಮತ್ತಿತರರು ಹಾಜರಿದ್ದರು.
– ಶಿವಮೊಗ್ಗ : ವಿದ್ಯುತ್ ಶಾಕ್ ತಗುಲಿ ಯುವಕ ಸಾವು
ಶಿವಮೊಗ್ಗ: ಹೊಳೆಹೊನ್ನೂರು ಹೋಬಳಿಯ ಕೈ ಆನವೇರಿಯಲ್ಲಿ ತಗಡಿನ ಶೆಡ್ ನಿಮಾ ರ್ಣದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕ ಮೃತಪಟ್ಟಿದ್ದಾನೆ. ಸಮೀಪದ ಹನುಮಂತಾಪುರದ ರಕ್ಷಿತ್ ಮೃತಪಟ್ಟವನು. ರಕ್ಷಿತ್ ಆನವೇರಿಯ ಕೆ ಕೆ ರಸ್ತೆಯಲ್ಲಿ ತನ್ನ ಚಿಕ್ಕಪ್ಪನ ಮಗನೊಂದಿಗೆ ಸೇರಿ ಹೊಸದಾಗಿ ಮಿಲ್ಟಿ ಹೋಟೆಲ್ ಶೆಡ್
ನಿರ್ಮಿಸುತ್ತಿದ್ದನು. ಶೆಡ್ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಆಕಸ್ಮಿಕವಾಗಿ 11 ಕೆ.ವಿ ವಿದ್ಯುತ್ ತಂತಿ ತಗುಲಿ ಅಸ್ವಸ್ಥನಾಗಿದ್ದಾನೆ. ಕೂಡಲೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೆ ಸಾವನ್ನಪ್ಪಿದ್ದಾನೆ. ಹನುಮಂತಾಪುರದ ಲಲಿತಾಬಾಯಿ ಕೃಷ್ಣಜಿರಾವ್ ದಂಪತಿಯ ಒಬ್ಬನನೇ ಮಗ ರಕ್ಷಿತ್ ಆಗಿದ್ದಾದಾನೆ.
– ಸಾಗರ: ಬಾಣಂತಿಗೆ ಕಪಾಳಮೋಕ್ಷ ಆರೋಪ!
ವೈದ್ಯ ಡಾ. ನಾಗೇಂದ್ರಪ್ಪ ವಿರುದ್ಧ ಪ್ರಕರಣ ದಾಖಲು!
ಸಾಗರ : ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಬಾಣಂತಿಯೊಬ್ಬರಿಗೆ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಯಿ-ಮಗು ಆಸ್ಪತ್ರೆಯ ಪ್ರಸೂತಿ ವೈದ್ಯ ಡಾ. ನಾಗೇಂದ್ರಪ್ಪ ಎಂಬವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.1 ರಂದು ಲೋಕೇಶ್ ಎಂಬವವರ ಪತ್ನಿಯನ್ನು ತಾಯಿ-ಮಗು ಆಸ್ಪತ್ರೆಗೆ ಸಂತಾನಹರಣ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಡಾ. ನಾಗೇಂದ್ರಪ್ಪ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಡಾ. ನಾಗೇಂದ್ರಪ್ಪ ವಿನಾಕಾರಣ ಲೋಕೇಶ್ ಅವರ ಪತ್ನಿಯ ಕೆನ್ನೆಗೆ ರಭಸವಾಗಿ ಹೊಡೆದಿದ್ದಾರೆ. ಇದರಿಂದ ಮಹಿಳೆಗೆ ಕಿವಿ ನೋವಾಗಿದ್ದು ಮಾನಸಿಕವಾಗಿ ಹೆದರಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ಹೊಡೆದಿರುವ ಕಾರಣ ತಿಳಿಯಲು ಲೋಕೇಶ್, ಡಾ. ನಾಗೇಂದ್ರಪ್ಪ ಅವರನ್ನು ಭೇಟಿಯಾಗಲು ಆಸ್ಪತ್ರೆಯಲ್ಲಿ ಹುಡುಕಿದಾಗ ಅವರು ನಾಪತ್ತೆಯಾಗಿದ್ದಾರೆ.
– ಶಿವಮೊಗ್ಗ : ಧಾರವಾಹಿ ನಟಿಯ ಪ್ರೇಮ ಪ್ರಕರಣ, ಪ್ರಿಯಕರನ ಆತ್ಮಹತ್ಯೆ!
ಶಿವಮೊಗ್ಗ : ಮೂಲದ ಧಾರವಾಹಿ ನಟಿಯೊಬ್ಬರ ಪ್ರೇಮ ಪ್ರಕರಣದಲ್ಲಿ ಆಕೆಯ ಪ್ರಿಯಕರನ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರು ಮಾಧ್ಯಮಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯ ನಟಿಯೊಬ್ಬರು ಬೆಂಗಳೂರಿನಲ್ಲಿ ವಿವಿಧ ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ಅವರು ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದ ಮದನ್ ಎಂಬವರನ್ನು ಪ್ರೀತಿಸುತ್ತಿದ್ದರು. ಈ ನಡುವೆ ಯುವತಿ ಮದುವೆಯಾಗುವಂತೆ ಒತ್ತಡ ಹೇರಿದ್ದರಿಂದ ಯುವಕ ಬೇಸರಗೊಂಡಿದ್ದು ಇಬ್ಬರ ನಡುವೆ ಗಲಾಟೆ ನಡೆದಿದೆ. ಯುವಕ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಹುಳಿಮಾವು ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 108 ಆತ್ಮಹತ್ಯೆಗೆ ಪ್ರಚೋದನೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ .