- 694 ಕೇಸ್:7 ಸಾವು: ಸಾವಿನ ಲೆಕ್ಕ ಪಕ್ಕಾ ಇದೆಯಾ?
- ಆಂಬುಲೆನ್ಸ್ನಿಂದ ತಪ್ಪಿಸಿಕೊಂಡವ ಹೆಣವಾದ!
- ಸಾಗರದ ಪೊಲೀಸ್ ಅಧಿಕಾರಿ ಕರೋನಾಗೆ ಬಲಿ
- ಕವಲೇದುರ್ಗಾ ಶ್ರೀಗಳಿಗೆ ಕರೋನಾ: ಆಸ್ಪತ್ರೆಗೆ
NAMMUR EXPRESS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಕರೋನಾ ಸಾವಿನ ಲೆಕ್ಕವನ್ನು ಜಿಲ್ಲಾಡಳಿತ ಸುಳ್ಳು ನೀಡುತ್ತಿದೆಯಾ ಎಂಬ ಅನುಮಾನ ಕಾಡಿದೆ. ಇದಕ್ಕೆ ಕಾರಣ ತಾಲೂಕುವಾರು ಆಗುತ್ತಿರುವ ಸಾವು.
ಜಿಲ್ಲಾಡಳಿತ ಎಲ್ಲಾ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ವರದಿ ತರಿಸಿಕೊಳ್ಳುತ್ತಿಲ್ಲವೇ ಎಂಬ ಅನುಮಾನ ಮೂಡಿದೆ.
694 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6900 ಆಗಿದೆ.
7 ಜನ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಇದುವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 846ಕ್ಕೇರಿದೆ.
ಎಷ್ಟು ಕೇಸ್?: ಶಿವಮೊಗ್ಗ 211 ಭದ್ರಾವತಿ 122, ಶಿಕಾರಿಪುರ 114, ತೀರ್ಥಹಳ್ಳಿ 48, ಸೊರಬ 49, ಹೊಸನಗರ 17, ಸಾಗರ 115,ಇತರೆ ಜಿಲ್ಲೆ 18.
ಪರಾರಿಗೆ ಯತ್ನಿಸಿ ಸಾವು!: ಶಿವಮೊಗ್ಗ ಮೆಗ್ಗಾನ್ ಗೆ ದಾಖಲಾಗಲು ನಿರಾಕರಿಸಿ ಅಂಬ್ಯುಲೆನ್ಸ್ ನಿಂದ ಪರಾರಿಯಾಗಿದ್ದ ಶುಂಠಿಕೊಪ್ಪದ ನಿವಾಸಿ ಶಂಕರಪ್ಪ(39) ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಹೊಸನಗರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶುಂಠಿಕೊಪ್ಪದ ನಿವಾಸಿಯನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲು ಜೂ.1 ರಂದು ಸೂಚಿಸಲಾಗಿತ್ತು. ಹೊಸನಗರದಿಂದ ಗವಟೂರಿನ ಬಳಿ ಅಂಬ್ಯುಲೆನ್ಸ್ ಬರುವ ವೇಳೆ ಗ್ಲಾಜು ಒಡೆದು ಮೂತ್ರ ವಿಸರ್ಜನೆ ಬರುತ್ತಿದೆ ಎಂದು ಪರಾರಿಯಾಗಲು ಶಂಕ್ರಪ್ಪ ಯತ್ನಿಸಿದ್ದರು.
ಕವಲೆದುರ್ಗ ಶ್ರೀಗಳಿಗೆ ಕರೋನಾ!: ತೀರ್ಥಹಳ್ಳಿಯ ಕವಲೆದುರ್ಗ ಮಠದ ಡಾ. ರಾಜಗುರು ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು ಕರೋನಾ ಸೊಂಕಿಗೆ ಒಳಗಾಗಿದ್ದು, ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಕಳೆದ 2 ದಿನಗಳಿಂದ ಕೆಮ್ಮು ಸುಸ್ತು ಇದ್ದ ಕಾರಣ ಆಸ್ಪತ್ರೆಗೆ ಬಂದು ಕರೋನಾ ತಪಾಸಣೆ ಮಾಡಿಸಿಕೊಂಡಿದ್ದು ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಂಗ್ರೆಸ್ ನಾಯಕನಿಗೆ ಕರೋನಾ!: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸದಸ್ಯ ಜಯಪ್ರಕಾಶ್ ಶೆಟ್ಟಿ ಅವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಇವರು ತೀರ್ಥಹಳ್ಳಿ ನಗರ ಕಾಂಗ್ರೆಸ್ ಅಧ್ಯಕ್ಷರಾಗಿಕಾರ್ಯನಿರ್ವಹಿಸುತ್ತಿದ್ದರು.
ಹಾಲಪ್ಪ ಸಹಪಾಠಿ ಕರೋನಾಗೆ ಬಲಿ: ಸಾಗರ ಶಾಸಕ ಹಾಲಪ್ಪ ಅವರ ಸಹಪಾಠಿ ರಮೇಶ್ ಬಿನ್ ಭೀಮಪ್ಪ ಕರೋನಾಗೆ ಬಲಿಯಾಗಿದ್ದಾರೆ. ಸಾಗರ ತಾಲ್ಲೂಕಿನ ಬಾಳೆಗುಂಡಿಯ ಗ್ರಾಮದವರಾಗಿದ್ದು,ಸೋಂಕಿಗೆ ತುತ್ತಾಗಿ ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದಾರೆ.
ರಮೇಶ್ ಕಾಲೇಜು ದಿನಗಳಲ್ಲಿ ನನ್ನ ರೂಮ್ ಮೇಟ್ ಆಗಿದ್ದವರು, ಸಾಗರ ಮತ್ತು ಕಾರ್ಗಲ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ನಂತರ ಕಾರ್ಗಲ್ ಹಾಗೂ ಸೊರಬ ಠಾಣೆಯಲ್ಲಿ ASI ಆಗಿ ಸೇವೆ ಸಲ್ಲಿಸಿ, ಹಾಲಿ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಅಗಲಿಕೆ ವಿಷಯ ಮನಸ್ಸಿಗೆ ತೀವ್ರ ದುಃಖವನ್ನುಂಟುಮಾಡಿದೆ. ಭಗವಂತ ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಿ, ಕುಟುಂಬಸ್ಥರಿಗೆ, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಹಾಲಪ್ಪ ಕಂಬನಿ ಮಿಡಿದಿದ್ದಾರೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.