- ಕೊಪ್ಪದ ಕುಂಚೂರು ಹರೀಶ್ ಚಿಕ್ಕಮಗಳೂರಲ್ಲಿ ಸಾವು
- ಭದ್ರಾವತಿ ಹೆಚ್ಚು, ತೀರ್ಥಹಳ್ಳಿಯಲ್ಲಿ ಕಡಿಮೆ ಕೇಸ್
- ಲಾಕ್ ಇದ್ರೂ ಕಾಫಿ ನಾಡಲ್ಲಿ ಹೆಚ್ಚುತ್ತಿದೆ ಕರೋನಾ!
NAMMUR EXPRESS
ಮಲೆನಾಡು: ಮಲೆನಾಡಿನ ಖ್ಯಾತ ಜಾನಪದ ಕಲಾವಿದ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕೊಪ್ಪ, ಮಲೆನಾಡು ಹೆಸರನ್ನು ಬೆಳಗಿಸಿದ್ದ ಕುಂಚೂರು ಹರೀಶ್ ಕರೋನಾಗೆ ಬಲಿಯಾಗಿದ್ದಾರೆ.
ಕೊಪ್ಪ ತಾಲೂಕಿನ ಕುಂಚೂರಿನ ಹರೀಶ್(45) ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದ್ರೆ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ನೂರಾರು ಯುವ ಜನ ಮೇಳ, ಸ್ಪರ್ಧೆ, ಹಬ್ಬ, ಉತ್ಸವಗಳಲ್ಲಿ ಇವರ ದನಿ ಹೆಸರು ಮಾಡಿತ್ತು. ಪತ್ನಿ, ಇಬ್ಬರು ಪುತ್ರಿ ಸೇರಿ ಅಪಾರ ಅಭಿಮಾನಿಗಳನ್ನು ಅವರು ಆಗಲಿದ್ದಾರೆ.
ಜಾನಪದ ಗೀತೆ, ಲಾವಣಿ, ಗೀಗಿ ಪದ, ಗಾಯನದಲ್ಲಿ ಹೆಸರು ಮಾಡಿದ್ದ ಹರೀಶ್ ಅವರನ್ನು ಸರಕಾರ ಪ್ರಶಸ್ತಿ ನೀಡಿ ಗೌರವಿಸಿತ್ತು. ಗುರುವಾರ ಸಂಜೆ ಕರೋನಾ ನಿಯಮದಂತೆ ಅಂತ್ಯಕ್ರಿಯೆ ಮಾಡಲಾಯಿತು.
ಸಂತಾಪ: ಶೃಂಗೇರಿ ಶಾಸಕ ರಾಜೇಗೌಡ, ನಾಯಕ ಸುಧೀರ್ ಕುಮಾರ್ ಮುರೊಳ್ಳಿ, ಪತ್ರಕರ್ತ ರವಿಕಾಂತ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಮ್ಮೂರ್ ಎಕ್ಸ್ಪ್ರೆಸ್ ಮಾರ್ಗದರ್ಶಕರೂ ಆಗಿದ್ದ ಹರೀಶ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ.
ಶಿವಮೊಗ್ಗದಲ್ಲಿ ಎಷ್ಟು ಕೇಸ್!: ಶಿವಮೊಗ್ಗದಲ್ಲಿ 599 ಕೇಸ್ ದಾಖಲಾಗಿದ್ದು 7 ಮಂದಿ ಸಾವನ್ನು ಕಂಡಿದ್ದಾರೆ. ಒಟ್ಟು 839 ಮಂದಿ ಸಾವನ್ನು ಕಂಡಂತಾಗಿದೆ.
ಶಿವಮೊಗ್ಗದಲ್ಲಿ 135, ಭದ್ರಾವತಿ 190 ಶಿಕಾರಿಪುರ 78, ತೀರ್ಥಹಳ್ಳಿ 15, ಸೊರಬ 54, ಹೊಸ ನಗರ 61, ಸಾಗರ 50, ಇತರೆ 16.
ಚಿಕ್ಕಮಗಳೂರಲ್ಲಿ ಎಷ್ಟು ಕೇಸ್!: ಚಿಕ್ಕಮಗಳೂರು 150, ಕಡೂರು 188, ತರೀಕೆರೆ 181, ಎನ್. ಆರ್. ಪುರ 53, ಮೂಡಿಗೆರೆ 70, ಕೊಪ್ಪ 54, ಶೃಂಗೇರಿ 47, ಒಟ್ಟು 742 ಪ್ರಕರಣ ದಾಖಲಾಗಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.