- ತೀರ್ಥಹಳ್ಳಿ ಆಡಳಿತಕ್ಕೆ ಮದ್ಯ ಮಾರಾಟಗಾರರ ಸಾಥ್
- ಡಿಸಿ ಜತೆ ಮೀಟಿಂಗ್: ಸಭೆಯಲ್ಲಿ ನಿರ್ಧಾರ..?
- ಸರಕಾರದ ನಿಯಮದಿಂದ ಮಾರಾಟಗಾರರು ಇಕ್ಕಟ್ಟು!
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮದ್ಯ ಮಾರಾಟಗಾರರು ಇದೀಗ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಕರೋನಾ ಲಾಕ್ ಡೌನ್ ಮುಗಿಯುವವರೆಗೆ ಮದ್ಯದ ಅಂಗಡಿ ತೆರೆಯಲ್ಲ ಎಂದು ತೀರ್ಥಹಳ್ಳಿ ತಾಲೂಕು ಮದ್ಯ ಮಾರಾಟಗಾರರು ತಿಳಿಸಿದ್ದಾರೆ. ಆದರೆ ಆಡಳಿತ ಈ ಬಗ್ಗೆ ಒಪ್ಪಿಗೆ ಕೊಟ್ಟಿಲ್ಲ.
ಶಿವಮೊಗ್ಗ ಜಿಲ್ಲಾಧಿಕಾರಿಗಳು ತೀರ್ಥಹಳ್ಳಿಗೆ ಭೇಟಿ ನೀಡಿದ್ದು ಈ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಕರೋನಾ ಹರಡುವಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ತಾಲ್ಲೂಕಿನ ಜನರ ಆರೋಗ್ಯದ ಬಗೆಗಿನ ಕಾಳಜಿ ಮತ್ತ ಕಳಕಳಿಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಮದ್ಯದಂಗಡಿ ಗಳನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ತಾಲೂಕು ಆಡಳಿತಕ್ಕೆ ಮದ್ಯ ಮಾರಾಟಗಾರರಾಗಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದು ಮದ್ಯ ಮಾರಾಟಗಾರರು ತಿಳಿಸಿದ್ದಾರೆ.
ಶಾಸಕ ಆರಗ ಜ್ಞಾನೇಂದ್ರ ಮತ್ತು ತಹಶೀಲ್ದಾರ್ ಹಾಗೂ ಎಲ್ಲಾ ಎಲ್ಲಾ ಇಲಾಖೆಯ ಸರ್ಕಾರಿ ನೌಕರರು,ಆಸ್ಪತ್ರೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಗಲೂ- ರಾತ್ರಿಯೆನ್ನದೆ ಕೊರೋನಾ ರೋಗ ನಿಯಂತ್ರಣಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ ಸಹಾ ಈ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿಲ್ಲ. ಆದ್ದರಿಂದ ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ಸನ್ನದುದಾರರು ಮಾತುಕತೆ ನಡೆಸಿ ಇಂತಹ ಕಷ್ಟಕರವಾದ ಸನ್ನಿವೇಶದಲ್ಲಿ ಮದ್ಯದಂಗಡಿಗಳ ವಹಿವಾಟಿನಿಂದ ಸೋಂಕು ಹರಡುವ ಸಾಧ್ಯತೆ ಇರುವುದನ್ನು ಅರಿತು ನಮ್ಮ ವೈಯಕ್ತಿಕ ಲಾಭವನ್ನು ಪಕ್ಕಕ್ಕಿಟ್ಟು, ತಾಲ್ಲೂಕಿನ ಜನತೆಯ ಸ್ವಾಸ್ಥ್ಯವನ್ನು ಕಾಪಾಡುವ ಉದ್ದೇಶದಿಂದ, ವ್ಯಾಪಾರ ಮಾಡುವುದು ಬೇಡ ಮತ್ತು ತಾಲ್ಲೂಕಿನಲ್ಲಿ ಕರೋನಾ ಹರಡುವಿಕೆ ನಿಯಂತ್ರಣಕ್ಕೆ ಬರುವವರೆಗೂ ಮದ್ಯದಂಗಡಿಗಳನ್ನು ತೆರೆಯದೇ ಇರಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.
ಕರೋನಾ ಪೀಡಿತ ಸಂತ್ರಸ್ತರಿಗೆ ಅಗತ್ಯವಾಗಿ ಬೇಕಾದ ನೆರವು ನೀಡಲು ಸಿದ್ದ ಎಂದು ಅಧ್ಯಕ್ಷರು ಹಾಗೂ ಸದಸ್ಯರು, ತೀರ್ಥಹಳ್ಳಿ ವೈನ್ & ಬಾರ್ ಮರ್ಚಂಟ್ಸ್ ಅಸೋಸಿಯೇಶನ್ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ.
ಜ್ಞಾನೇಂದ್ರ ಕಿಡಿ!: ತೀರ್ಥಹಳ್ಳಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಆಗುತ್ತಿದೆ. ಕರೋನಾ ಹರಡುತ್ತಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳ ಸಭೆಯಲ್ಲಿ ಕಿಡಿಕಾರಿದ್ದರು. ಇದು ಭಾರೀ ಸಂಚಲನ ಮೂಡಿಸಿತ್ತು. ಇದೀಗ ಎಲ್ಲಾ ಮದ್ಯ ಮಾರಾಟಗಾರರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಆದ್ರೆ ಸರಕಾರ, ಆಡಳಿತ ಅಂಗಡಿ ತೆರೆಯುವಂತೆ ಹೇಳಿದೆ.
ಮದ್ಯ ಮಾರಾಟಕ್ಕೆ ಸರಕಾರದ್ದೇ ಕುಮ್ಮಕ್ಕು!: ತೀರ್ಥಹಳ್ಳಿ ಮದ್ಯ ಮಾರಾಟಗಾರರು ಕರೋನಾ ಸಂಕಷ್ಟದಲ್ಲಿ ಆಡಳಿತದ ಜತೆ ನಿಲ್ಲಲು ಬದ್ಧರಾಗಿದ್ದಾರೆ. ಆದ್ರೆ ಸರಕಾರ ಅಬಕಾರಿ ಇಲಾಖೆ ಆದಾಯಕ್ಕೆ ಪ್ಲಾನ್ ಮಾಡಿದೆ. ಜನ ಏನಾದರೂ ಆಗಲಿ, ಜನ ಕುಡಿದಷ್ಟು ಸರಕಾರಕ್ಕೆ ಲಾಭ.. ಇಲ್ಲಿ ಮದ್ಯ ಮಾರಾಟಗಾರರು ಬಲಿ ಪಶುಗಳು ಅಷ್ಟೇ.
ಶಾಸಕ ಆರಗ ಜ್ಞಾನೇಂದ್ರ ಈ ಬಗ್ಗೆ ಸರಕಾರಕ್ಕೆ ಮನವಿ ಮಾಡ್ತಾರಾ ಕಾದು ನೋಡಬೇಕಿದೆ. ಡಿಸಿ ಜತೆ ಸಭೆ ಇದೀಗ ಕುತೂಹಲ ಮೂಡಿಸಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.