- ಬಸ್ ಹತ್ತಿ ಗೋ ಸಾವು: ಪೊಲೀಸ್ ತನಿಖೆ ಶುರು
- ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲ: ಇದೇ ತಲೆನೋವು
- ಗೃಹ ಮಂತ್ರಿಗಳ ಹೆಸರು ಉಳಿಸುವ ಹೊಣೆ ನಮ್ಮದು!
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದ ಬಳಿ ದನದ ಕಳೆಬರ ಶುಕ್ರವಾರ ರಾತ್ರಿ ಪತ್ತೆಯಾಗಿದ್ದು ಜನರಲ್ಲಿ ಭೀತಿಗೆ ಕಾರಣವಾಗಿತ್ತು, ಆದರೆ ಅದು ಬಸ್ ಹತ್ತಿ ನಡೆದ ಘಟನೆ ಎನ್ನಲಾಗಿದೆ. ಅಚ್ಚರಿ ಎಂದರೆ ಬಸ್ ನಿಲ್ದಾಣ ಸದಾ ಜನರ ದಟ್ಟಣೆಯಿಂದ ಕೂಡಿದ್ದು ಯಾರಿಗೂ ಇದು ಗಮನಕ್ಕೆ ಬಂದಿಲ್ಲ. ರಾತ್ರಿ ವೇಳೆಗೆ ಜನರಿಗೆ ಗೊತ್ತಾಗಿದ್ದು ಸ್ಥಳದಲ್ಲಿ ಸೇರಿದ ನೂರಾರು ಜನ ಇದೀಗ ಗೊಂದಲಕ್ಕೆ ಕಾರಣ ಆಗಿದೆ.ಯಾರಾದರೂ ತಂದು ಇಲ್ಲಿಗೆ ಹಾಕಿರಬಹುದಾ.. ಬಸ್ ಚಕ್ರಕ್ಕೆ ಸಿಲುಕಿರಬಹುದಾ ಎಂಬ ಎರಡು ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ.
ಬಸ್ ಅಡಿ ಸಿಲುಕಿ ಈ ಘಟನೆ ನಡೆದಿದೆ. ಒಂದು ಬಸ್ ಮೇಲೆ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿವೈಎಸ್ಪಿ ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ತೀರ್ಥಹಳ್ಳಿ ಶಾಂತಿಯ ಊರು. ಅದರಲ್ಲೂ ಈಗ ನಮ್ಮವರೇ ಗೃಹ ಸಚಿವ ಸ್ಥಾನ ಅಲಂಕರಿಸಿ ಮಲೆನಾಡಿಗೆ ಹೆಮ್ಮೆ ತಂದಿದ್ದಾರೆ. ಇಂತಹ ಸಂದರ್ಭದಲ್ಲಿ ಗೊಂದಲ ಬೇಡ, ಎಲ್ಲರ ಮೇಲೂ ಹೊಣೆ ಇದೆ ಎಂಬ ಮನವಿ ಕೇಳಿ ಬರುತ್ತಿದೆ.
ಸಿಸಿಟಿವಿ ಇಲ್ಲ: ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಸೇರಿದಂತೆ ತೀರ್ಥಹಳ್ಳಿಯ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಇಲ್ಲ. ಕಂಡರೂ ಅವು ಚಾಲ್ತಿಯಲ್ಲಿಲ್ಲ. ಇಂತಹ ಯಾವುದೇ ಘಟನೆಗಳು ನಡೆದಾಗ ಪೊಲೀಸರು ಸ್ಥಳೀಯ ಅಂಗಡಿಗಳಿಂದ ವಿಡಿಯೋ ತೆಗೆದುಕೊಳ್ಳುವ ದುಸ್ಥಿತಿ ಇದೆ. ಆಗ ಬೇರೆ, ಈಗ ತೀರ್ಥಹಳ್ಳಿ ಕ್ಷೇತ್ರದ ಶಾಸಕರೇ ಗೃಹ ಮಂತ್ರಿಗಳಾಗಿದ್ದಾರೆ. ತಕ್ಷಣ ಪ್ರತಿ ತಾಲೂಕಿನ ಆಯಕಟ್ಟಿನ ಜಾಗ, ಬಸ್ ನಿಲ್ದಾಣ, ಮಾರ್ಕೆಟ್ ಜಾಗದಲ್ಲಿ ಸಿಸಿಟಿವಿ ಮತ್ತು ಭದ್ರತಾ ತಂತ್ರಜ್ಞಾನ ಅಳವಡಿಸ್ಬೇಕು ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು.