ರೈತರ ಜಾಗ ಒತ್ತುವರಿ: ಶೃಂಗೇರಿ ಕ್ಷೇತ್ರ ಬಂದ್!
– ಕೊಪ್ಪ, ಎನ್. ಆರ್. ಪುರ, ಶೃಂಗೇರಿ ಸಂಪೂರ್ಣ ಸ್ತಬ್ದ
– ರೈತರ ಹೋರಾಟಕ್ಕೆ ಜನರ ಬೆಂಬಲ
– ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲವು ಸಂಪೂರ್ಣ ಬಂದ್
NAMMUR EXPRESS NEWS
ಶೃಂಗೇರಿ: ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ರೈತರ ಜಾಗ ಒತ್ತುವರಿ ವಿರೋಧಿಸಿ ಕರೆ ಕೊಟ್ಟಿರುವ ಶೃಂಗೇರಿ ಕ್ಷೇತ್ರ ಬಂದ್ ಯಶಸ್ವಿಯಾಗಿದೆ.
ಕೊಪ್ಪ, ಎನ್. ಆರ್. ಪುರ, ಶೃಂಗೇರಿ ತಾಲೂಕು ಸಂಪೂರ್ಣ ಸ್ತಬ್ದವಾಗಿದ್ದು ಪಕ್ಷಾತೀತವಾಗಿ ಹೋರಾಟ ಕಂಡು ಬಂತು. ಸಾವಿರಾರು ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಭಾಗಿಯಾದರು.
ಅಂಗಡಿ ಮುಂಗಟ್ಟುಗಳು ಬಂದ್
ಮೂರು ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬಸ್ ಸೇವೆ ಸಂಪೂರ್ಣ ಬಂದ್ ಆಗಿದ್ದವು. ಶಾಲಾ ಕಾಲೇಜುಗಳಿಗೆ ಕೆಲವೆಡೆ ರಜೆ ಘೋಷಣೆ ಮಾಡಲಾಗಿತ್ತು. ಎಲ್ಲೆಡೆ ಜನ ಸ್ವಯಂ ಪ್ರೇರಿತರಾಗಿ ಹೋರಾಟದಲ್ಲಿ ಭಾಗಿಯಾದರು.
ಜನ ಸ್ಪಂದನೆಯತ್ತ ರೈತರ ಹೋರಾಟ
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೂ ಹೋರಾಟ ವ್ಯಾಪಿಸುತ್ತಿದ್ದು, ಶೃಂಗೇರಿ ಕ್ಷೇತ್ರದಲ್ಲಿ ಜನ ಸಿದ್ಧತೆ ನಡೆಸಿದ್ದಾರೆ.
ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲವು ಸಂಪೂರ್ಣ ಬಂದ್ ಆಗಿತ್ತು. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕು ಕೇಂದ್ರಗಳು, ಖಾಂಡ್ಯ ಹೋಬಳಿ ಹಾಗೂ 3 ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳೂ ಬಂದ್ ಆಗಿದ್ದವು.
ಮೂರು ಪಕ್ಷಗಳ ಬೆಂಬಲ!
ರೈತ ಪರ ಹೋರಾಟಕ್ಕೆ ಮೂರು ಪಕ್ಷಗಳ ನಾಯಕರು ಬಂದ್ ಅಲ್ಲಿ ಪಾಲ್ಗೊಂಡರು. ಶೃಂಗೇರಿ ಶಾಸಕ ರಾಜೇಗೌಡ, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ಜೀವರಾಜ್, ಜೆಡಿಎಸ್ ನಾಯಕ ಸುಧಾಕರ್ ಶೆಟ್ಟಿ ಸೇರಿದಂತೆ ಎಲ್ಲಾ ಪಕ್ಷದ ನಾಯಕರು, ಹೋರಾಟಗಾರರು ಭಾಗವಹಿಸಿದ್ದರು.
ಅರಣ್ಯ ಸಚಿವರಿಗೆ ಮನವಿ ನೀಡಲು ಸಿದ್ಧತೆ
ಶಾಸಕ ರಾಜೇಗೌಡ ಮಾತನಾಡಿ, ಅರಣ್ಯ ಸಚಿವರಿಗೆ ಮಲೆನಾಡ ಈ ಸಮಸ್ಯೆ ಬಗ್ಗೆ ಮನವಿ ಮಾಡಲಾಗುವುದು ಎಂದರು.